ವಿಜಯಪುರ ಸಾವಯವ ಕೃಷಿ ಆಧಾರಿತ ತರಕಾರಿ ಮಾರುಕಟ್ಟೆಯಲ್ಲಿ ರೈತರನ್ನು ಬಿಜೆಪಿಯಿಂದ ಸನ್ಮಾನಿಸಲಾಯಿತು. ತಾಲೂಕು ಮಂಡಲ ಅಧ್ಯಕ್ಷ ಎಲ್.ಎನ್ ಅಂಬರೀಶ್ಗೌಡ, ತಾಲೂಕು ಕಾರ್ಯದರ್ಶಿ (ಧರ್ಮಪುರ) ಅನಿಲ್, ಟೌನ್ ಬಿಜೆಪಿ ಅಧ್ಯಕ್ಷ ವೆಂಕಟೇಶ ಪ್ರಭು, ಕಾರ್ಯದರ್ಶಿ ಶಾಮಣ್ಣ, ತಾಲೂಕು ಮಾಜಿ ಕಾರ್ಯದರ್ಶಿ ರವಿಕುಮಾರ್, ಬೆಂ. ಗ್ರಾಮಾಂತರ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ನಾಗವೇಣಿ, ಉಪಾಧ್ಯಕ್ಷರಾದ ರಾಮಕೃಷ್ಣ ಹೆಗಡೆ, ರಾಮು, ಭಗವಾನ್ ಇದ್ದರು.
ವಿಜಯಪುರ : ಅಧಿಕ ಇಳುವರಿ ಪಡೆಯಬೇಕೆಂಬ ಆಸೆಯಿಂದ ಹೆಚ್ಚಾಗಿ ರಾಸಾಯನಿಕಗಳನ್ನು ಭೂಮಿಗೆ ಹಾಕಿ ಭೂತಾಯಿ ಒಡಲನ್ನು ಬಂಜರು ಮಾಡುತ್ತಿದ್ದೇವೆ. ಅಲ್ಲದೇ ಆ ವಿಷಪೂರಿತ ಆಹಾರವನ್ನು ಸೇವಿಸಿ ನಮ್ಮ ಆರೋಗ್ಯಕ್ಕೂ ಹಾನಿ ಮಾಡಿಕೊಳ್ಳುತ್ತಿದ್ದೇವೆ. ಇದನ್ನು ನಿಲ್ಲಿಸಿ, ನಾವೆಲ್ಲರೂ ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕಿದೆ ಎಂದು ದೇವನಹಳ್ಳಿ ಮಂಡಲ ಬಿಜೆಪಿ ಅಧ್ಯಕ್ಷ ನೀಲೇರಿ ಎಲ್.ಎನ್.ಅಂಬರೀಶ್ ಗೌಡ ತಿಳಿಸಿದರು.
ಇಲ್ಲಿನ ಬಸವೇಶ್ವರ ನಗರದ ಶ್ರೀ ವಿನಾಯಕ ದೇಗುಲ ಆವರಣದಲ್ಲಿನ ಸಾವಯವ ಮಾರುಕಟ್ಟೆಯಲ್ಲಿ ಸಾವಯವ ತರಕಾರಿಗಳನ್ನು ಮಾರಾಟ ಮಾಡುವ ರೈತರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಸ್ವದೇಶಿ ಗೊಬ್ಬರ ಬಳಸಿ : ರಾಸಾಯನಿಕಮುಕ್ತ ಬೇಸಾಯದ ಮಹತ್ವವನ್ನು ವಿವರಿಸಿದ ಅಂಬರೀಶ್ ಗೌಡ, ರೈತರು ತೋಟ&ಕಚೇರಿಗಳಲ್ಲಿಯೇ ದೊರೆಯುವ ಕೊಟ್ಟಿಗೆ ಗೊಬ್ಬರ ಮತ್ತಿತರ ನೈಸರ್ಗಿಕ ಸಾವಯವ ಗೊಬ್ಬರಗಳನ್ನು ಬಳಸಿ ಬೇಸಾಯ ಮಾಡಬೇಕು. ಇದರಿಂದ ಆರಂಭದಲ್ಲಿ ಫಸಲು ಸ್ವಲ್ಪ ಕಡಿಮೆ ಬಂದರೂ, ಉತ್ತಮ ಗುಣಮಟ್ಟದ ಹಾಗೂ ಆರೋಗ್ಯದಾಯಕ ಆಹಾರ ನಮ್ಮದಾಗುತ್ತದೆ ಎಂದರು.
ವಿದೇಶಿ ಅವಲಂಬನೆಗೆ ಮುಕ್ತಿ : ಹೊರದೇಶಗಳಿಂದ ಆಮದು ಮಾಡಿಕೊಳ್ಳುವ ರಾಸಾಯನಿಕ ಗೊಬ್ಬರಗಳ ಮೇಲಿನ ಅವಲಂಬನೆ ದೇಸಿ ಕೃಷಿ ಪದ್ಧತಿಯಿಂದ ತಪ್ಪುತ್ತದೆ. ಇದು ಆತ್ಮನಿರ್ಭರ ಭಾರತದ ಆಶಯವನ್ನು ಈಡೇರಿಸುವಲ್ಲಿ ಪ್ರಮುಖ ಹೆಜ್ಜೆಯಾಗಿದೆ ಎಂದರು. ರಾಸಾಯನಿಕಮುಕ್ತ ತರಕಾರಿಗಳನ್ನು ಮಾರಾಟ ಮಾಡುವ ರೈತರನ್ನು ಸನ್ಮಾನಿಸಿ, ಗೌರವಿಸಲಾಯಿತು. ಮುಖಂಡ ಗಿರೀಶ್ ಆರಾಧ್ಯ, ಮಹಿಳಾ ಮೋರ್ಚಾದ ವೀಣಾ, ಭಾಗ್ಯಮ್ಮ, ಪ್ರೇಮಾ ದೇವರಾಜ್, ಮಾರುಕಟ್ಟೆಯ ದಿನೇಶ್, ವೆಂಕಟರೆಡ್ಡಿ, ಅವತಿ ಅನಿಲ್ ಕುಮಾರ್ ಇದ್ದರು.