ಮೌಲಾನಾ ಆಜಾದ್ ವಸತಿ ಶಾಲೆ ಸ್ಥಳಾಂತರಿಸಿ

ಜಾಲಹಳ್ಳಿಯ ಮೌಲಾನಾ ಆಜಾದ್ ವಸತಿ ಶಾಲೆ ಮುಂದೆ ವಿದ್ಯಾರ್ಥಿಗಳು  ಪ್ರತಿಭಟನೆ ನಡೆಸಿದರು. ಎಸ್‌ಎಫ್‌ಐ ತಾಲೂಕು ಅಧ್ಯಕ್ಷ ಮಹಾಲಿಂಗ ದೊಡ್ಡಮನಿ, ಮುಖಂಡರಾದ ಸಂತೋಷ ತ್ಯಾಪ್ತಿ, ಶಬ್ಬೀರ್ ಜಾಲಹಳ್ಳಿ, ನರಸಣ್ಣ ನಾಯಕ ಇತರರಿದ್ದರು.
ಜಾಲಹಳ್ಳಿಯ ಮೌಲಾನಾ ಆಜಾದ್ ವಸತಿ ಶಾಲೆ ಮುಂದೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಎಸ್‌ಎಫ್‌ಐ ತಾಲೂಕು ಅಧ್ಯಕ್ಷ ಮಹಾಲಿಂಗ ದೊಡ್ಡಮನಿ, ಮುಖಂಡರಾದ ಸಂತೋಷ ತ್ಯಾಪ್ತಿ, ಶಬ್ಬೀರ್ ಜಾಲಹಳ್ಳಿ, ನರಸಣ್ಣ ನಾಯಕ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಾಲಹಳ್ಳಿಯಲ್ಲಿ ಎಸ್‌ಎಫ್‌ಐ-ವಿದ್ಯಾರ್ಥಿಗಳ ಪ್ರತಿಭಟನೆ
ದೇವದುರ್ಗ: ಜಾಲಹಳ್ಳಿ ಸರ್ಕಾರಿ ಮೌಲಾನಾ ಆಜಾದ್ ಶಾಲೆಯನ್ನು ಸುರಕ್ಷಿತ ಕಟ್ಟಡಕ್ಕೆ ಸ್ಥಳಾಂತರಿಸಬೇಕೆಂದು ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ನೇತೃತ್ವದಲ್ಲಿ ವಿದ್ಯಾರ್ಥಿಗಳು ಶನಿವಾರ ವಸತಿ ಶಾಲೆ ಮುಂದೆ ಪ್ರತಿಭಟನೆ ನಡೆಸಿದರು.
ಶಾಲೆ ಹಲವು ವರ್ಷಗಳಿಂದ ಖಾಸಗಿ ಕಟ್ಟಡದಲ್ಲಿ ನಡೆಯುತ್ತಿದ್ದು ವಿದ್ಯಾರ್ಥಿಗಳು ಹಲವು ಕೊರತೆ ನಡುವೆ ಶಿಕ್ಷಣ ಪಡೆಯುತ್ತಿದ್ದಾರೆ. ಮುಖ್ಯರಸ್ತೆಗೆ ಹೊಂದಿಕೊಂಡಿರುವುದರಿಂದ ಅಭದ್ರತೆ ಕಾಡುತ್ತಿದೆ. ಶುದ್ಧ ಕುಡಿವ ನೀರು, ಸಮರ್ಪಕ ಶೌಚಗೃಹ, ಆಟದ ಮೈದಾನ ಸೇರಿ ಮೂಲ ಸೌಕರ್ಯಗಳ ಕೊರತೆಯಿದೆ. 
ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಶಾಲೆಯನ್ನು ಜಾಲಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಟ್ಟಡಕ್ಕೆ ಸ್ಥಳಾಂತರಿಸಬೇಕು. ಅಗತ್ಯ ಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು. 
ಎಸ್‌ಎಫ್‌ಐ ತಾಲೂಕು ಅಧ್ಯಕ್ಷ ಮಹಾಲಿಂಗ ದೊಡ್ಡಮನಿ, ಮುಖಂಡರಾದ ಸಂತೋಷ ತ್ಯಾಪ್ತಿ, ಶಬ್ಬೀರ್ ಜಾಲಹಳ್ಳಿ, ನರಸಣ್ಣ ನಾಯಕ, ಮೌನೇಶ ಜಾಲಹಳ್ಳಿ, ರಿಯಾಜ್ ಆರ್ತಿ, ಬಸವರಾಜ ಲಿಂಗದಹಳ್ಳಿ, ಮೆಹಬೂಬ್ ಕುರಕುಂದಿ, ಯಲ್ಲಪ್ಪ ಸುಣ್ಣದಕಲ್, ಹನುಮಂತ ಸುಣ್ಣದಕಲ್, ಶಿವು ಊಟಿ, ಸುರೇಶ್, ರಿಯಾಜ್, ಅಮೀರ್ ಪಾಟೀಲ್ ಇತರರಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net