ಮತ್ತಿಘಟ್ಟ ಸಹಕಾರ ಸಂಘಕ್ಕೆ 9.44 ಲಕ್ಷ ರೂ. ಲಾಭ

ಚಿಕ್ಕನಾಯಕನಹಳ್ಳಿ ತಾಲೂಕು Cooperative Society ಮತ್ತಿಘಟ್ಟ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಸಂಘದ ಅಧ್ಯಕ್ಷ ಟಿ.ಎಂ.ಹರೀಶ್​, ಉಪಾಧ್ಯಕ್ಷ ವಸಂತ, ವಿಸ್ತರಣಾಧಿಕಾರಿ ಸಿದ್ಧಲಿಂಗಸ್ವಾಮಿ, ಉಪ ವ್ಯವಸ್ಥಾಪಕ ಜಿ.ಎಸ್​.ಮೋಹನ್​ ಕುಮಾರ್​, ಸಿಇಒ ಚಂದ್ರಶೇಖರ್​, ಸಿಬ್ಬಂದಿ ಹರೀಶ್​, ಸುಪ್ರೀತ್​ ಇದ್ದರು.

Published on
ಹಂದನಕೆರೆ: ಚಿಕ್ಕನಾಯಕನಹಳ್ಳಿ ತಾಲೂಕು ಮತ್ತಿಘಟ್ಟ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ಸಾಮಾನ್ಯ ಸಭೆ ಹಮ್ಮಿಕೊಳ್ಳಲಾಗಿತ್ತು.
ತುಮಕೂರು ಒಕ್ಕೂಟದ ನಿರ್ದೇಶಕ ಬಿ.ಎಂ.ಶಿವಪ್ರಕಾಶ್​ ಮಾತನಾಡಿ, 45 ವರ್ಷದ ಇತಿಹಾಸ ಹೊಂದಿರುವ ಮತಿಟ್ಟ ಸಂ ಉತ್ತಮ ರೀತಿಯಲ್ಲಿ ಸಾಧನೆ ಮಾಡಿದ್ದು, 18.98 ಲಕ್ಷ ರೂ. ವಾರ್ಷಿಕ ಆದಾಯ, 7.98 ಲಕ್ಷ ರೂ. ಸಂಘದ ವಾರ್ಷಿಕ ಖರ್ಚು, 9.44 ಲಕ್ಷ ರೂ. ಲಾಭ ಪಡೆದಿದೆ ಎಂದು ತಿಳಿಸಿದರು.
ಒಕ್ಕೂಟದಿಂದ ಹಸುಗಳಿಗೆ ಇನ್ಶೂರೆನ್ಸ್​ 50 ಸಾವಿರದಿಂದ 70 ಸಾವಿರಕ್ಕೆ ಹೆಚ್ಚಿಸಿದ್ದೇವೆ ಮತ್ತು ಹಾಲು ಹಾಕುವ ರೈತರು ಮರಣ ಹೊಂದಿದರೆ 50 ಸಾವಿರ ರೂ. ನೀಡಲಾಗುವುದು ಮತ್ತು ರೈತರ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ತುಮಕೂರಿನಲ್ಲಿ ಹಾಸ್ಟೆಲ್​ ವ್ಯವಸ್ಥೆ ಮಾಡಲಾಗಿದೆ. ರೈತರಿಗೆ ಹಾಲು ಕರೆಯುವ ಯಂತ್ರ ಮತ್ತು ಮೇವು ಕಟ್​ ಮಾಡುವ ಯಂತ್ರ ಸಬ್ಸಿಡಿ ದರದಲ್ಲಿ ಕೊಡುತ್ತಿದ್ದೇವೆ ಎಂದರು. Cooperative Society
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net