ಬಾಗೇಪಲ್ಲಿ ಪಟ್ಟಣದಲ್ಲಿ ಮಡಿವಾಳ ಸಮುದಾಯದ ಪೂರ್ವಭಾವಿ ಸಭೆಯಲ್ಲಿ ಪ್ರತಿಭಟನೆಯ ಕರಪತ್ರ ಬಿಡುಗಡೆ ಮಾಡಲಾಯಿತು.ಮಡಿವಾಳ ಸಮುದಾಯ ಮುಖಂಡರಾದ ಎಲ್.ರವಣಪ್ಪ, ಬಿಳ್ಳೂರು ರಾಮು, ಗುರಾಲದಿನ್ನ ಮಂಜುನಾಥ, ವೆಂಕಟರಾಮು, ರಾಮಚಂದ್ರಪ್ಪ, ಎಲ್.ವೆಂಕಟೇಶ್, ಎಸ್.ವಿ.ಮಲ್ಲಪ್ಪ, ಅಶೋಕ್, ಬಾಲಾಜಿ, ಎಸ್.ಎಂ.ನವೀನ್ ಇದ್ದರು.
ಬಾಗೇಪಲ್ಲಿ :ಶೈಕ್ಷಣಿಕ ಹಾಗೂ ರಾಜಕೀಯವಾಗಿ ಹಿಂದುಳಿದಿರುವ ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರ್ಪಡೆ ಮಾಡದಿದ್ದರೆ ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸಬೇಕಾಗುತ್ತೆ ಎಂದು ಮಡಿವಾಳ ಸಂದ ತಾಲೂಕು ಅಧ್ಯಕ್ಷ ಬಿ.ಎಸ್.ಸುರೇಶ್ ಸರ್ಕಾರಕ್ಕೆ ಎಚ್ಚರಿಸಿದರು.
ಪಟ್ಟಣದ ಶ್ರೀ ಶಿರಡಿ ಸಾಯಿಬಾಬಾ ಮಂದಿರದ ಬಳಿ ತಾಲೂಕು ಮಡಿವಾಳ ಸಂದ ಪದಾಧಿಕಾರಿಗಳು ಸೆ.9ರ ಬೃಹತ್ ಪ್ರತಿಭಟನೆ ಕುರಿತು ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಮಡಿವಾಳ, ಅಗಸ, ರಜಕ, ಸಾಕಲ, ಪರೀಟ್ ಸಮುದಾಯಗಳು ಹಲವು ವರ್ಷಗಳಿಂದ ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದಿದ್ದು ಸಮುದಾಯದ ಅಭಿವೃದ್ಧಿಗಾಗಿ ಸಮುದಾಯವನ್ನು ಎಸ್ಸಿ ಜಾತಿ ಪಟ್ಟಿಗೆ ಸೇರ್ಪಡೆಗೊಳಿಸುವಂತೆ ಸಂದಿಂದ ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದೆ.
ಆದರೇ ಸರ್ಕಾರ ಹೋರಾಟಕ್ಕೆ ಸಕಾರತ್ಮಕವಾಗಿ ಸ್ಪಂದಿಸದ ಹಿನ್ನಲೆಯಲ್ಲಿ ರಾಜ್ಯ ಮಡಿವಾಳ ಸಂದ ಕರೆಯಂತೆ ಜಿಲ್ಲಾ ಮತ್ತು ತಾಲೂಕು ಸಂಗಳ ನೇತೃತ್ವದಲ್ಲಿ ಸೆ.9ರಂದು ಬೆಳಗ್ಗೆ ಚಿಕ್ಕಬಳ್ಳಾಪುರ ಅಂಬೇಡ್ಕರ್ ಭವನದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.