ಅಚ್ಚಮ್ಮನಹಳ್ಳಿ ಕೆರೆಯಲ್ಲಿ ಜಾಲಿ ಮರಗಳ ಮಾರಣಹೋಮ Tree

Tree
Tree
Published on

ಪ್ರಮುಖ ಮುಖ್ಯಾಂಶಗಳು

  • ಮರ ಕಡಿಸಿ ಇದ್ದಿಲು ಮಾಡುತ್ತಿರುವ ವ್ಯಾಪಾರಿ
  • ಕೆರೆ ಅಭಿವೃದ್ಧಿ ಸಮಿತಿಯಿಂದ ಮಾರಾಟ ಆರೋಪ
ಪಾವಗಡ: ಜೋಡಿ ಅಚ್ಚಮ್ಮನಹಳ್ಳಿ ಕೆರೆಯಂಗಳದ ಜಾಲಿ ಮರಗಳನ್ನು Tree ಖಾಸಗಿಯವರು ಕಡಿದು ಮಾರಣ ಹೋಮ ಮಾಡುತ್ತಿದ್ದಾರೆ.
ಜಾಲಿ ಮರಗಳನ್ನು ಮಹಾರಾಷ್ಟ್ರ ಮೂಲದ ವ್ಯಾಪಾರಿ ರಮೇಶ್​ ಎಂಬಾತ ಕಡಿಸಿ ಇದ್ದಿಲು ಮಾಡುತ್ತಿದ್ದು, ಈ ಬಗ್ಗೆ ಕೇಳಿದ್ದಕ್ಕೆ ಅವುಗಳನ್ನು ಖರೀದಿಸಿದ್ದೇನೆ ಎಂಬ ಉತ್ತರ ನೀಡುತ್ತಿದ್ದಾನೆ ಎಂದು ಸ್ಥಳಿಯರು ದೂರಿದ್ದಾರೆ.
ಕೆರೆ ಅಭಿವೃದ್ಧಿ ಸಮಿತಿ ಸದಸ್ಯರು ಎಂದು ಹೇಳಿಕೊಳ್ಳುವವರು ಕೆರೆಯಲ್ಲಿನ ಜಾಲಿ ಮರಗಳನ್ನು ಖಾಸಗಿ ವ್ಯಾಪಾರಸ್ಥರಿಗೆ ಮಾರಾಟ ಮಾಡಿದ್ದಾರೆ. ವ್ಯಾಪಾರಿಯು ಮರಗಳನ್ನು ಬುಡಸಮೇತ ಕಟಾವು ಮಾಡಿ ಇದ್ದ್ದಿಲು ಮಾಡುತ್ತಾ, ಲಾಭ ಗಳಿಸುತ್ತಿದ್ದಾರೆ ಎಂಬುದು ಗ್ರಾಮಸ್ಥರ ಆರೋಪ.
ಕೆರೆಯಲ್ಲಿ ಮರಗಳನ್ನು ಕಡಿದು ಇದ್ದಿಲು ಸುಡಲು ತಮಗೆ ಅನುಮತಿ ನೀಡಿದ್ದು ಯಾರು ಎಂದು ವ್ಯಾಪಾರಿ ರಮೇಶ್​ ಅವರನ್ನು ಪ್ರಶ್ನಿಸಿದ್ದಕ್ಕೆ, ಆತ ಅಚ್ಚಮ್ಮನಹಳ್ಳಿ ಲಿಂಗಪ್ಪ ಎಂಬುವವರು ಅನುಮತಿ ನೀಡಿದ್ದಾರೆ. ಅವರಿಗೆ ನಾವು 80 ಸಾವಿರ ರೂ. ನೀಡಿದ್ದೇವೆ ಎಂದು ತಿಳಿಸಿದ್ದಾರೆ ಎಂದು ಸ್ಥಳಿಯ ಮೆಗಲಪಾಳ್ಯ ಕುರಿಗಾಯಿ ಶಿವಪ್ಪ ಮಾಹಿತಿ ನೀಡಿದರು.
ಕೆರೆ ಅಭಿವೃದ್ಧಿಯ ಸಮಿತಿ ಅಧ್ಯಕ್ಷ ಎಂದು ಹೇಳಿಕೊಳ್ಳುತ್ತಿರುವ ವ್ಯಕ್ತಿಯೊಬ್ಬ ಈ ಬಗ್ಗೆ ದರ್ಪದಿಂದ ವರ್ತಿಸುತ್ತಾ, ನಿಮಗೆ ಬೇಕಾದ ಕಡೆ ದೂರು ಕೊಡಿ. ಇದು ನಮ್ಮ ಸಮಿತಿಗೆ ಸೇರಿದೆ ಎಂಬ ಉತ್ತರ ನೀಡಿದ್ದಾರೆ.
ಸ್ಥಳಕ್ಕೆ ಧಾವಿಸಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮುದ್ದಣ್ಣ, ಕೆರೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಇದು ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಒಳಪಡುತ್ತದೆ ಎಂದರು. ಇಂಜಿನಿಯರ್​ ಬಸವಲಿಂಗ ಜಿಲ್ಲಾ ಪಂಚಾಯಿತಿಗೆ ಕರೆ ಮಾಡಿ ವಿಷಯ ತಿಳಿಸಿದಾಗ ಸ್ಥಳಕ್ಕೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಜೋಡಿ ಅಚ್ಚಮ್ಮನಹಳ್ಳಿ ಕೆರೆಯು ಇಲಾಖೆಯಡಿ ಬರುತ್ತಿದ್ದು, ಕೆರೆ ಅಭಿವೃದ್ಧಿಗೆ ಸಂಘ ಇದೆಯೋ ಇಲ್ಲವೋ ತಿಳಿಯದು. ಇದ್ದರೆ ಅದರ ಇತಿ&ಮಿತಿ ಏನು ಎಂಬುದನ್ನುತಿಳಿದುಕೊಂಡು ಸ್ಥಳಕ್ಕೆ ಭೇಟಿ ನೀಡಿ, ಅವರು ಯಾವ ಆಧಾರದ ಮೇಲೆ ಅನುಮತಿ ನೀಡಿದ್ದಾರೆ ಎಂದು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.
> ಬಸವಲಿಂಗಪ್ಪ, ಎಇ, ಜಿಲ್ಲಾ ಪಂಚಾಯಿತಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net