ಮಾರುತಿ ದೇವರ ಓಕುಳಿ ಇಂದಿನಿಂದ

ಮಾರುತಿ ದೇವರು
ಮಾರುತಿ ದೇವರು
Published on
ಮಮದಾಪುರ: ಗೋಕಾಕ ತಾಲೂಕಿನ ಮಕ್ಕಳಗೇರಿ ಗ್ರಾಮದಲ್ಲಿ ಮೇ 23ರಿಂದ 24ರವರೆಗೆ ಮಾರುತಿ ದೇವರ ಓಕುಳಿ ಮಹೋತ್ಸವ ಜರುಗಲಿದೆ. ಮೇ 23ರಂದು ಬೆಳಗ್ಗೆ 7 ಗಂಟೆಗೆ ಮಾರುತಿ ದೇವರ ಗದ್ದುಗೆಗೆ ರುದ್ರಾಭಿಷೇಕ ಹಾಗೂ ಎಲೆಪೂಜೆ ನೆರವೇರಿಸಲಾಗುವುದು. ಬೆಳಗ್ಗೆ 10 ಗಂಟೆಗೆ ದೇವರ ಪಲ್ಲಕ್ಕಿಗಳನ್ನು ಬರಮಾಡಿಕೊಳ್ಳಲಾಗುವುದು. ಬಳಿಕ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಲಿವೆ. ಮಧ್ಯಾಹ್ನ 12ಕ್ಕೆ ಗ್ರಾಮಸ್ಥರಿಂದ ನೈವೇದ್ಯ ಅರ್ಪಣೆ ನಡೆಯಲಿದೆ. ಸಂಜೆ 5 ಗಂಟೆಗೆ ಓಕುಳಿ ಪ್ರಾರಂಭವಾಗಲಿದೆ. ರಾತ್ರಿ 10ಕ್ಕೆ ಬನಹಟ್ಟಿಯ ಲಕ್ಷ್ಮೀದೇವಿ ನಾಟ್ಯ ಸಂಘ ‘ಅಣ್ಣನ ಕಣ್ಣೀರು’ ನಾಟಕ ಪ್ರದರ್ಶನಗೊಳ್ಳಲಿದೆ. ಮೇ 24ರಂದು ಬೆಳಗ್ಗೆ 9 ಗಂಟೆಗೆ ಪಲ್ಲಕ್ಕಿ ಉತ್ಸವ ನಡೆಯಲಿದೆ. ಬಳಿಕ 11 ಗಂಟೆಗೆ ಎಲ್ಲ ದೇವರ ಪಲ್ಲಕ್ಕಿಗಳನ್ನು ಬೀಳ್ಕೊಡುವ ಕಾರ್ಯಕ್ರಮ. ಸಂಜೆ 4 ಗಂಟೆಗೆ ಕುಸ್ತಿ ಸ್ಪರ್ಧೆ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಅಮರನಾಥ ಜಾರಕಿಹೊಳಿ, ಮುಖಂಡ ಭೀಮನಗೌಡ ಪೊಲೀಸಗೌಡರ, ಜಿಪಂ ಮಾಜಿ ಸದಸ್ಯರಾದ ಟಿ.ಆರ್.ಕಾಗಲ್, ಮಡ್ಡ್ದೆಪ್ಪ ತೋಳಿನವರ, ಗ್ರಾಂ ಪಂ ಮಾಜಿ ಸದಸ್ಯ ಸುರೇಶ ಸನದಿ ಪಾಲ್ಗೊಳ್ಳಲಿದ್ದಾರೆ ಎಂದು ಅರ್ಚಕ ಯಲಗೌಡ ಪಾಟೀಲ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net