ಬಾಗೇಪಲ್ಲಿ ಮೂಲದ ಟೇಲರ್ ರಮೇಶ್ (46) ಆರೋಪಿ. 20 ವರ್ಷದ ಯುವತಿ ಟೇಲರ್ ಕೆಲಸಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಪರಿಚಯಿಸಿಕೊಂಡು ಪ್ರೀತಿಯ ನಾಟಕವಾಡಿದ್ದು ರಹಸ್ಯವಾಗಿ ತಾಳಿ ಕಟ್ಟಿದ ಬಳಿಕ ಬೆಂಗಳೂರಿನಲ್ಲಿ ಬಾಡಿಗೆ ಮನೆಯೊಂದರಲ್ಲಿ ಯುವತಿಯೊಂದಿಗೆ ಸಂಸಾರ ನಡೆಸಿದ್ದಾನೆ. ಕೊನೆಗೆ ಆಕೆಗೆ ಕೈ ಕೊಟ್ಟು ಬಾಗೇಪಲ್ಲಿಗೆ ವಾಪಸ್ಸಾಗಿದ್ದು ಇದರಿಂದ ಸಂತ್ರಸ್ತೆಯು ನ್ಯಾಯಕ್ಕಾಗಿ ಠಾಣೆ ಮೆಟ್ಟಿಲೇರಿದ್ದಾಳೆ.