ಇಂದಿನ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಉತ್ಪನ್ನದ ಗುಣಮಟ್ಟ ಮಾತ್ರವಲ್ಲ, ಅದರ ಪ್ಯಾಕೇಜಿಂಗ್, ಬ್ರಾಂಡಿಂಗ್, ಬೆಲೆ ನಿಗದಿ ಹಾಗೂ ಗ್ರಾಹಕರಿಗೆ ತಲುಪುವ ವಿಧಾನವೂ ಬಹಳ ಮುಖ್ಯವಾಗಿದೆ. ಸ್ಥಳಿಯವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ವಿಭಿನ್ನ ಹಾಗೂ ಆಕರ್ಷಕ ಉತ್ಪನ್ನಗಳನ್ನು ತಯಾರಿಸಿದರೆ ಮಹಿಳೆಯರು ಸ್ವಾವಲಂಬಿ ಉದ್ಯಮಿಗಳಾಗಿ ಬೆಳೆದು ನಿಲ್ಲಬಹುದು ಎಂದು ಸಲಹೆ ನೀಡಿದರು.