ಕಾಂಗ್ರೆಸ್ ಪಕ್ಷವು ಇತಿಹಾಸದ ಪುಟಗಳಿಂದಲೂ ದಲಿತ ನಾಯಕರನ್ನು ನಯವಂಚನೆಯಿಂದ ಕಡೆಗಣಿಸುತ್ತಾ ಬಂದಿದೆ ಎಂದು ಒಕ್ಕೂಟವು ಆರೋಪಿಸಿದೆ. ಈ ಹಿಂದೆ ದಿ. ಬಿ.ಬಸವಲಿಂಗಪ್ಪ, ಕೆ.ಹೆಚ್.ರಂಗನಾಥ್, ಬಿ.ರಾಚಯ್ಯ, ಎನ್.ರಾಚಯ್ಯ, ಶ್ರೀನಿವಾಸ್ ಪ್ರಸಾದ್, ಮತ್ತು ಟಿ.ಎ. ನರಸಿಂಹಮೂರ್ತಿ ಅವರಂತಹ ಹತ್ತಾರು ಪ್ರಭಾವಿ ಮುಖಂಡರಿಗೆ ಅನ್ಯಾಯ ಮಾಡಲಾಗಿತ್ತು. ಈಗಿನ ಕಾಲದಲ್ಲೂ ಶ್ರೀ ಮಲ್ಲಿಕಾರ್ಜುನ ಖರ್ಗೆ, ಡಾ. ಜಿ.ಪರಮೇಶ್ವರ್, ಡಾ. ಹೆಚ್.ಸಿ. ಮಹದೇವಪ್ಪ ಹಾಗೂ ಕೆ.ಹೆಚ್. ಮುನಿಯಪ್ಪ ಅವರಂತಹ ಹಿರಿಯ ನಾಯಕರನ್ನು ಮುಖ್ಯಮಂತ್ರಿ ಹುದ್ದೆಗೆ ಪರಿಗಣಿಸದೆ ಪಕ್ಷವು ಸತತವಾಗಿ ದಲಿತ ವಿರೋಧಿ ಧೋರಣೆಯನ್ನು ಮುಂದುವರಿಸಿದೆ ಎಂದು ಮುಖಂಡರು ದೂರಿದ್ದಾರೆ.