ದೇವಾಲಯದ ಟ್ರಸ್ಟಿ ಕೆಪಿಸಿಸಿ ಸದಸ್ಯ ಎ.ಚಿನ್ನಪ್ಪ ಮಾತನಾಡಿ, ಮಾರಮ್ಮ ದೇವಿ ದೇವಾಲಯದ ಜೀಣೋರ್ದ್ಧಾರದ ಬಳಿಕ ವಾರ್ಷಿಕೋತ್ಸವ ವೇಳೆ ಎರಡು ದಿನ ವಿಶೇಷ ಅಲಂಕಾರ, ಹೋಮ&ಹವನ, ಮಹಿಳೆಯರಿಂದ ತಂಬಿಟ್ಟು ದೀಪಾರತಿ, ಬಲಿಪ್ರಧಾನ ಮಾಡಿ ಮಾರಮ್ಮನ ಜತೆ ಗಂಗಮ್ಮ, ದೊಡ್ಡಮ್ಮ, ಕಾಳಮ್ಮ, ಮುನೇಶ್ವರ ಸ್ವಾಮಿಯನ್ನು ಪೂಜಿಸಲಾಗುವುದು. ಎಲ್ಲದೇವರನ್ನು ಹೂವಿನ ರಥಗಳಲ್ಲಿ ಪ್ರತಿಷ್ಠಾಪಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುವುದು ಎಂದರು.