ತಾಲೂಕಿನ ಅರಿಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬುಧವಾರ ಬಿರುಗಾಳಿ ಸಮೇತ ಆಲಿಕಲ್ಲು ಮಳೆ ಬಿದ್ದಿರುವುದರಿಂದ ರೈತರ ತೋಟಗಳಲ್ಲಿ ಮಾವಿನ ಕಾಯಿಗಳು ಉದುರಿವೆ. ಈ ಬಾರಿ ರೋಗ, ಪಿಂದೆ ಉದುರಿದ್ದರಿಂದ ಶೇ.20ರಷ್ಟಾದರೂ ಬೆಳೆ ಕೈ ಸೇರುತ್ತದೆಂಬ ನಿರೀೆಯಲ್ಲಿ ಬೆಳೆಗಾರರಿದ್ದರು. ಆದರೆ, ಈಗ ರಣ ಮಳೆಗೆ ಕೊಯ್ಲಿಗೆ ಬಂದಿದ್ದ ಕಾಯಿ ನೆಲಕ್ಕುರುಳಿ ಮತ್ತಷ್ಟು ನಷ್ಟದ ಭೀತಿಗೆ ತಳ್ಳಿದೆ. ರಾಯಲ್ಪಾಡು, ಗೌನಿಪಲ್ಲಿ, ತಾಡಿಗೋಳ್, ರೋಣೂರು, ದೊಡಮಲದೊಡ್ಡಿ, ಆರಿಕುಂಟೆಯಲ್ಲಿ ಸಾಧಾರಣ ಮಳೆಯಾಗಿದೆ.