ಈ ಪ್ರಕರಣದ ಬಗ್ಗೆ ಮಂಡ್ಯ ಎಸ್ಪಿ ಶೋಭಾರಾಣಿಯವರು ಮಾಹಿತಿ ನೀಡಿದ್ದು, ಡೆತ್ನೋಟ್ ಪತ್ತೆಯಾಗಿರುವುದನ್ನು ತಿಳಿಸಿದ್ದಾರೆ. ಡೆತ್ನೋಟ್ನಲ್ಲಿ ಸಾಲಗಾರರ ಭಯ ಹಾಗೂ ಕಿರುಕುಳದಿಂದ ಸಾವಿನ ದಾರಿ ಹಿಡಿದಿರುವುದಾಗಿ ಪ್ರಭಾಕರ್ ಅವರು ಬರೆದಿದ್ದಾರೆ. ಅಲ್ಲದೆ, ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯ ಬಗ್ಗೆಯೂ ಡೆತ್ನೋಟ್ನಲ್ಲಿ ಉಲ್ಲೇಖಿಸಲಾಗಿದೆ.