ಖಾನಾಪುರ: ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರು ಗ್ರಾಮಗಳಲ್ಲಿ ಎಸ್ಐಆರ್ ನೋಂದಣಿ ಪ್ರಕ್ರಿಯೆ ಸರಿಯಾಗಿ ನಡೆಸಲಾಗುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ಮಾಜಿ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಹೇಳಿದರು. ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಬ್ಲಾಕ್ ಕಾಂಗ್ರೆಸ್ ಹಮ್ಮಿಕೊಂಡಿದ್ದ ಎಸ್ಐಆರ್ ನೋಂದಣಿ ತರಬೇತಿ ಶಿಬಿರದಲ್ಲಿ ಮಾತನಾಡಿ, ಎಸ್ಐಆರ್ಗೆ ನೋಂದಾಯಿಸಲು ವಿಲವಾದರೆ ಮತದಾನದ ಹಕ್ಕು ಕಳೆದುಕೊಳ್ಳಬೇಕಾಗುತ್ತದೆ. ಮಾತ್ರವಲ್ಲದೆ ಭವಿಷ್ಯದಲ್ಲಿ ರಾಷ್ಟ್ರೀಯತೆ ಮತ್ತು ಪೌರತ್ವದ ಬಗ್ಗೆ ಪ್ರಶ್ನೆ ತಲೆದೋರಬಹುದು. ಹೀಗಾಗಿ, ಗಂಭೀರ ತೊಡಕು ತಪ್ಪಿಸಲು ನಾಗರಿಕರು ಎಸ್ಐಆರ್ಗೆ ನೋಂದಾಯಿಸಿಕೊಳ್ಳಬೇಕು. ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಡಿ ಎಲ್ಲ ಸೌಲಭ್ಯ ಪಡೆಯಲು ಎಸ್ಐಆರ್ ನೋಂದಣಿ ಅಗತ್ಯವಾಗಿದೆ ಎಂದರು. ಕಾಂಗ್ರೆಸ್ ಉಸ್ತುವಾರಿ ಪಾರಸ್ಚಂದ್ರ ಜೈನ್, ಜಿಲ್ಲಾಧ್ಯ ವಿನಯ ನಾವಲಗಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯ ಈಶ್ವರ ಘಾಡಿ, ಮಹಾಂತೇಶ ರಾವುತ, ಸಾವಿತ್ರಿ ಮದಾರ, ದೀಪಾ ಪಾಟೀಲ, ವೈಷ್ಣವಿ ಪಾಟೀಲ, ಗೀತಾ ಅಂಬಲಗಟ್ಟಿ, ಮಧುಕರ ಕವಲೇಕರ, ತೋಹಿದ್ಚಂದ್ ಖಾನವರ, ದೀಪಕ ಕವತಂಕರ್, ಇಸಾಕ್ ಪಠಾಣ್, ಲಕ್ಷ$್ಮಣ ಮಾದಾರ, ಅನಿತಾ ದಂಡಲ್ಗಲ್ ಇತರರಿದ್ದರು.