ಮಾನಪ್ಪ- ಪರಮಣ್ಣರ ಕೊಡುಗೆ ಅಪಾರ

ಣ್ಯ ಮತ್ತು ನೀರಾವರಿ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಮಾನಪ್ಪ ಬೂದಗುಂಪಿ ಹಾಗೂ ಪರಮಣ್ಣ ಬೊಮ್ಮನಳ್ಳಿ ಅವರನ್ನು ಕಕ್ಕೇರಾದ ಸಂಗಮೇಶ್ವರ ಮಠದಲ್ಲಿ ಪ್ರಗತಿಪರ ಚಿಂತಕರು ಸನ್ಮಾನಿಸಿದರು. ಮಾನಯ್ಯ ಪೂಜಾರಿ, ದೇವಿಂದ್ರಪ್ಪ ಬಳಿಚಕ್ರ, ಸಂಗಣ್ಣ ವಿಶ್ವಕರ್ಮ, ಚಿದಾನಂದ ಬಡಿಗೇರ, ಶಿವಾನಂದ ಹೂಗಾರ, ಶ್ರೀನಿವಾಸ ಕತ್ರಕಿ ಇತರರಿದ್ದರು.
ಣ್ಯ ಮತ್ತು ನೀರಾವರಿ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಮಾನಪ್ಪ ಬೂದಗುಂಪಿ ಹಾಗೂ ಪರಮಣ್ಣ ಬೊಮ್ಮನಳ್ಳಿ ಅವರನ್ನು ಕಕ್ಕೇರಾದ ಸಂಗಮೇಶ್ವರ ಮಠದಲ್ಲಿ ಪ್ರಗತಿಪರ ಚಿಂತಕರು ಸನ್ಮಾನಿಸಿದರು. ಮಾನಯ್ಯ ಪೂಜಾರಿ, ದೇವಿಂದ್ರಪ್ಪ ಬಳಿಚಕ್ರ, ಸಂಗಣ್ಣ ವಿಶ್ವಕರ್ಮ, ಚಿದಾನಂದ ಬಡಿಗೇರ, ಶಿವಾನಂದ ಹೂಗಾರ, ಶ್ರೀನಿವಾಸ ಕತ್ರಕಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಚಿಂತಕ ದೇವಿಂದ್ರಪ್ಪ ಬಳಿಚಕ್ರ ಬಣ್ಣನೆ
  • ಕಕ್ಕೇರಾದಲ್ಲಿ ನಿವೃತ್ತ ನೌಕರರಿಗೆ ಸನ್ಮಾನ
 ಕಕ್ಕೇರಾ: ಅರಣ್ಯ ಇಲಾಖೆಯಲ್ಲಿ 38 ವರ್ಷಗಳ ಸೇವೆ ಸಲ್ಲಿಸಿದ ಮಾನಪ್ಪ ಬೂದಗುಂಪಿ ಹಾಗೂ ನೀರಾವರಿ ಇಲಾಖೆಯಲ್ಲಿ 33 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾದ ಪರಮಣ್ಣ(ಗೌಡಪ್ಪ)ಹೆಳವರ ಅವರ ಸೇವೆ ಅಪಾರವಾಗಿದೆ ಎಂದು ಚಿಂತಕ ದೇವಿಂದ್ರಪ್ಪ ಬಳಿಚಕ್ರ ಹೇಳಿದರು.
ಪಟ್ಟಣದ ಸಂಗಮೇಶ್ವರ ಮಠದಲ್ಲಿ ಸೋಮವಾರ ಪ್ರಗತಿಪರ ಚಿಂತಕರು ಆಯೋಜಿಸಿದ್ದ ನಿವೃತ್ತ ನೌಕರರಿಗೆ ಸರಳ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಸುಮಾರು 38 ವರ್ಷಗಳ ಹಿಂದೆ ತಿಂಗಳಿಗೆ ಕೇವಲ ಎರಡು ನೂರು ರೂ.ಗಳಿಗೆ ವೇತನದೊಂದಿಗೆ ಆರಂಭವಾಗಿ ಬದಲಾದ ಮಾಸಿಕ ವೇತನದಲ್ಲಿ ಪ್ರಾಮಾಣಿಕ, ದಕ್ಷತೆಯಿಂದ ನಮ್ಮೂರಿನ ಮಾನಪ್ಪ ಬೂದಗುಂಪಿಯವರು ಅರಣ್ಯ ಇಲಾಖೆಯಲ್ಲಿ ಸಸಿ, ಗಿಡ ಮರಗಳನ್ನು ತಮ್ಮ ಮಕ್ಕಳಂತೆ ಸಾಕಿ ಹೆಮ್ಮರವಾಗಿ ಇಂದು ಲಾಂತರ ಜನರ ಆಶ್ರಯವಾಗಲಿಕ್ಕೆ ಕಾರಣರಾಗಿದ್ದಾರೆ ಎಂದು ಹೇಳಿದರು.
ಅದೇ ರೀತಿ ಪರಮಣ್ಣ(ಗೌಡಪ್ಪ)ಹೆಳವರ ಅವರು ನೀರಾವರಿ ಇಲಾಖೆಯಲ್ಲಿ ಕಪ್ಪುಚುಕ್ಕೆ ಇಲ್ಲದೆ ರೈತರ ಸಂಕಷ್ಟಗಳಿಗೆ ತಕ್ಷಣ ಸ್ಪಂದಿಸುವ ಮೂಲಕ ರೈತರ ಪರವಾಗಿ ಅಮೋವಾಗಿ ಸೇವೆ ಸಲ್ಲಿಸಿದ್ದಲ್ಲದೆ ಶ್ರೀಮಠದಲ್ಲಿ ಜರುಗುವ ಪ್ರತಿಯೊಂದು ಧಾರ್ಮಿಕ ಕಾರ್ಯಗಳಲ್ಲಿ ಬಾಲ್ಯದಿಂದಲೂ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಭಜನೆ, ಜನಪದ ಹಾಡುಗಳ ಸಂಗೀತಗಾರನಾಗಿ ಅಮಾವಾಸ್ಯೆ ಮತ್ತು ಇತರ ಕಾರ್ಯಕ್ರಮಗಳಲ್ಲಿ ಅನುಪದ ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದರು.
ಮಠದ ಅರ್ಚಕ ಮಾನಯ್ಯ ಪೂಜಾರಿ, ಚಿಂತಕರಾದ ಸಂಗಣ್ಣ ವಿಶ್ವಕರ್ಮ, ಚಿದಾನಂದ ಬಡಿಗೇರ, ಶಿವಾನಂದ ಹೂಗಾರ, ಯಂಕಣ್ಣ ಗುರಿಕಾರ, ಶ್ರೀನಿವಾಸ ಕತ್ರಿಕಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net