ಕ್ಲೋಜರ್ ಕಾಮಗಾರಿ ಸಮರ್ಪಕವಾಗಿ ನಿರ್ವಹಿಸಿ

ಆಲಮಟ್ಟಿಯಲ್ಲಿ ಅಖಂಡ ಕರ್ನಾಟಕ ರೈತ ಸಂಘ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಂಟಿ  ಪ್ರತಿಭಟನೆ ನಡೆಸಿ ಮುಖ್ಯ ಅಭಿಯಂತರ ಡಿ. ಬಸವರಾಜಗೆ ಮನವಿ ಸಲ್ಲಿಸಿದರು. ರೈತ ಸಂಘದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ಸೋಮೇಶ ವಾಲೀಕಾರ, ಪ್ರಹ್ಲಾದ ನಾಗರಾಳ, ಸಾಯಬಣ್ಣ ಅಂಗಡಿ, ಇಬ್ರಾಹಿಂ ವಾಲೀಕಾರ ಇತರರಿದ್ದರು.
ಆಲಮಟ್ಟಿಯಲ್ಲಿ ಅಖಂಡ ಕರ್ನಾಟಕ ರೈತ ಸಂಘ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಂಟಿ ಪ್ರತಿಭಟನೆ ನಡೆಸಿ ಮುಖ್ಯ ಅಭಿಯಂತರ ಡಿ. ಬಸವರಾಜಗೆ ಮನವಿ ಸಲ್ಲಿಸಿದರು. ರೈತ ಸಂಘದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ಸೋಮೇಶ ವಾಲೀಕಾರ, ಪ್ರಹ್ಲಾದ ನಾಗರಾಳ, ಸಾಯಬಣ್ಣ ಅಂಗಡಿ, ಇಬ್ರಾಹಿಂ ವಾಲೀಕಾರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರೈತ ಸಂಘ, ಹಸಿರು ಸೇನೆ ಜಂಟಿ ಪ್ರತಿಭಟನೆ
  • ಮುಖ್ಯ ಅಭಿಯಂತರರಿಗೆ ಮನವಿ
ಆಲಮಟ್ಟಿ: ಜಿಲ್ಲೆಯ ಎಲ್ಲ ಕೆರೆಗಳನ್ನು ಪೂರ್ಣ ಪ್ರಮಾಣದಲ್ಲಿ ಭರ್ತಿ ಮಾಡಲು ಕೂಡಲೇ ಎಲ್ಲ ಕಾಲುವೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ಹಾಗೂ ಕ್ಲೋಜರ್ ಕಾಮಗಾರಿ ಸರಿಯಾಗಿ ನಿರ್ವಹಿಸುವಂತೆ ಒತ್ತಾಯಿಸಿ ಮಂಗಳವಾರ ಅಖಂಡ ಕರ್ನಾಟಕ ರೈತ ಸಂಘ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಂಟಿ ಪ್ರತಿಭಟನೆ ನಡೆಸಿದರು.
ಸ್ಥಳೀಯ ರಾಮಲಿಂಗೇಶ್ವರ ದೇವಸ್ಥಾನದಿಂದ ನೂರಾರು ರೈತರು ಪ್ರತಿಭಟನಾ ಮೆರವಣಿಗೆ ನಡೆಸಿ ಸಿ.ಇ. ಕಚೇರಿಗೆ ತಲುಪಿ ಮುಖ್ಯ ಅಭಿಯಂತರ ಡಿ. ಬಸವರಾಜಗೆ ಮನವಿ ಸಲ್ಲಿಸಿದರು.
ರೈತ ಸಂಘದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹಾಗೂ ಹಸಿರು ಸೇನೆ ತಾಲೂಕಾಧ್ಯಕ್ಷ ಸೀತಪ್ಪ ಗಣಿ ಮಾತನಾಡಿ, ಲಾಲ್ ಬಹದ್ದೂರ್ ಶಾಸೀ ಜಲಾಶಯದ ವ್ಯಾಪ್ತಿಗೆ ಬರುವ ಮುಳವಾಡ ಹಾಗೂ ಚಿಮ್ಮಲಗಿ ಏತ ನೀರಾವರಿ ಯೋಜನೆ ವ್ಯಾಪ್ತಿಗೆ ಬರುವ ಕಾಲುವೆಗಳಿಗೆ ಇಲ್ಲಿಯವರೆಗೂ ಹಿಂಗಾರು ಬೆಳೆಗಳಿಗೆ ನೀರು ಹರಿಸಿ ನಂತರ ಬೆಳೆಗೆ ನೀರು ಪೂರೈಸುವುದನ್ನು ಸ್ಥಗಿತಗೊಳಿಸಲಾಗಿದೆ.
ಬೇಸಿಗೆಯಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಅನುಕೂಲತೆ ಕಲ್ಪಿಸಲು ಜಿಲ್ಲೆಯ ಎಲ್ಲ ಕೆರೆಗಳಿಗೆ ನೀರು ಹರಿಸಲು ಪ್ರಾದೇಶಿಕ ಆಯುಕ್ತರು ಅನುಮತಿ ನೀಡಿದ್ದರಿಂದ ಏ.30ರವರೆಗೆ ನೀರು ಹರಿಸಿ ಈಗ ಸ್ಥಗಿತಗೊಳಿಸಲಾಗಿದೆ. ಇಲ್ಲಿಯವರೆಗೂ ಕೇವಲ ಶೇ. 30ರಿಂದ 35ರಷ್ಟು ಮಾತ್ರ ಕೆರೆಗಳಿಗೆ ನೀರು ಬಿಡಲಾಗಿದೆ ಎಂದರು.
ಪ್ರತಿ ವರ್ಷ ಕಾಲುವೆ ಸ್ವಚ್ಛಗೊಳಿಸಲು ಒಂದು ಕ್ಲೋಜರ್ ಕಾಮಗಾರಿ, ಇನ್ನೂಂದು ವಾರ್ಷಿಕ ನಿರ್ವಹಣ ವೆಚ್ಚವೆಂದು ಈ ಯೋಜನೆಗಳಡಿ ಕೋಟ್ಯಂತರ ಹಣ ವ್ಯಯವಾಗುತ್ತಿದೆ. ಈ ಎರಡು ಯೋಜನೆಗಳ ಉದ್ದೇಶ ಒಂದೆಯಾಗಿದೆ. ಕಾಲುವೆಯಲ್ಲಿ ಹೂಳು ಹಾಗೂ ಗಿಡ ಗಂಟಿಗಳ ತೆರವುಗೊಳಿಸುವ ಕಾರ್ಯ ನಡೆಸುವ ಉದ್ದೇಶವಾಗಿದ್ದರಿಂದ ಇಲ್ಲಿ ಅನಾವಶ್ಯಕವಾಗಿ ಎರಡು ಯೋಜನೆಗಳ ನೆಪದಲ್ಲಿ ಸಾರ್ವಜನಿಕರ ಹಣ ದುರುಪಯೋಗ ಆಗುತ್ತಿದೆ ಎಂದು ಆಗ್ರಹಿಸಿದರು.
ಉಮೇಶ ವಾಲೀಕಾರ, ಪ್ರಲ್ಹಾದ ನಾಗರಾಳ, ಸಾಯಬಣ್ಣ ಅಂಗಡಿ, ಇಬ್ರಾಹೀಂ ವಾಲೀಕಾರ, ಮಲ್ಲಪ್ಪ ಹಳೆನಿಡಗುಂದಿ, ಬಸಪ್ಪ ತೋಳಮಟ್ಟಿ, ಶ್ರೀಶೈಲ ಕಲಾದಗಿ, ಗುರಪ್ಪ ಪೂಜಾರಿ, ಸಂದೀಪ ನಾಗರಡ್ಡಿ, ಸೋಮೇಶ ನಾಗರಡ್ಡಿ, ಮುದಕಪ್ಪ ಮೇಟಿ, ಮಂಜು ಬಿರಾದಾರ, ಅಶೋಕ ಹಡಪದ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net