ಅವೈಜ್ಞಾನಿಕ ಮೇಲ್ಸೇತುವೆಯಿಂದ ಮಾಲೂರು ನಗರಕ್ಕೆ ಹೊಡೆತ

ಅವೈಜ್ಞಾನಿಕ ಮೇಲ್ಸೇತುವೆಯಿಂದ ಮಾಲೂರು ನಗರಕ್ಕೆ ಹೊಡೆತ
ಅವೈಜ್ಞಾನಿಕ ಮೇಲ್ಸೇತುವೆಯಿಂದ ಮಾಲೂರು ನಗರಕ್ಕೆ ಹೊಡೆತ
Published on
ಮಾಲೂರು: ಮಾಲೂರು-&ಬೆಂಗಳೂರು ರಸ್ತೆ, ಮಾಲೂರು-&ಹೊಸೂರು ಮತ್ತು ಮಾಲೂರು-&ಕೋಲಾರ ರಸ್ತೆಯವರೆಗೆ ನಿರ್ಮಿಸುತ್ತಿರುವ ಅವೈಜ್ಞಾನಿಕಮೇಲ್ಸೇತುವೆ ಕಾಮಗಾರಿ ನಿಲ್ಲಿಸಿ, ಹೊರವರ್ತುಲ ರಸ್ತೆ ಮಾಡಿ ಎಂದು ಜೆಡಿಎಸ್​ ಮತ್ತು ಬಿಜೆಪಿ ಕಾರ್ಯಕರ್ತರು ಬುಧವಾರ ಅಂಬೇಡ್ಕರ್​ ಪಾರ್ಕ್​ನಿಂದ ಕೆಂಪೇಗೌಡ ವೃತ್ತವರೆಗೂ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸಿ, ನಂತರ ತಾಲೂಕು ಕಚೇರಿ ಬಳಿ ತಹಸೀಲ್ದಾರ್​ ಎಂ.ವಿ.ರೂಪಾ ಅವರಿಗೆ ಮನವಿ ಸಲ್ಲಿಸಿದರು. flyover
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜಿ.ಈ.ರಾಮೇಗೌಡ ಮಾತನಾಡಿ, ಮಾಲೂರು ಮೇಲ್ಸೇತುವೆ ಕಾಮಗಾರಿ ಮಾಡುತ್ತಿರುವುದು ಸರ್ಕಾರದ ದುಡ್ಡಿನಿಂದಲ್ಲ. ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಳಿಸಿ ಟೋಲ್​ ನಿರ್ಮಿಸಿ 15 ವರ್ಷ ನಮ್ಮನ್ನು ಲೂಟಿ ಮಾಡಲು ಬಂದಿರುವ ಯೋಜನೆ. ಗುತ್ತಿಗೆದಾರರು 800 ಕೋಟಿ ರೂ. ಬಂಡವಾಳ ಹಾಕಿ ಜಡೆಗೆನಳ್ಳಿಯ ಬಳಿ ಒಂದು ಟೋಲ್​ ಹಾಗೂ ಸೀತನಾಯಕನಹಳ್ಳಿ ಬಳಿ ಒಂದು ಟೋಲ್​ ನಿರ್ಮಿಸಿ ನಮ್ಮ ಜೇಬಿಗೆ ಕನ್ನ ಹಾಕುತ್ತಾರೆ. ಪ್ರತಿದಿನ ಬಡವರು ಆಸ್ಪತ್ರೆಗೆ, ಇತರೆ ಕಡೆ ಓಡಾಡಲು ಟೋಲ್​ ಸುಂಕ ಪಾವತಿಸಲು ಕಷ್ಟವಾಗುತ್ತದೆ. ಮಾಲೂರಿನಲ್ಲಿ ಯಾವುದೇ ವಿಧವಾದ ಅಭಿವೃದ್ಧಿ ನಡೆಯುತ್ತಿಲ್ಲ. ದಯವಿಟ್ಟು ಶಾಸಕರು ಈ ಕಾಮಗಾರಿ ನಿಲ್ಲಿಸಿ ಮಾಲೂರನ್ನು ಉಳಿಸಬೇಕು ಎಂದರು.
ಮಾಲೂರು&ಕೋಲಾರ ವೃತ್ತದಿಂದ ರೈಲ್ವೆ ನಿಲ್ದಾಣದವರೆಗೂ ಇರುವ ಒಂದೇ ಒಂದು ರಸ್ತೆ ನೇರವಾಗಿದೆ. ಈ ರಸ್ತೆಯಲ್ಲಿರುವ ಅಂಗಡಿ ಮಳಿಗೆಗಳು ಇದ್ದು, ಮೇಲ್ಸೇತುವೆ ನಿಮಾರ್ಣ ಮಾಡಿದರೆ ಬೀದಿ ಪಾಲಾಗಬೇಕಾಗುತ್ತವೆ. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ರಿಂಗ್​ ರಸ್ತೆ ನಿರ್ಮಿಸಿ
ಅಭಿವೃದ್ಧಿ ಮಾಡುತ್ತಿದ್ದಾರೆ ಎಂದರು.

ಶಾಸಕ ನಂಜೇಗೌಡ ಅವರು ಸರ್ಕಾರದಿಂದ 2,500 ಕೋಟಿ ರೂ. ತಂದು ಪ್ಲೆಒವರ್​ ಮಾಡುತ್ತಿರುವುದಾಗಿ ಹೇಳುತ್ತಾರೆ ಆದರೆ ಸಂಬಂಧಪಟ್ಟ ಅಧಿಕಾರಿಗಳ ಬಳಿ ವಿಚಾರಿಸಿದಾಗ ಇದು ಸರ್ಕಾರದ ದುಡ್ಡಲ್ಲ ಖಾಸಗಿ ಗುತ್ತಿಗೆದಾರರು ಬಂಡವಾಳ ಹಾಕಿ ಟೋಲ್​ ವಸೂಲಿ ಮಾಡುತ್ತಾರೆ ಎಂದು ಹೇಳುತ್ತಿದ್ದಾರೆ ಎಂದು ತಿಳಿಸಿದರು.
ತಾಲೂಕು ಬಿಜೆಪಿ ಅಧ್ಯಕ್ಷ ಟಿಬಿ ಕೃಷ್ಣಪ್ಪ ಮಾತನಾಡಿ, ಸ್ಥಳಿಯ ಶಾಸಕರು 2021 ರಿಂದ 2031ರವರೆಗೆ ಮಾಲೂರು ಯೋಜನ ಪ್ರಾಧಿಕಾರದಲ್ಲಿ ಮಾಸ್ಟರ್​ ಪ್ಲ್ಯಾನ್​ ಮಾಡಿದ್ದಾರೆ. ಆ ಪ್ಲ್ಯಾನ್​ ತೆಗೆದು ನೋಡಿದಾಗ 10 ವರ್ಷದಲ್ಲಿ ರಿಂಗ್​ರೋಡ್​ ಮಾಡಬೇಕೆಂದು ಪ್ಲಾನ್​ನಲ್ಲಿ ಇದೆ. ನೀವೇ ಮಾಡಿಸಿದ ಮಾಸ್ಟರ್​ ಪ್ಲ್ಯಾನ್​ನಲ್ಲಿ ಇರುವ ರಿಂಗ್​ರೋಡ್​ ಮಾಡದೆ ಬಡವರು ಜೀವಮಾನ ಪೂರ್ತಿ ಕೂಡಿಟ್ಟ ಹಣದಿಂದ ನಿರ್ಮಿಸಿರುವ ಅಂಗಡಿ ಮಳಿಗೆಗಳನ್ನು ಕೆಡವಲು ಹೋಗುತ್ತಿದ್ದೀರಾ ಎಂದು ತಿಳಿಸಿದರು.
ಮಾಜಿ ಪುರಸಭೆ ಸದಸ್ಯರಾದ ಮಂಜು, ಪ್ರದಿಪ್​ರೆಡ್ಡಿ, ಲಕ್ಷಿ$್ಮಕಾಂತ, ಮುಖಂಡರಾದ ಎಂ.ಎ.ಆನಂದ್​ಕುಮಾರ್​, ಅರುಣ, ರವಿ, ಗೋಪಾಲ್​, ರೋಹಿತ್​, ಸಂಪತ್​, ಚೇತನ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net