ಮಲ್ಲಿಕಾರ್ಜುನ ದೇಗುಲ ಕಳಸಾರೋಹಣ 27ಕ್ಕೆ

,
,
Published on

ಪ್ರಮುಖ ಮುಖ್ಯಾಂಶಗಳು

  • ಜಿಡಗಾದಲ್ಲಿ ಭಕ್ತಿ ಸಂಭ್ರಮದ ಮಹಾಮೇಳ
  • ಕಾರ್ಯಕ್ರಮಕ್ಕೆ ಭರ್ಜರಿ ಸಿದ್ಧತೆ
ಆಳಂದ: ಜಿಡಗಾ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದ ನೂತನ ಶಿಖರ ಲೋಕಾರ್ಪಣೆ ಮತ್ತು ಕಳಸಾರೋಹಣ ಮಹೋತ್ಸವ ಏ.27ರಂದು ಬೆಳಗ್ಗೆ 11ಕ್ಕೆ ಜರುಗಲಿದೆ. ಇದಕ್ಕಾಗಿ ಭಕ್ತಮಂಡಳಿ ಭರ್ಜರಿ ಸಿದ್ಧತೆ ಕೈಗೊಂಡಿದ್ದು, ಊರಲ್ಲಿ ಭಕ್ತಿ, ಸಂಭ್ರಮ ಕಳೆಗಟ್ಟಿದೆ.
ನೂತನ ಶಿಖರ ಭಕ್ತರಿಗೆ ಅರ್ಪಿಸುವ ನಿಮಿತ್ತ ಗುರುವಾರ ಆರಂಭವಾಗಿರುವ ಐದು ದಿನದ ಧಾರ್ಮಿಕ ಉತ್ಸವದಲ್ಲಿ ವಿವಿಧ ಪೂಜಾ ವಿಧಿವಿಧಾನ, ಭಜನೆ ಹಾಗೂ ಪ್ರವಚನ ಜರುಗುತ್ತಿದೆ.
ಲಿಂಗೈಕ್ಯ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಶಿವಯೋಗಿಗಳ ದಿವ್ಯ ಆಶೀರ್ವಾದ ಹಾಗೂ ಶ್ರೀ ಡಾ.ಮುರುರಾಜೇಂದ್ರ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯ, ಚಿನ್ಮಯಗಿರಿ ಶ್ರೀ ವೀರಮಹಾಂತ ಶಿವಾಚಾರ್ಯ ಮಾರ್ಗದರ್ಶನ ಹಾಗೂ ಮಾದನಹಿಪ್ಪರಗಾ ಶ್ರೀ ಅಭಿನವ ಶಿವಲಿಂಗ ಮಹಾಸ್ವಾಮೀಜಿ ಸಾನ್ನಿಧ್ಯದ ಮಹೋತ್ಸವದಲ್ಲಿ ರಾಜಕೀಯ, ಸಾಮಾಜಿಕ ಹಾಗೂ ಆಧ್ಯಾತ್ಮಿಕ ೇತ್ರದ ಗಣ್ಯರು ಭಾಗವಹಿಸಲಿದ್ದಾರೆ.
ಸಂಸದ ಸಾಗರ ಈಶ್ವರ ಖಂಡ್ರೆ, ಶಾಸಕ ಬಿ.ಆರ್​. ಪಾಟೀಲ್​, ಮಾಜಿ ಶಾಸಕ ಸುಭಾಷ ಗುತ್ತೇದಾರ್​, ಉದ್ಯಮಿಗಳಾದ ಚಂದು ಪಾಟೀಲ್​, ಉಮೇಶ ಪಾಟೀಲ್​, ಕಲಬುರಗಿ ನಗರ ಪೊಲೀಸ್​ ಆಯುಕ್ತ ಡಾ.ಶರಣಪ್ಪ ಎಸ್​.ಡಿ., ಡಿವೈಎಸ್​ಪಿ ತಮ್ಮರಾಯ ಪಾಟೀಲ್​, ಕಾರ್ಯನಿರತ ಪತ್ರಕರ್ತರ ಸಂದ ಕಾರ್ಯಕಾರಿ ಸಮಿತಿ ಸದಸ್ಯ ಶರಣಬಸಪ್ಪ ಜಿಡಗಾ ಇತರರು ಪಾಲ್ಗೊಳ್ಳಲಿದ್ದಾರೆ. ಗ್ರಾಮದ ಬೀದಿಗಳಲ್ಲಿ ಸಿಂಗಾರ ಮಾಡಿದ್ದು, ದೇವಸ್ಥಾನ ಸುತ್ತಮುತ್ತ ವಿದ್ಯುತ್​ ದೀಪಾಲಂಕಾರ ಕಣ್ಮನ ಸೆಳೆಯುತ್ತಿದೆ.
ಐದು ದಿನದ ಉತ್ಸವದ ಕೊನೆಯ ದಿನ ಕಳಸಾರೋಹಣ ಮುಖ್ಯವಾಗಿದ್ದು, ಜಿಡಗಾ ಹಾಗೂ ಸುತ್ತಲಿನ ಗ್ರಾಮಗಳ ಭಕ್ತರು ಪಾಲ್ಗೊಳ್ಳುವಂತೆ ದೇವಸ್ಥಾನ ಮಂಡಳಿ ಕೋರಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net