ತಮ್ಮ ಭಾಷಣದ ವೇಳೆ ಡಿಕೆ, ಡಿಕೆ ಎಂದು ಕೂಗುತ್ತಿದ್ದ ಕಾರ್ಯಕರ್ತರ ನಡೆಗೆ ಸಿಡಿದೆದ್ದ ಖರ್ಗೆ, ಇದು ಕಾಂಗ್ರೆಸ್ ಪಕ್ಷದ ಮೀಟಿಂಗ್ ವ್ಯಕ್ತಿಯ ಸಭೆ ಅಲ್ಲ. ಒಬ್ಬೊಬ್ಬರ ಹೆಸರು ಕೂಗುತ್ತಿದ್ರೆ, ದೇಶ ಕೈಗೆ ಬರಲ್ಲ. ಪಕ್ಷಕ್ಕೆ ಶಿಸ್ತು ಮುಖ್ಯವೇ ಹೊರತು ಇಲ್ಲಿ ಯಾರೇ ಎಷ್ಟೇ ದೊಡ್ಡವರಿದ್ರೂ ಅಷ್ಟೇ. ನೀವೆಲ್ಲ ಯೂಸ್ ಲೆಸ್ ಥರ ಆಡಬೇಡಿ. ಕಾಂಗ್ರೆಸ್ನಿಂದ ನಾಯಕರಾಗಿದ್ದಾರೆ ವಿನಃ ವ್ಯಕ್ತಿಯಿಂದಲ್ಲ. ಅವರ ಕೊಡುಗೆ ಕಡಿಮೆ ಇದ್ದರೂ ಪಕ್ಷ ಎಲ್ಲವನ್ನೂ ಕೊಡುತ್ತದೆ ಎಂದರು.