ಮಲ್ಲಮ್ಮಳ ಉತ್ಸವಕ್ಕೆ 75 ಲಕ್ಷ ರೂ.

ಬೆಳವಡಿ ಮಲ್ಲಮ್ಮ ಉತ್ಸವ 2026ರ ಪೂರ್ವಭಾವಿ ಸಭೆಯಲ್ಲಿ ಶಾಸಕ ಮಹಾಂತೇಶ ಕೌಜಲಗಿ, ಡಿಸಿ ಮೊಹಮ್ಮದ್​ ರೋಷನ್​, ಎಸಿ ಪ್ರವಿಣ ಜೆನ, ವಿದ್ಯಾವತಿ ಭಜಂತ್ರಿ, ಚಂದ್ರಶೇಖರ ಕಾರಿಮನಿ ಇತರರಿದ್ದರು.
ಬೆಳವಡಿ ಮಲ್ಲಮ್ಮ ಉತ್ಸವ 2026ರ ಪೂರ್ವಭಾವಿ ಸಭೆಯಲ್ಲಿ ಶಾಸಕ ಮಹಾಂತೇಶ ಕೌಜಲಗಿ, ಡಿಸಿ ಮೊಹಮ್ಮದ್​ ರೋಷನ್​, ಎಸಿ ಪ್ರವಿಣ ಜೆನ, ವಿದ್ಯಾವತಿ ಭಜಂತ್ರಿ, ಚಂದ್ರಶೇಖರ ಕಾರಿಮನಿ ಇತರರಿದ್ದರು.
Published on
ಬೈಲಹೊಂಗಲ/ ಮಲ್ಲಮ್ಮನ ಬೆಳವಡಿ
ಶಿವಾಜಿ ಮಹಾರಾಜರೊಂದಿಗೆ ಸಹೋದರತ್ವ ಬಾಂಧವ್ಯ ಬೆಸೆದು ಕನ್ನಡ, ಮರಾಠಿಗರ ಮಧ್ಯೆ ಸಮನ್ವಯತೆ ಹೊಂದಲು 16ನೇ ಶತಮಾನದಲ್ಲಿಯೇ ಕಾರಣೀಕರ್ತಳಾದ ವೀರವನಿತೆ ಬೆಳವಡಿ ಮಲ್ಲಮ್ಮಳ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲು ಸರ್ಕಾರದಿಂದ 75 ಲ ರೂ. ಅನುದಾನ ಮಂಜೂರಾಗಿದೆ.ಇನ್ನು 25 ಲ ರೂ. ಅನುದಾನಕ್ಕಾಗಿ ಬೇಡಿಕೆ ಇಡಲಾಗಿದೆ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.
ತಾಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ವೀರ ರಾಣಿ ಬೆಳವಡಿ ಮಲ್ಲಮ್ಮ ಸ್ಮಾರಕ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬೆಳವಡಿ ಉತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮಲ್ಲಮ್ಮನ ಉತ್ಸವ ಆಚರಿಸಲು ಶಾಶ್ವತ ಜಾಗೆ ಗುರುತಿಸಲಾಗಿದೆ. ಈ ವರ್ಷದಿಂದ ಪ್ರಾರಂಭಿಸಿ, ಮುಂಬರುವ ಉತ್ಸವದಲ್ಲಿ ಅಭಿವದ್ಧಿಪಡಿಸಲಾಗುವುದು. ಬಜೆಟ್​ ಅಧಿವೇಶನ ಇರುವುದರಿಂದ ಮುಖ್ಯಮಂತ್ರಿಗಳು ಲಭ್ಯವಿಲ್ಲ. ಮುಂದಿನ ವರ್ಷ ಕರೆಸಲು ಪ್ರಯತ್ನಿಸಲಾಗುವುದು ಎಂದರು.
ಜಿಲ್ಲಾಧಿಕಾರಿ ಮೊಹಮ್ಮದ್​ ರೋಷನ ಅಧ್ಯತೆ ವಹಿಸಿ ಮಾತನಾಡಿ, ನಾಡಿನ ಹೆಮ್ಮೆ ಮಲ್ಲಮ್ಮಳ ಉತ್ಸವ ಆದ್ದೂರಿಯಾಗಿ ಆಚರಿಸಲು ಸರ್ಕಾರ ಮುತುವರ್ಜಿ ವಹಿಸಿದೆ. ೆ.28 ಹಾಗೂ ಮಾ.1ರಂದು ಎರಡು ದಿನಗಳ ಕಾಲ ಉತ್ಸವ ನಡೆಯುತ್ತಿದ್ದು. ರಾಜ್ಯಮಟ್ಟದ ವಿವಿಧ ಕಲಾವಿದರು, ನತ್ಯ ತಂಡ ಹಾಗೂ ಸಾಹಿತಿಗಳನ್ನು ಕರೆಯಿಸಲಾಗುವುದು. ಮಲ್ಲಮ್ಮಳ ಜ್ಯೋತಿಯಾತ್ರೆಯು ೆ.26ರಂದು ಮಲ್ಲಮ್ಮಳ ತವರೂರು ಸೋಂದಾ ಗ್ರಾಮದಿಂದ ಪ್ರಾರಂಭಗೊಂಡು ಫೆ.27ರಂದು ಸಿದ್ದಸಮುದ್ರ ಗ್ರಾಮದ ಸಿದ್ದೇಶ್ವರ ಮಠದಲ್ಲಿ ವಸತಿ ಮಾಡಿ, ಫೆ.28ರಂದು ಬೆಳವಡಿ ಗ್ರಾಮಕ್ಕೆ ತಲುಪಲಿದೆ ಎಂದರು.
ಸಾಮಾಜಿಕ ಕಾರ್ಯಕರ್ತ ಪ್ರಕಾಶ ಹುಂಬಿ ಮಾತನಾಡಿ, ರಾಣಿ ಬೆಳವಡಿ ಮಲ್ಲಮ್ಮಳ ಪೀಠ ಸಿದ್ದಸಮುದ್ರದ ಸಿದ್ದೇಶ್ವರ ದೇವಸ್ಥಾನವಾಗಿದ್ದು, ಉತ್ಸವ ನಿಮಿತ್ತ ವಿದ್ಯುತ್​ ಅಲಂಕಾರ ಮಾಡಬೇಕು ಎಂದು ಮನವಿ ಮಾಡಿದರು.
ಬೆಂಗಳೂರಿನಲ್ಲಿ ವಿಧಾನಸೌಧದ ಮುಂಭಾಗದಲ್ಲಿ ಜ್ಯೋತಿ ಯಾತ್ರೆಗೆ ಮುಖ್ಯಮಂತ್ರಿಗಳು ಚಾಲನೆ ನೀಡಬೇಕು. ಹಾಗೂ ಉತ್ಸವದ ಕಾಯಂ ಆಚರಣೆಗೆ
ನಿಗದಿಪಡಿಸಿರುವ ಜಾಗ ಸರ್ವೇ ಮಾಡಿಸಿ ಚೆಕ್​ ಬಂದಿ ಹಾಕಿಸಬೇಕೆಂದು ಗ್ರಾಮಸ್ಥರು ಸಲಹೆ ನೀಡಿದರು.
ಉತ್ಸವದ ವಿವಿಧ ಕಾರ್ಯಕ್ಕಾಗಿ ಉಪ ಸಮಿತಿ ರಚಿಸಲಾಯಿತು. ಎಸಿ ಪ್ರವಿಣಕುಮಾರ ಜೆನ್​, ಕನ್ನಡ ಮತ್ತು ಸಂಸತಿ ಇಲಾಖೆಯ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ವೀರರಾಣಿ ಬೆಳವಡಿ ಮಲ್ಲಮ್ಮ ಮಹಿಳಾ ಪ್ರತಿಷ್ಠಾನ ಕಾರ್ಯದರ್ಶಿ ಸವಿತಾ ಪಾಟೀಲ, ಗ್ರಾಪಂ ಮಾಜಿ ಅಧ್ಯ ಚಂದ್ರಶೇಖರ ಕಾರಿಮನಿ, ಡಿವೆಎಸ್ಪಿ ಡಾ. ವೀರಯ್ಯ ಹಿರೇಮಠ, ತಾಪಂ ಅಧಿಕಾರಿ ಸಂಜೀವಕುಮಾರ ಜನ್ನೂರ, ಬಿಇಒ ಎ.ಎನ್​.ಪ್ಯಾಟಿ. ಟಿಎಚ್​ಒ ಡಾ.ಎಸ್​.ಎಸ್​.ಸಿದ್ದಣ್ಣವರ, ಸಿಡಿಪಿಒ ಅರುಣ ಕುಮಾರ, ಸಿಪಿಐ ಶಿವಾನಂದ ಗುಡಗನಟ್ಟಿ, ವಿಠ್ಠಲ ಪೀಸೆ, ರಾಚಪ್ಪ ಮಟ್ಟಿ, ಪಿಂಟು ಗುಡ್ಡದಮಠ, ವಿರೇಶ ಮಂಗಳಗಟ್ಟಿ, ಗಜಪ್ಪ ರಾಣೋಜಿ, ಕುಮಾರ ಮಂಗಳಗಟ್ಟಿ, ಮೌಲಾ ನದಾ, ವೀರೇಶ ತುರಾಯಿ, ಗಜಾನನ ರಾನೋಜಿ, ಶಿವಾನಂದ ವಾಲಿ ಇತರರು ಇದ್ದರು.
ತಹಸೀಲ್ದಾರ್​ ಹನುಮಂತ ಶಿರಹಟ್ಟಿ ಸ್ವಾಗತಿಸಿದರು. ಪ್ರಾಚಾರ್ಯ ಮಹಾಂತೇಶ ಉಪ್ಪಿನ ನಿರೂಪಿಸಿ, ವಂದಿಸಿದರು.
ರಾಣಿ ಮಲ್ಲಮ್ಮಳ ನಾಡ ಪ್ರೇಮ ಎಲ್ಲರಿಗೂ ಪ್ರೇರಣೆ. ಇತಿಹಾಸ ತಿಳಿದವರು ಇತಿಹಾಸ ನಿರ್ಮಿಸಲು ಸಾಧ್ಯ, ಮಲ್ಲಮ್ಮಳ ಶೌರ್ಯ, ಇತಿಹಾಸ, ಸಾಂಸತಿಕ ಪರಂಪರೆ ರಾಜ್ಯಮಟ್ಟದಲ್ಲಿ ಪರಿಚಯಿಸಲು ಎಲ್ಲರೂ ಪ್ರಯತ್ನಿಸೋಣ.
> ಮಹಾಂತೇಶ ಕೌಜಲಗಿ ಶಾಸಕ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net