ಮಲ್ಲಮ್ಮ, ವೇಮನ ಮನುಕುಲದ ಆಸ್ತಿ

ಬಾಗಲಕೋಟೆ ನಗರದಲ್ಲಿ ಬೆನಕಟ್ಟಿಯ ಹೇಮ ವೇಮನ ಸದ್ಭೋದನಾ ಪೀಠ ಶನಿವಾರ ಸಂಜೆ ಹಮ್ಮಿಕೊಂಡಿದ್ದ ವೇಮನ ತತ್ವ ಚಿಂತನದ ೧೯೨ ನೆಯ ಮಾಸಿಕ ಕಾರ್ಯಕ್ರಮ ಎರೆಹೊಸಳ್ಳಿ ರಡ್ಡಿ ಗುರುಪೀಠದ ವೇಮನಾನಂದ ಸ್ವಾಮೀಜಿ ಉದ್ಘಾಟಿಸಿದರು. ಆಧ್ಯಾತ್ಮಿಕ ಚಿಂತಕ ಪ್ರದೀಪ ಗುರೂಜಿ, ಮಾಜಿ ಸಚಿವ ಎಸ್.ಆರ್.ಪಾಟೀಲ, ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಉಪ ಆಯುಕ್ತ ಜಿ.ಬಿ.ಗೌಡಪ್ಪಗೋಳ, ವಕೀಲ ಎಸ್.ಕೆ.ಯಡಹಳ್ಳಿ, ರಾಜ್ಯ ಕಾನೂನು ವಿವಿ ಸಿಂಡಿಕೇಟ್ ಸದಸ್ಯ ರಮೇಶ ಬದ್ನೂರ ಇದ್ದರು.

Published on
ಬಾಗಲಕೋಟೆ: ತತ್ವಜ್ಞಾನಿ ಮಹಾಯೋಗಿ ವೇಮನ ಹಾಗೂ ಹೇಮರಡ್ಡಿ ಮಲ್ಲಮ್ಮ ಕೇವಲ ಒಂದು ಸಮಾಜದ ಆಸ್ತಿಯಲ್ಲ, ಇಡೀ ಮನುಕುಲದ ಆಸ್ತಿ ಎಂದು ಮಾಜಿ ಸಚಿವ ಎಸ್.ಆರ್.ಪಾಟೀಲ ಹೇಳಿದರು.

ನವನಗರದ ನ್ಯಾಯವಾದಿ ರಮೇಶ ಬದ್ನೂರ ನಿವಾಸದಲ್ಲಿ ಬೆನಕಟ್ಟಿಯ ಹೇಮ ವೇಮನ ಸದ್ಬೊಧನಾ ಪೀಠ ಶನಿವಾರ ಹಮ್ಮಿಕೊಂಡಿದ್ದ ವೇಮನ ತತ್ವ ಚಿಂತನದ 192 ನೆಯ ಮಾಸಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಹಾಯೋಗಿ ವೇಮನರ ತತ್ವ ಚಿಂತನೆಗಳು ಸಾರ್ಥಕ ಬದುಕು ರೂಪಿಸಿಕೊಳ್ಳುವುದಕ್ಕೆ ಪ್ರತಿ ವ್ಯಕ್ತಿಗೂ ಮಾರ್ಗದರ್ಶನ ಮಾಡುತ್ತಿದ್ದರೆ, ಹೇಮರಡ್ಡಿ ಮಲ್ಲಮ್ಮನ ತಾಳ್ಮೆ, ಸಹನೆ, ಅಚಲ ಭಕ್ತಿಯ ಜೀವನ ಸಮಾಜಕ್ಕೆ ಆದರ್ಶಪ್ರಾಯವಾಗಿದೆ ಎಂದ ಎಸ್.ಆರ್.ಪಾಟೀಲ, ಇವರಿಬ್ಬರ ತತ್ವಾದರ್ಶಗಳನ್ನು ಜೀವನದಲ್ಲಿ ಅನುಸರಿಸಿ ನಡೆದರೆ ಅರ್ಥಪೂರ್ಣ ಬದುಕು ನಮ್ಮದಾಗುತ್ತದೆ ಎಂದರು.

ಮುಖ್ಯ ಅತಿಥಿ ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಉಪ ಆಯುಕ್ತ ಜಿ.ಬಿ.ಗೌಡಪ್ಪಗೋಳ ಮಾತನಾಡಿ, ಮನುಷ್ಯನಲ್ಲಿ ಇಂದು ಅಹಂಕಾರ, ಸ್ವಾರ್ಥ ಭಾವನೆ ಬೆಳೆದಿದ್ದು, ಮಾನವೀಯ ಮೌಲ್ಯಗಳು ಕುಸಿದು ಶಾಂತಿ, ನೆಮ್ಮದಿ ಮಾಯವಾಗುತ್ತಿದೆ. ಅದಕ್ಕಾಗಿಯೇ ನಾವಿಂದು ವೇಮನ ಸಾಹಿತ್ಯ ಓದಿ ತಿಳಿಯಬೇಕಿದೆ. ಹೇಮರಡ್ಡಿ ಮಲ್ಲಮ್ಮನ ಆದರ್ಶ ಬದುಕನ್ನು ಪರಿಪಾಲಿಸಬೇಕಿದೆ ಎಂದು ಹೇಳಿದರು.

ಸದ್ಬೊಧನೆ ನೀಡಿದ ಆಧ್ಯಾತ್ಮಿಕ ಚಿಂತಕ ಪ್ರದೀಪ ಗುರೂಜಿ, ವೇಮನರ ಸಾಹಿತ್ಯ ಅಂತ:ಕರಣ ಜಾಗೃತಿಗೊಳಿಸುತ್ತದೆ. ಹೇಮರಡ್ಡಿ ಮಲ್ಲಮ್ಮನ ಆದರ್ಶದ ಬದುಕು ತಾಳ್ಮೆ, ಸಹನೆ, ನೆಮ್ಮದಿ, ಶಾಂತಿಯ ಜೀವನದ ಪಾಠ ಕಲಿಸುತ್ತದೆ ಎಂದರು.

ಸಾನಿಧ್ಯ ವಹಿಸಿದ್ದ ಎರೆಹೊಸಳ್ಳಿ ರಡ್ಡಿ ಗುರುಪೀಠದ ವೇಮನಾನಂದ ಸ್ವಾಮೀಜಿ, ವಚನ ಸಾಹಿತ್ಯ, ದಾಸ ಸಾಹಿತ್ಯದಂತೆ ವೇಮನ ಸಾಹಿತ್ಯ ಸಹ ಹೆಚ್ಚು ಪ್ರಚುರಗೊಳ್ಳಬೇಕಿದೆ ಎಂದರು.

ಶಾಸಕ ಉಮೇಶ ಮೇಟಿ ಹಾಗೂ ಬಿ.ಟಿ.ಡಿ.ಎ. ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಅವರನ್ನು ಸತ್ಕರಿಸಲಾಯಿತು. ಹಿರಿಯ ವಕೀಲ ಎಸ್.ಕೆ.ಯಡಹಳ್ಳಿ, ರಾಜ್ಯ ಕಾನೂನು ವಿವಿ ಸಿಂಡಿಕೇಟ್ ಸದಸ್ಯ ರಮೇಶ ಬದ್ನೂರ, ರೂಪಾ ಬದ್ನೂರ ವೇದಿಕೆಯಲ್ಲಿದ್ದರು. ಬೆನಕಟ್ಟಿಯ ಹೇಮರಡ್ಡಿ ಮಲ್ಲಮ್ಮ ಭಜನಾ ಮಂಡಳಿ ವೇಮನ ವಚನ ಪಠಣ ಮಾಡಿದರು. ರಮೇಶ ಸ್ವಾಗತಿಸಿದರು. ಪಾಂಡು ಸನ್ನಪ್ಪನವರ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net