5 ಎಚ್‌ಪಿ ಕ್ರೆಸರ್, ಬ್ಲೋವರ್ ಪಂಪ್, ಸ್ವಯಂಚಾಲಿತ ಯಂತ್ರ, 3 ಗಾಳಿಯಂತ್ರ, ಕೊಪ್ಪರಿಗೆ ಸೇರಿ ಇತರ ಯಂತ್ರಗಳು ಘಟಕದಲ್ಲಿ ಇರಲಿವೆ. ವಿವಿಧ ಆಕಾರಗಳಲ್ಲಿ ಬೆಲ್ಲ ತಯಾರಿಸಬಹುದು. 100 ಕೆ.ಜಿ.ಯಿಂದ 5 ಸಾವಿರ ಕೆ.ಜಿ.ವರೆಗೆ ಬೆಲ್ಲ ತಯಾರಿಸಬಹುದು. 15 ಮಂದಿ ಮಾಡುವ ಕೆಲಸವನ್ನು 3-4 ಕಾರ್ಮಿಕರ ನೆರವಿನಿಂದ ಇದೊಂದೇ ಯಂತ್ರ ಮಾಡಬಲ್ಲದು. ಈ ಘಟಕ ಸ್ಥಾಪಿಸಲು 30 ಲಕ್ಷ ರೂ. ವೆಚ್ಚವಾಗಲಿದೆ.