ರಾಗಿ ಎಂಎಲ್ 322 ತಳಿಯನ್ನು ಮಳೆಗಾಲ ಮತ್ತು ಬೇಸಿಗೆ ಕಾಲದಲ್ಲೂ ಬೆಳೆಯಬಹುದು. ಈ ತಳಿಗೆ ಬೆಂಕಿ ರೋಗ, ಬರ ತಡೆಯುವ ಶಕ್ತಿ ಇದೆ. ಮಳೆಯಾಶ್ರಿತ ಪ್ರದೇಶಗಳಲ್ಲಿ ಪ್ರತಿ ಎಕರೆಗೆ 15-16 ಕ್ವಿಂಟಾಲ್ವರೆಗೆ ಇಳುವರಿ ಬಂದರೆ, ನೀರಾವರಿ ಪ್ರದೇಶಗಳಲ್ಲಿ 17-18 ಕ್ವಿಂಟಾಲ್ ಇಳುವರಿ ಬರಲಿದೆ. ಈ ತಳಿಯ ಕುರಿತು ರೈತರಿಗೆ ಹೆಚ್ಚಿನ ಅರಿವು ಮೂಡಿಸಲಾಯಿತು. ಮೂರೂವರೆ ತಿಂಗಳ ಅವಧಿ ಬೆಳೆ ಇದಾಗಿದೆ. ತಡವಾಗಿ ಮಳೆ ಬಂದರೂ ಬೆಳೆ ಬೆಳೆಯಬಹುದು. ಇತರ ತಳಿ ರಾಗಿಯನ್ನು ಆಗಸ್ಟ್ದೊಳಗೆ ಬಿತ್ತನೆ ಮಾಡಬೇಕು. ಆದರೆ, ರಾಗಿ ಎಂಎಲ್ 322 ತಳಿಯ ಬಿತ್ತನೆಗೆ ಸೆಪ್ಟೆಂಬರ್ವರೆಗೂ ಅವಕಾಶವಿದೆ. ನೀರಾವರಿ ಇದ್ದರೆ ಡಿಸೆಂಬರ್ನಲ್ಲಿ ಬಿತ್ತನೆ ಮಾಡಿ ಫೆಬ್ರವರಿಯೊಳಗೆ ಕಟಾವು ಮಾಡಬಹುದು.