ತಿಮ್ಮಾಪುರ-ಆಂಜನೇಯ ಅವರಿಗೆ ಮಂತ್ರಿ ಮಾಡಿ

ಆರ್.ಬಿ.ತಿಮ್ಮಾಪುರ, ಆಂಜನೇಯರಿಗೆ ಮಂತ್ರಿ ಮಾಡಬೇಕೆಂದು ಆಗ್ರಹಿಸಿ ಜಿಲ್ಲಾ ಮಾದಿಗ ದಂಡೋರ ಸಮಿತಿ ಪದಾಽಕಾರಿಗಳು ಸೋಮವಾರ ಯಾದಗಿರಿ ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿಪತ್ರ ಸಲ್ಲಿಸಿದರು. ಗಣೇಶ ದುಪ್ಪಲಿ, ಕಾಶಪ್ಪ ಹೆಗ್ಗಣಗೇರಾ ಮಲ್ಲು ಬೆಳಗೇರಾ,ಚಂದ್ರಶೇಖರ ನಡುಮನಿ, ರಾಜು ಕಡೇಚೂರï, ರವಿ ಬುರನೋರï, ಪೋಲಪ್ಪ ಎಂ ನಾರಾಯಣಣ್ಣೋರ್ ಇತರರಿದ್ದರು.
ಆರ್.ಬಿ.ತಿಮ್ಮಾಪುರ, ಆಂಜನೇಯರಿಗೆ ಮಂತ್ರಿ ಮಾಡಬೇಕೆಂದು ಆಗ್ರಹಿಸಿ ಜಿಲ್ಲಾ ಮಾದಿಗ ದಂಡೋರ ಸಮಿತಿ ಪದಾಽಕಾರಿಗಳು ಸೋಮವಾರ ಯಾದಗಿರಿ ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿಪತ್ರ ಸಲ್ಲಿಸಿದರು. ಗಣೇಶ ದುಪ್ಪಲಿ, ಕಾಶಪ್ಪ ಹೆಗ್ಗಣಗೇರಾ ಮಲ್ಲು ಬೆಳಗೇರಾ,ಚಂದ್ರಶೇಖರ ನಡುಮನಿ, ರಾಜು ಕಡೇಚೂರï, ರವಿ ಬುರನೋರï, ಪೋಲಪ್ಪ ಎಂ ನಾರಾಯಣಣ್ಣೋರ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿ¯್ಲÁ ಮಾದಿಗ ದಂಡೋರ ಸಮಿತಿ ಒತ್ತಾಯ
  • ಯಾದಗಿರಿಯಲ್ಲಿ ಬೃಹತ್ ಪ್ರತಿಭಟನೆ
ಯಾದಗಿರಿ : ಸಚಿವ ಸಂಪುಟದಲ್ಲಿ ಮಾದಿಗ ಸಮುದಾಯದ  ಆರ್.ಬಿ. ತಿಮ್ಮಾಪುರ ಅವರಿಗೆ ಸಚಿವ ಸ್ಥಾನ ಹಾಗೂ ಮಾಜಿ ಸಚಿವ ಎಚ್. ಆಂಜನೇಯ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ನೇಮಿಸಿ ಸಚಿವರನ್ನಾಗಿ ಮಾಡಬೇಕು ಎಂದು ಒತ್ತಾಯಿಸಿ ಜಿ¯್ಲÁ ಮಾದಿಗ ದಂಡೋರ ಸಮಿತಿ ನೇತೃತ್ವದಲ್ಲಿ ಸೋಮವಾರ ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು. 
ವೇಳೆ ಮಾತನಾಡಿದ ಮಾದಿಗ ದಂಡೋರ ಸಮಿತಿ ರಾಜ್ಯ ಉಪಾಧ್ಯಕ್ಷ ಗಣೇಶ ದುಪ್ಪಲಿ, ರಾಜ್ಯದಲ್ಲಿ ಸುಮಾರು ೫೦ ಲಕ್ಷ ಜನಸಂಖ್ಯೆ ಹೊಂದಿರುವ ಮಾದಿಗ ಸಮುದಾಯವು ಪರಿಶಿಷ್ಟ ಜÁತಿಗಳಲ್ಲಿಯೇ ಅತಿದೊಡ್ಡ ಸಮುದಾಯವಾಗಿದ್ದರೂ ರಾಜಕೀಯವಾಗಿ ನಿರೀಕ್ಷಿತ ಸ್ಥಾನಮಾನ ದೊರೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಚಿತ್ರದುರ್ಗದಲ್ಲಿ ನಡೆದ ಎಸ್ಸಿ-ಎಸ್ಟಿ ಸಮಾವೇಶದಲ್ಲಿ ಕಾಂಗ್ರೆಸ್ ಪಕ್ಷ ಒಳಮೀಸಲಾತಿಗೆ ಬೆಂಬಲ ಘೋಷಿಸಿದ ಹಿನ್ನೆಲೆಯಲ್ಲಿ ಮಾದಿಗ ಸಮುದಾಯ ಕಾಂಗ್ರೆಸ್‌ಗೆ ಬೆಂಬಲ ನೀಡಿತ್ತು. ಆದರೆ ಸಚಿವ ಸಂಪುಟದಲ್ಲಿ ಸಮುದಾಯಕ್ಕೆ ಸಮರ್ಪಕ ಪ್ರಾತಿನಿಧ್ಯ ಸಿಕ್ಕಿಲ್ಲ ಎಂದು ಎಂದು ಅವರು ಆರೋಪಿಸಿದರು. ಕಳೆದ ಬಾರಿ ಬಲಗೈ ಸಮುದಾಯಕ್ಕೆ ಮೂರು ಸಚಿವ ಸ್ಥಾನಗಳೊಂದಿಗೆ ಪ್ರಮುಖ ಖಾತೆ ನೀಡಲಾಗಿತ್ತು. ಆದರೆ ಮಾದಿಗ ಸಮುದಾಯಕ್ಕೆ ಎರಡು ಸ್ಥಾನಗಳಷ್ಟೇ ದೊರೆತಿದ್ದು, ಉಪಮುಖ್ಯಮಂತ್ರಿ ಹುz್ದೆಯೂ ಸಿಕ್ಕಿರಲಿಲ್ಲ. ಈ ಬಾರಿ ಸಚಿವ ಸಂಪುಟದಲ್ಲಿ ಮಾದಿಗ ಸಮುದಾಯಕ್ಕೆ ಕನಿಷ್ಠ ನಾಲ್ಕು ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.
ಜಿ¯್ಲÁಧ್ಯಕ್ಷ ಕಾಶಪ್ಪ ಹೆಗ್ಗಣಗೇರಾ ಮಾತನಾಡಿದರು. ಈ ವೇಳೆ ಜಿ¯್ಲÁ ಉಪಾಧ್ಯಕ್ಷ ಮಲ್ಲು ಬೆಳಗೇರಾ, ಜಿ¯್ಲÁ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನಡುಮನಿ, ರಾಜು ಕಡೇಚೂರï, ರವಿ ಬುರನೋರ್, ಪೋಲಪ್ಪ ಎಂ ನಾರಾಯಣಣ್ಣೋರ್, ಭೀಮರಾಯ ಸಾತನೂರ್, ತಿಪ್ಪಣ್ಣ ಗೊಂದೆನೂರ್, ವಿಲ್ಸೇನ್ ಹಾಲಗೇರಾ, ಮಲ್ಲು ಕುಮನೂರ್, ಶರಣಪ್ಪ ವಡಗೇರಾ, ಶರಣಪ್ಪ ಹಚ್ಚೋಲಾ, ದೇವರಾಜ ಚೇಲೇರಿ, ಬಸವರಾಜ ವನಿಕೇರಿ, ಬಸಲಿಂಗ ಬಾಡಿಯಾಳ್, ದೇವಪ್ಪ ಲಿಂಗೇರಿ, ಭೀಮರಾಯ ಕೋನಳಿ, ಮಲ್ಲು ಅಚ್ಚಿಕೇರಿ, ಮಲ್ಲಿಕಾರ್ಜುನ ಮುಂಡರಗಿ, ಸಾಬಣ್ಣ ಕುರಿಯಾಳ, ಸಾಬಣ್ಣ ಹುಲಕಲï, ದುರ್ಗಪ್ಪ ಒರುಂಚಿ, ಮರಿಲಿಂಗ ಕೌಲಿ, ಪ್ರಭು, ಹಾಲಗೇರಾ, ಅಂಜಪ್ಪ ಸೈದಾಪೂರ್, ಮರೆಪ್ಪ ಬಿಳ್ಹಾರ್, ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net