ಬಸವಕಲ್ಯಾಣ:ವಿದ್ಯಾರ್ಥಿಗಳು ಕಲಿತ ಜ್ಞಾನ ಮತ್ತು ದೊರೆತ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಹೊಸ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ತಮ್ಮ ಬದುಕು ರೂಪಿಸಿಕೊಳ್ಳುವ ಜತೆಗೆ ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಸಹಕಾರಿಯಾಗಬೇಕು ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ನಿರ್ದೇಶಕ ಡಾ.ಬಸವರಾಜ ಎವಲೆ ಸಲಹೆ ನೀಡಿದರು.
ಶರಣಬಸವೇಶ್ವರ ವಿದ್ಯಾವರ್ಧಕ ಸಂದ ಅಡಿಯಲ್ಲಿ ನಡೆಯುತ್ತಿರುವ ನಗರದ ದೊಡ್ಡಪ್ಪ ಅಪ್ಪ ಬಿಸಿಎ ಮಹಾವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾನಾಡಿದ ಅವರು, ನಿರಂತರ ಪ್ರಯತ್ನದ ಮೂಲಕ ಜ್ಞಾನ ಮತ್ತು ಕೌಶಲ ಹೆಚ್ಚಿಸಿಕೊಂಡು ಯಶಸ್ವಿಯಾಗಬೇಕು ಎಂದರು.
ಎಸ್ಬಿಆರ್ ಶಾಲೆ ಪ್ರಾಚಾರ್ಯ ವಿದ್ಯಾಧರ ದುತ್ತರಗಿ ಮಾತನಾಡಿ, ಜೀವನದಲ್ಲಿ ಯಶಸ್ವಿ ಆಗಬೇಕಾದರೆ ಪರಿಶ್ರಮ ಬೇಕು. ಅಧ್ಯನಶೀಲತೆ, ಕೌಶಲ ಮತ್ತು ಸಂಶೋಧನಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಎಸ್ಎಸ್ಕೆ ಕಾಲೇಜಿನ ನಿವೃತ್ತ ಉಪನ್ಯಾಸಕ ಪೊ.ಆರ್.ಡಿ ಬಾಲಕಿಲೆ ಮಾತನಾಡಿದರು.
ಪ್ರಾಚಾರ್ಯ ಡಾ.ಲೋಕೇಶ ಮನ್ನಾಳೆ, ಉಪನ್ಯಾಸಕರಾದ ಶಾಂತಕುಮಾರ ಭೂರೆ, ಶಿಲ್ಪಾರಾಣಿ ಖಿಂಡಿಮಠ, ವಾಣಿಶ್ರೀ ಬಿರಾದಾರ, ಕೈಲಾಸ ಮಂಗಲಗಿ, ಮಹೇಶ್ವರಿ ಅಸ್ಟೂರೆ, ಮಿಥಿಲಾ ಬಿರಾದಾರ, ಸುಪ್ರಿಯಾ ಶೆಟಗಾರ, ಭಾಗ್ಯಲ್ಮ ಇದ್ದರು, ಅಂಜಲಿ ಹಾಗೂ ಅಂಬಿಕಾ ಸ್ವಾಗತಿಸಿದರು. ವೃಂದಾ ವಂದಿಸಿದರು, ಅಂಕಿತಾ ನಿರೂಪಣೆ ಮಾಡಿದರು. ಕುಮಾರಿ ಕಸ್ತೂರಿಬಾಯಿ ಪ್ರಾರ್ಧನಾ ಗೀತೆ ಹಾಡಿದರು. 2023-24ನೇ ಸಾಲಿನಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯಕ್ಕೆ ರ್ಯಾಂಕ್ ಪಡೆದ ದೊಡ್ಡಪ್ಪ ಅಪ್ಪ ಬಿಸಿಎ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.