ಕೆ.ಎಚ್​.ಮುನಿಯಪ್ಪಗೆ ಡಿಸಿಎಂ ಮಾಡಿ: ಗೋಪಾಲರಾವ ಕಟ್ಟಿಮನಿ ಒತ್ತಾಯ

ಗೋಪಾಲರಾವ ಕಟ್ಟಿಮನಿ
ಗೋಪಾಲರಾವ ಕಟ್ಟಿಮನಿ
Published on
ಚಿಂಚೋಳಿ: ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷದಲ್ಲಿ ಮಾದಿಗ ಸಮುದಾಯದ ಪ್ರಭಾವಿ ರಾಜಕಾರಣಿ ಕೆ. ಎಚ್. ಮುನಿಯಪ್ಪ ಅವರಿಗೆ ಹಿಂದುಳಿದ ಸಮುದಾಯಗಳ ಅಡಿಯಲ್ಲಿ ಉಪಮುಖ್ಯಮಂತ್ರಿ ಸ್ಥಾನ ಹಾಗೂ ಇನ್ನೂಳಿದ ಮೂರು ಜನ ಶಾಸಕರಿಗೆ ಸಚಿವ ಸ್ಥಾನ ನೀಡುವ ಮೂಲಕ ನ್ಯಾಯ ಸಮ್ಮತ ರಾಜಕೀಯ ಸ್ಥಾನಮಾನ ನೀಡಬೇಕು ಎಂದು ಕರ್ನಾಟಕ ಮಾದರ ಮಹಾಸಭಾ ಜಿಲ್ಲಾಧ್ಯಕ್ಷ ಗೋಪಾಲರಾವ ಕಟ್ಟಿಮನಿ ಕಾಂಗ್ರೇಸ್ ಪಕ್ಷದ ಹೈಕಮಾಂಡಗೆ ಒತ್ತಾಯಿಸಿದ್ದಾರೆ.
ಪಟ್ಟಣದಲ್ಲಿ ಶನಿವಾರದಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆ. ಎಚ್. ಮುನಿಯಪ್ಪ ಅವರು ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದು, ಕಾಂಗ್ರೇಸ್ ಪಕ್ಷದ ಅತ್ಯಂತ ಪ್ರಾಮಾಣಿಕ ಪಕ್ಷ ನಿಷ್ಠರಾಗಿದ್ದು, ಇಂತಹ ನಾಯಕರನ್ನು ಕಾಂಗ್ರೇಸ್ ಪಕ್ಷವು ಗೌರವಿಸಬೇಕು ಎಂದರು.
ರಾಜ್ಯದಲ್ಲಿನ ಕಾಂಗ್ರೇಸ್ ಪಕ್ಷದಲ್ಲಿ 6 ಜನ ಶಾಸಕರಿದ್ದು, ಇವರಲ್ಲಿ ಕೆ. ಎಚ್. ಮುನಿಯಪ್ಪ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು. ಇನ್ನೂಳಿದ ಮೂರು ಜನರಿಗೆ ಸಚಿವ ಸ್ಥಾನ ನೀಡಬೇಕು ಎಂದು ಕಾಂಗ್ರೇಸ್ ಪಕ್ಷದ ಹೈಕಮಾಂಡಗೆ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರದೀಪ ಮೇತ್ರಿ, ಆಕಾಶ ಕೊಳ್ಳೂರ್, ಮಲ್ಲು ಕೊಡಂಬುಲ್, ವಿಜಯಕುಮಾರ ಕೊರಡಂಪಳ್ಳಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net