ಕೈಲಾಸನಾಥ ಪಾಟೀಲಗೆ ರಾಜ್ಯ ಸಭಾ ಮಾಡಿ : ಕೆಪಿಸಿಸಿ ಉಪಾಧ್ಯಕ್ಷ ಸುಭಾಷ್ ರಾಠೋಡ ನೇತೃತ್ವದಲ್ಲಿ ಮನವಿ

,
,
Published on

ಪ್ರಮುಖ ಮುಖ್ಯಾಂಶಗಳು

  • ತಾಲೂಕು ಬ್ಲಾಕ್ ಕಾಂಗ್ರೇಸ್ ಸಮಿತಿ ಅಧ್ಯಕ್ಷ ಬಸವರಾಜ ಮಾಲಿ ಸರ್ವ ಸದಸ್ಯರು ಭಾಗಿ
ಚಿಂಚೋಳಿ: ದಿ. ವಿರೇಂದ್ರ ಪಾಟೀಲ್ ಅವರ ಸುಪುತ್ರರಾದ ಮಾಜಿ ಶಾಸಕ ಕೈಲಾಸನಾಥ ಪಾಟೀಲ್ ಅವರಿಗೆ ರಾಜ್ಯ ಸಭಾ ಸದಸ್ಯರನ್ನಾಗಿ ಮಾಡುವಂತೆ ಸೋಮವಾರದಂದು ರಾಷ್ಟ್ರೀಯ ಕಾಂಗ್ರೇಸ್ ಸಮಿತಿ ಹಾಗೂ ರಾಜ್ಯ ಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ತಾಲೂಕು ಬ್ಲಾಕ್ ಕಾಂಗ್ರೇಸ್ ಸಮಿತಿಯು ಮನವಿ ಸಲ್ಲಿಸಿದರು.
ಮನವಿಯಲ್ಲಿ ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷ ಭದ್ರವಾಗಿ ತಳವೂರಲು ಶ್ರಮಿಸಿದ ಅಗ್ರಗಣ್ಯ ನಾಯಕರಲ್ಲಿ ದಿ. ಮಾಜಿ ಮುಖ್ಯಮಂತ್ರಿ ವಿರೇಂದ್ರ ಪಾಟೀಲ್ ಅವರ ಕೊಡುಗೆ ಅವಿಸ್ಮರಣಿಯವಾಗಿದ್ದು, ದೂರದೃಷ್ಠಿಯ ನಾಯಕ ಪಾಟೀಲ್ ಅವರ ತಮ್ಮ ಅಧಿಕಾರದ ಅವಧಿಯಲ್ಲಿ ಸಾವಿರಾರು ಶಾಶ್ವತ ನೀರಾವರಿ ಯೋಜನೆಗಳನ್ನು ನಿರ್ಮಿಸಿ ರೈತಾಪಿ ವರ್ಗಕ್ಕೆ ಜೀವನಧಾರವಾಗಿಸಿದ್ದು, ಅವರ ಮಾರ್ಗದಲ್ಲಿಯೇ ನಡೆದು ನಮ್ಮ ಭಾಗದಲ್ಲಿ ಅತಿ ಸರಳ ಸಜ್ಜನಿಕೆಯ ರಾಜಕಾರಣಿ ಎನಿಸಿಕೊಂಡವರು ಮಾಜಿ ಶಾಸಕ ಕೈಲಾಸನಾಥ ಪಾಟೀಲ್ ಅವರು ಕೇವಲ ಒಂದು ಬಾರಿ ಮಾತ್ರ ಚಿಂಚೋಳಿ ಕ್ಷೇತ್ರದಿಂದ ಶಾಸಕರಾದರೂ ಕ್ಷೇತ್ರದ ಜನ ಎಂದೂ ಮರೆಯದಂತಹ ಸೇವೆ ಸಲ್ಲಿಸಿದ್ದಾರೆ.
ಚಿಂಚೋಳಿ ಮತಕ್ಷೇತ್ರದ ಮೀಸಲು ಆದ ಮೇಲೆ ಅವಕಾಶ ವಂಚಿತರಾದ ಅವರು ಇವತ್ತಿಗೂ ಕಾಂಗ್ರೇಸ್ ಪಕ್ಷದ ನಿಷ್ಠಾವಂತ ನಾಯಕರಾಗಿ ಕಳೆದ ಹಲವುಷವಿಧಾನ ಸಭೆ, ವಿಧಾನ ಪರಿಷತ್, ಹಾಗೂ ಲೋಕಸಭೆ ಚುನಾವಣೆಗಳಲ್ಲಿ ಪ್ರತಿ ಭೂತಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಕಳೆದ 25 ವರ್ಷಗಳಿಂದ ಯಾವುದೇ ಪ್ರತಿಫಲಾಪೇಕ್ಷೆ ಇರದೇ ಕಾಂಗ್ರೇಸ್ ಪಕ್ಷದ ಸದೃಢ ಸಂಘಟನೆಗೆ ನಿರಂತರವಾಗಿ ದುಡಿಯುತ್ತಿದ್ದಾರೆ. ಅವರಂತಹ ನಿಷ್ಕಲ್ಮಶ ವ್ಯಕ್ತಿತ್ವ ಸಿಗುವುದು ತುಂಬಾ ವಿರಳ, ಅವರೊಬ್ಬರು ನಮ್ಮ ಭಾಗದ ಕಾಂಗ್ರೇಸ್ ಪಕ್ಷದ ದೊಡ್ಡ ಆಸ್ತಿಯಾಗಿದ್ದಾರೆ. ಆದುದರಿಂದ ಅವರನ್ನು ರಾಜ್ಯ ಸಭಾ ಸದಸ್ಯರನ್ನಾಗಿ ನೇಮಕ ಮಾಡಲು ತಾಲೂಕು ಬ್ಲಾಕ್ ಕಾಂಗ್ರೇಸ್ ಸಮಿತಿ ವತಿಯಿಂದ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಸುಭಾಷ್ ರಾಠೋಡ, ತಾಲೂಕು ಬ್ಲಾಕ್ ಕಾಂಗ್ರೇಸ್ ಸಮಿತಿ ಅಧ್ಯಕ್ಷ ಬಸವರಾಜ ಮಾಲಿ, ರಾಜ್ಯ ಬಾಲ ಭವನ ಉಪಾಧ್ಯಕ್ಷ ಅನೀಲಕುಮಾರ ಜಮಾದಾರ, ಮೈಹಿಮೂದ ಪಟೇಲ, ಮಲ್ಲಿಕಾರ್ಜುನ ಬುಶೇಟ್ಟಿ, ರಾಘವೇಂದ್ರ ಗುತ್ತೇದಾರ, ಶಿವಶರಣ ಬಿರಾದಾರ, ಸುಭಾಷ್ ಚಂದ್ರ ಪಾಟೀಲ್, ಲಕ್ಷ್ಮಣ ಆವಂಟಿ, ಆನಂದ ಟೈಗರ್, ಸಂತೋಷ ಗುತ್ತೇದಾರ, ಜಗನ್ನಾಥ ಕಟ್ಟಿ, ಶರಣಪ್ಪ ಮೋತಕಪಳ್ಳಿ, ರಾಜೇಂದ್ರ ನಿಂಗದಳ್ಳಿ, ಸುದರ್ಶನರೆಡ್ಡಿ ಪಾಟೀಲ್, ಜಗನ್ನಾಥ ಇದಲಾಯಿ, ಆರ್. ಗಣಪತರಾವ, ಸಂಗಯ್ಯ ಸ್ವಾಮಿ, ರೇವಣಸಿದ್ದ ಪೂಜಾರಿ, ಜಗನ್ನಾಥ ಗುತ್ತೇದಾರ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net