ಕಡ್ಡಾಯವಾಗಿ ಮಕ್ಕಳಿಗೆ ಲಸಿಕೆ ಹಾಕಿಸಿ vaccine

ಕಡ್ಡಾಯವಾಗಿ ಮಕ್ಕಳಿಗೆ ಲಸಿಕೆ ಹಾಕಿಸಿ vaccine
ಕಡ್ಡಾಯವಾಗಿ ಮಕ್ಕಳಿಗೆ ಲಸಿಕೆ ಹಾಕಿಸಿ vaccine
Published on

ಪ್ರಮುಖ ಮುಖ್ಯಾಂಶಗಳು

  • ಪಲ್ಸ್​ ಪೋಲಿಯೋ ಅಭಿಯಾನಕ್ಕೆ ಇಒ ಚಾಲನೆ
ಚಿಂತಾಮಣಿ: ತಾಲೂಕಿನ 22,712 ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಗುರಿ ಹೊಂದಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ರಾಮಚಂದ್ರರೆಡ್ಡಿ ಹೇಳಿದರು. vaccine
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಲೂಕು ಆರೋಗ್ಯ ಇಲಾಖೆ, ಸಾರ್ವಜನಿಕ ಆಸ್ಪತ್ರೆಯಿಂದ ನಗರ, ತಾಲೂಕಿನಲ್ಲಿ ಹಮ್ಮಿಕೊಂಡಿದ್ದ 1ನೇ ಸುತ್ತಿನ ಪಲ್ಸ್​ ಪೋಲಿಯೋ ಅಭಿಯಾನದಲ್ಲಿ ಮಾತನಾಡಿದರು.
ತಾಲೂಕಿನ ಒಟ್ಟು -0&5 ವರ್ಷದ ಮಕ್ಕಳ ಸಂಖ್ಯೆ 22712, ನಗರದಲ್ಲಿನ ಒಟ್ಟು 0&-5 ಮಕ್ಕಳು 8446, ಗ್ರಾಮೀಣದಲ್ಲಿ ಒಟ್ಟು 0&-5 ಮಕ್ಕಳು 14266, ತಾಲೂಕಿನಲ್ಲಿ ಒಟ್ಟು ಲಸಿಕೆ ಹಾಕುವ ಒಟ್ಟು ಬೂತ್​ಗಳು 146, ನಗರದಲ್ಲಿನ ಒಟ್ಟು ಬೂತ್​ಗಳು 37 ಇವೆ ಎಂದರು.
ಗ್ರಾಮೀಣದ ಒಟ್ಟು 110 ಬೂತ್​ಗಳಲ್ಲಿ 598 ಕಾರ್ಯಕರ್ತರು, ನಗರದಲ್ಲಿ 154 ಬೂತ್​ಗಳಲ್ಲಿ 444 ಕಾರ್ಯಕರ್ತರು, ನಗರದಲ್ಲಿ ಒಂದು ಮೊಬೈಲ್​ ತಂಡ ಇಬ್ಬರು ಕಾರ್ಯಕರ್ತರು, ನಗರದಲ್ಲಿ 2 ಟ್ರಾನ್ಸಿಟ್​ ತಂಡಗಳಿಗೆ 4 ಕಾರ್ಯಕರ್ತರು, ತಾಲೂಕಿನಲ್ಲಿ ಮೇಲ್ವಿಚಾರಣೆ ಮಾಡುವವರು 29 ಜನ, ನಗರದಲ್ಲಿ 7, ಗ್ರಾಮೀಣದಲ್ಲಿ 22 ಮಂದಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. 29 ವಾಹನಗಳನ್ನು ಬಳಸಲಾಗುತ್ತಿದೆ ಎಂದು ಹೇಳಿದರು.ತಾಲೂಕಿನ ಎಲ್ಲ ಅಲೆಮಾರಿಗಳಿಗೂ, ಇಟ್ಟಿಗೆ ಗೂಡು ್ಯಾಕ್ಟರಿಗಳ ಬಳಿ, ಕಲ್ಲು ಬಂಡೆ ಒಡೆಯುವ ಕಡೆ, ತೋಟದ ಮನೆ, ಹೊಸ ಕಟ್ಟಡ ನಿಮಾರ್ಣ ಪ್ರದೇಶಗಳನ್ನು ಗುರುತಿಸಿದ್ದು ಅಲ್ಲಿರುವ ಎಲ್ಲ ಮಕ್ಕಳಿಗೆ ಲಸಿಕೆ ಹನಿ ಹಾಕಲಾಗುವುದು ಎಂದರು. ತಾಲೂಕಿನಲ್ಲಿ ಯಾವುದೇ ಮಗು ಲಸಿಕೆಯಿಂದ ವಂಚಿತವಾಗದಂತೆ ಕ್ರಮ ವಹಿಸಿದೆ. ಇದರ ಸಂಬಂಧವಾಗಿ ತಾಲೂಕಿನ ಎಲ್ಲ ಇಲಾಖಾಧಿಕಾರಿಗಳೊಂದಿಗೆ ಸಭೆ ಮಾಡಿ ಎಲ್ಲ ಇಲಾಖೆಯವರೂ ಸಹಕಾರ ನೀಡಲು ಕೋರಲಾಗಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net