ರಾಸುಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಿ cows

ರಾಸುಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಿ cows
ರಾಸುಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಿ cows
Published on
ಶ್ರೀನಿವಾಸಪುರ: ಹಾಲು ಉತ್ಪಾದಕರು ಕಡ್ಡಾಯವಾಗಿ ರಾಸುಗಳಿಗೆ ವಿಮೆ ವಾಡಿಸಬೇಕು. ವಿಮೆ ಪಡೆದ ಉತ್ಪಾದಕರು ಮತ್ತೊಂದು ಹಸು ಖರೀದಿಸಿ ಗುಣಮಟ್ಟದ ಹಾಲು ಹಾಕಬೇಕು ಎಂದು ಕೋಮಲ್ ನಿರ್ದೇಶಕ ಹನುಮೇಶ್ ಹೇಳಿದರು. cows
ತಾಲೂಕಿನ ನಾರಾಯಣಪುರ 185ನೇ ಹಾಗೂ ಗಿಜಿಗಾನಹಳ್ಳಿ 186ನೇ ಹಾಲು ಉತ್ಪಾದಕರ ಸಂ ಉದ್ಘಾಟಿಸಿ ವಾತನಾಡಿ, ರಾಸುಗಳಿಗೆ ವಿಮೆ ವಾಡಿಸಿರುವುದರಿಂದ ಹೆಚ್ಚು ಉಪಯೋಗವಿದೆ. ಸಂ ಉಳಿಸಲು ಗುಣಮಟ್ಟದ ಹಾಲು ಹಾಕಬೇಕು. ಸಂಗಳಲ್ಲಿ ರಾಜಕೀಯ ಮಾಡಬಾರದು ಎಂದರು.
ನಿರ್ದೇಶಕ ಕೆ.ಕೆ.ಮಂಜುನಾಥ್ ವಾತನಾಡಿ, ಗುಣಮಟ್ಟದ ಹಾಲು ಹಾಕುವುದರಿಂದ ಅಧಿಕ ಲಾಭ ಪಡೆಯಬಹುದು. ಮಕ್ಕಳನ್ನು ವಿದ್ಯಾವಂತರನ್ನಾಗಿ ವಾಡಿ ಕುಟುಂಬ ನಿರ್ವಹಣೆ ಮಾಡಬಹುದು ಎಂದು ತಿಳಿಸಿದರು.
ಉಪ ವ್ಯವಸ್ಥಾಪಕ ಮುನಿರಾಜು ವಾತನಾಡಿ, ಏಕರೂಪ ತಂತ್ರಾಂಶ ಜಾರಿಯಲ್ಲಿದೆ. ಪ್ರತಿಯೊಬ್ಬರೂ ಅವರವರ ಗುಣಮಟ್ಟದ ಹಾಲಿನ ಮೇಲೆ ಬಟವಾಡೆ ಪಡೆಯಬಹುದು. ಎನ್‌ಪಿಡಿಡಿ ಯೋಜನೆಯಡಿ ಸಂಗಳಿಗೆ ಅಗತ್ಯಪೀಠೋಪಕರಣ, ಗಣಕಯಂತ್ರ ವಿತರಿಸಲಾಗುವುದು. ಇವುಗಳನ್ನು ಸದ್ಬಳಕೆ ವಾಡಿಕೊಳ್ಳಬೇಕು. ಒಕ್ಕೂಟದಿಂದ ತಿಂಗಳಿಗೆ 3,000 ಗೌರವಧನ ಕಾರ್ಯದರ್ಶಿಗಳಿಗೆ ಸಿಗುತ್ತದೆ ಎಂದರು.
ವಿಸ್ತರಣಾಧಿಕಾರಿಗಳಾದ ಅಣ್ಣಯ್ಯಪ್ಪ ವಿನಾಯಕ ಗೋಪಾಲಕೃಷ್ಣ, ನಾರಾಯಣಪುರ ಮತ್ತು ಗಿಜಿಗಾನಹಳ್ಳಿ ಸಂಗಳ ಅಧ್ಯಕ್ಷರು, ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net