ಸಮಯ ಸದ್ಬಳಕೆ ಮಾಡಿಕೊಳ್ಳಿ Introductory program

ಗುಬ್ಬಿ Introductory program ತಾಲೂಕು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ. ಒ.ನಾಗರಾಜು ಮಾತನಾಡಿದರು. ಪ್ರಭು ಡಾ.ಕೆ.ಸಿ.ಮುದ್ದಗಂಗಯ್ಯ, ಡಾ.ತಿಮ್ಮನಾಯಕ್​, ಡಾ.ತಿಮ್ಮೇಗೌಡ, ಡಾ.ಚಂದ್ರಶೇಖರಯ್ಯ, ಶಿವಪ್ಪ, ಮಧು ಇದ್ದರು.

Published on

ಗುಬ್ಬಿ:

ವಿದ್ಯಾರ್ಥಿಗಳು ಶಿಸ್ತು, ಸಮಯ ಪಾಲನೆ, ಪರಿಶ್ರಮ, ಪ್ರಾಮಾಣಿಕತೆ ಅಳವಡಿಸಿಕೊಂಡರೆ

Introductory program

ಯಾವುದೇ ಕ್ಷೇತ್ರದಲ್ಲೂ ಯಶಸ್ಸು ಸಾಧಿಸಬಹುದು ಎಂದು ಪ್ರಾಂಶುಪಾಲ ಡಾ. ಒ.ನಾಗರಾಜು ತಿಳಿಸಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಥಮ ವರ್ಷಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪರಿಚಯಾತ್ಮಕ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಸಮಯ ಸದ್ಬಳಕೆ ಮಾಡಿಕೊಂಡು ಕನಸು ನನಸಾಗಿಸಿಕೊಳ್ಳಬೇಕು. ಶಿಕ್ಷಣವು ಕೇವಲ ಪದವಿ ಪಡೆಯುವ ಸಾಧನವಲ್ಲ. ಉತ್ತಮ ವ್ಯಕ್ತಿತ್ವ, ಸಂಸ್ಕಾರ, ಸಮಾಜಮುಖಿ ಬದುಕಿನ ಅಡಿಪಾಯವಾಗಿದೆ. ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕೇವಲ ಪಠ್ಯ ಜ್ಞಾನವಲ್ಲದೆ, ವ್ಯಕ್ತಿತ್ವ ವಿಕಸನ, ಸ್ವಾವಲಂಬನೆ, ಸಾಮಾಜಿಕ ಜವಾಬ್ದಾರಿಗಳ ಅರಿವು ಮೂಡಿಸಲಾಗುತ್ತದೆ ಎಂದರು.
ಶೈಕ್ಷಣಿಕ ಡೀನ್​ ಡಿ.ಎನ್​.ಮನೋಹರ್​ ಬಾಬು, ಗ್ರಂಥಪಾಲಕ ಡಾ.ರಾಘವೇಂದ್ರ, ಸಮಾಜಶಾಸ್ತ್ರ ಮುಖ್ಯಸ್ಥ ಆರ್​.ಅಶೋಕ್​, ಶ್ರೀಕಾಂತ್​, ರಾಜು, ತಿಮ್ಮಣ್ಣ, ಡಾ.ಸುಮುಖ, ಬಿ.ಎಸ್​.ಶಿವಕುಮಾರಸ್ವಾಮಿ, ಮಲ್ಲಿಕಾರ್ಜುನ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net