ಮಣ್ಣಿನ ಮೂರ್ತಿಗಳನ್ನೇ ತಯಾರಿಸಿ / VIJAYAPUR

ವಿಜಯಪುರದ ಚನ್ನರಾಯಪಟ್ಟಣ ಮುಖ್ಯರಸ್ತೆಯಲ್ಲಿನ ಎಸ್​ಎಲ್​ವಿ ಗಣಪತಿ ಮೂರ್ತಿ ಗೋದಾಮಿಗೆ ಪುರಸಭೆ ಮುಖ್ಯಾಧಿಕಾರಿ ಸತ್ಯನಾರಾಯಣ್​ ಹಾಗೂ ಸಿಬ್ಬಂದಿ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.
ವಿಜಯಪುರದ ಚನ್ನರಾಯಪಟ್ಟಣ ಮುಖ್ಯರಸ್ತೆಯಲ್ಲಿನ ಎಸ್​ಎಲ್​ವಿ ಗಣಪತಿ ಮೂರ್ತಿ ಗೋದಾಮಿಗೆ ಪುರಸಭೆ ಮುಖ್ಯಾಧಿಕಾರಿ ಸತ್ಯನಾರಾಯಣ್​ ಹಾಗೂ ಸಿಬ್ಬಂದಿ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.
Published on

ವಿಜಯಪುರ :

ಪರಿಸರ ಮಾಲಿನ್ಯ ನಿಯಂತ್ರಣಕ್ಕಾಗಿ ಪಿಒಪಿ ಗಣೇಶ ಮೂರ್ತಿಗಳ ತಯಾರಿಕೆ ಹಾಗೂ ಮಾರಾಟ ಮಾಡುವುದನ್ನು ಸರ್ಕಾರ ಸಂಪೂರ್ಣ ನಿಷೇಧಿಸಿದ್ದು, ಮೂರ್ತಿ ತಯಾರಕರು ಸಹಕಾರ ನೀಡಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಸತ್ಯನಾರಾಯಣ್​ ತಿಳಿಸಿದರು.

ಪಟ್ಟಣದ ಚನ್ನರಾಯಪಟ್ಟಣ ಮುಖ್ಯರಸ್ತೆಯಲ್ಲಿರುವ ಎಸ್​.ಎಲ್​.ವಿ.ಗಣಪತಿ ಗೋದಾಮಿಗೆ ಭೇಟಿ ನೀಡಿ ಗಣಪತಿ ಮೂರ್ತಿಗಳನ್ನು ಪರಿಶೀಲಿಸಿ ಮಾತನಾಡಿದರು.

ಕಡ್ಡಾಯವಾಗಿ ಮಣ್ಣಿನ ಗಣೇಶ ಮೂರ್ತಿ ತಯಾರಿಸಲು ಮೂರ್ತಿ ತಯಾರಿಕರಿಗೆ ನೋಟಿಸ್​ ಜಾರಿ ಮಾಡಲಾಗಿದೆ. ಗ್ರಾಹಕರು ಗಣೇಶ ಮೂರ್ತಿಗಳ ಬೇಡಿಕೆಗೆ ಅನುಗುಣವಾಗಿ ಈ ವರ್ಷ ಗಣೇಶ ಹಬ್ಬಕ್ಕೆ ಕಡ್ಡಾಯವಾಗಿ ಮಣ್ಣಿನ ಗಣಪತಿ ಮೂರ್ತಿಗಳನ್ನು ಮಾಡುವುದರ ಮೂಲಕ ಪರಿಸರದ ಬಗ್ಗೆ ಜಾಗೃತಿ ಮೂಡಿಸಬೇಕು. ಇಷ್ಟಕ್ಕೂ ಮೀರಿ ಯಾರಾದರೂ ಪಿಒಪಿ ಗಣಪತಿ ಮೂರ್ತಿ ತಯಾರಿಸಿ ಮಾರಾಟ ಮಾಡಿದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದೆಂದು ಎಚ್ಚರಿಸಿದರು.

ಪುರಸಭೆ ಪರಿಸರ ಅಭಿಯಂತ ಶೇಖರ್​ ರೆಡ್ಡಿ ಮಾತನಾಡಿ, ಪ್ರತಿವರ್ಷದಂತೆ ಈ ವರ್ಷವೂ ಗಣೇಶ ಹಬ್ಬಕ್ಕೆ ಕಡ್ಡಾಯವಾಗಿ ಮಣ್ಣಿನ ಗಣಪತಿ ಮೂರ್ತಿಗಳನ್ನು ಮಾಡುವುದರ ಮೂಲಕ ಪರಿಸರ ಕಾಳಜಿ ತೋರಬೇಕು. ಇಷ್ಟಕ್ಕೂ ಮೀರಿ ಯಾರಾದರೂ ಪಿಒಪಿ ಗಣಪತಿ ಮೂರ್ತಿ ತಯಾರಿಸಿ ಮಾರಾಟ ಮಾಡಿದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದೆಂದು ಎಚ್ಚರಿಸಿದರು.

ಮೂರ್ತಿ ತಯಾರಕ ಜಿ.ರಾಜಗೋಪಾಲ್​ ಮಾತನಾಡಿ, ಸುಮಾರು 45 ವರ್ಷಗಳಿಂದ ನಾವು ಮಣ್ಣಿನ ಗಣಪತಿ ಮೂರ್ತಿಯನ್ನೇ ತಯಾರಿಸುತ್ತಿದ್ದು, ಗ್ರಾಮಾಮತರ, ಮೈಸೂರು ಜಿಲ್ಲೆಗಳಲ್ಲದೇ ನೆರೆಯ ಆಂಧ್ರಪ್ರದೇಶ, ತಮಿಳುನಾಡಿಗೂ ಸಗಟು ದರದಲ್ಲಿ ಮಾರಾಟಮಾಡುತ್ತೇವೆ ಎಂದರು.

ಪುರಸಭೆ ಆರೋಗ್ಯ ಅಧಿಕಾರಿ ಲಾವಣ್ಯ, ಪೃಥ್ವಿ, ಪುರಸಭಾ ಸಿಬ್ಬಂದಿ, ಮೂರ್ತು ತಯಾರಕರಾದ ವರುಣ್​, ಗಗನ್​ ಕಾರ್ಮಿಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net