ಮಕ್ಕಳಿಗೆ ಸಂಪ್ರದಾಯದ ಅರಿವು ಮೂಡಿಸಿ children

ಮಕ್ಕಳಿಗೆ ಸಂಪ್ರದಾಯದ ಅರಿವು ಮೂಡಿಸಿ children
ಮಕ್ಕಳಿಗೆ ಸಂಪ್ರದಾಯದ ಅರಿವು ಮೂಡಿಸಿ children
Published on
ಮುಳಬಾಗಿಲು: ಮನೆಯಲ್ಲಿನ ಹಿರಿಯರು ಮಕ್ಕಳಿಗೆ ಧರ್ಮ, ಸಂಪ್ರದಾಯ, ಆಚಾರ, ವಿಚಾರಗಳ ಬಗ್ಗೆ ತಿಳಿವಳಿಕೆ ಮೂಡಿಸಬೇಕು ಎಂದು ಶೃಂಗೇರಿ ದ್ವಾರಕಾ ಜಗದ್ಗುರು ಸಂಸ್ಥಾನ ಶ್ರೀ ಕೃಷ್ಣಾನಂದ ಮಠದ ಗೋಪಾಲಾನಂದ ತೀರ್ಥ ಸ್ವಾಮೀಜಿ ಹೇಳಿದರು.children
ನಗರದ ವಿಠಲೇಶ್ವರಪಾಳ್ಯದ ಶ್ರೀ ಗೋವಿಂದರಾಜು ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಮಾತನಾಡಿ, ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಮಾನಸಿಕ ತೀವ್ರತೆಯ ಒತ್ತಡಕ್ಕೆ ಸಿಲುಕಿರುತ್ತಾರೆ. ಇವುಗಳಿಂದ ಹೊರ ಬರಲು ಭಕ್ತಿ, ಅಧ್ಯಾತ್ಮ ಮತ್ತು ಧ್ಯಾನದ ಮೊರೆ ಹೋಗಬೇಕು ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಇಡೀ ದೇಶದಾದ್ಯಂತ ನಾನಾ ಬಗೆಯ ವಿಚಾರಗಳು ನಡೆಯುತ್ತಿವೆ. ಅಪ್ರಾಪ್ತರು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುತ್ತಿದ್ದಾರೆ. ಸಮಾಜದಲ್ಲಿ ಉತ್ತಮ ವಾತಾವರಣ ನಿಮಾರ್ಣ ಆಗಬೇಕಾದರೆ ಭಕ್ತಿ ಮಾರ್ಗ ಮುಖ್ಯ ಎಂದು ಸಲಹೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net