ಪ್ರಸ್ತುತತೆ ಕಾಯ್ದುಕೊಳ್ಳುವುದೇ ದೊಡ್ಡ ಸವಾಲು: ಐಐಪಿಎಂ ಅಧ್ಯಕ್ಷೆ ಪಿ. ಹೇಮಲತಾ
ಐಐಪಿಎಂ 21ನೇ ಘಟಿಕೋತ್ಸವದಲ್ಲಿ ಪದವೀಧರರಿಗೆ ಪದವಿ ಪ್ರದಾನ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಭಾರತೀಯ ತೋಟಗಾರಿಕಾ ನಿರ್ವಹಣಾ ಸಂಸ್ಥೆಯಲ್ಲಿ (ಐಐಪಿಎಂ) ಬುಧವಾರ ನಡೆದ 21ನೇ ಘಟಿಕೋತ್ಸವ
9 ಚಿನ್ನದ ಪದಕ, 12 ಬೆಳ್ಳಿ ಪದಕ ಹಾಗೂ ಅತ್ಯುತ್ತಮ ಸಾಧನೆಗಾಗಿ 6 ಪ್ರಶಸ್ತಿ ಸೇರಿ ಒಟ್ಟು 342 ಮಂದಿ ಪದವಿ ಪ್ರದಾನ
ವೇಗವಾಗಿ ಬದಲಾಗುತ್ತಿರುವ ಡಿಜಿಟಲ್ ಯುಗದಲ್ಲಿ ಬದಲಾವಣೆಗೆ ಹೊಂದಿಕೊಳ್ಳುವ ಸಾಮರ್ಥ್ಯ, ನಿರಂತರ ಕಲಿಕೆ ಮತ್ತು ಹೊಸ ಪರಿಸ್ಥಿತಿಗಳಿಗೆ ತಕ್ಕಂತೆ ರೂಪಾಂತರಗೊಳ್ಳುವ ಮನೋಭಾವ ಅತ್ಯಗತ್ಯ
ಬೆಂಗಳೂರು ವೃತ್ತಿಯಲ್ಲಿ ಪ್ರಸ್ತುತತೆಯನ್ನು ಕಾಯ್ದುಕೊಳ್ಳುವುದು ಇಂದಿನ ಬಹುದೊಡ್ಡ ಸವಾಲಾಗಿದೆ ಎಂದು ಕೊಚ್ಚಿ ಆರ್ಥಿಕ ವಲಯದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಭಿವೃದ್ಧಿ ಆಯುಕ್ತೆ ಹಾಗೂ ಐಐಪಿಎಂ ಅಧ್ಯಕ್ಷೆ ಪಿ. ಹೇಮಲತಾ ಅಭಿಪ್ರಾಯ ವ್ಯಕ್ತಪಡಿಸಿದರು.
ಭಾರತೀಯ ತೋಟಗಾರಿಕಾ ನಿರ್ವಹಣಾ ಸಂಸ್ಥೆಯಲ್ಲಿ (ಐಐಪಿಎಂ) ಬುಧವಾರ ನಡೆದ 21ನೇ ಘಟಿಕೋತ್ಸವದಲ್ಲಿ ಪದವೀಧರರಿಗೆ ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು.
ವೇಗವಾಗಿ ಬದಲಾಗುತ್ತಿರುವ ಡಿಜಿಟಲ್ ಯುಗದಲ್ಲಿ ಬದಲಾವಣೆಗೆ ಹೊಂದಿಕೊಳ್ಳುವ ಸಾಮರ್ಥ್ಯ, ನಿರಂತರ ಕಲಿಕೆ ಮತ್ತು ಹೊಸ ಪರಿಸ್ಥಿತಿಗಳಿಗೆ ತಕ್ಕಂತೆ ರೂಪಾಂತರಗೊಳ್ಳುವ ಮನೋಭಾವ ಅತ್ಯಗತ್ಯವಾಗಿದೆ ಎಂದು ಹೇಳಿದರು.
ಪದವೀಧರರು ಜೀವನೋಪಾಯ ಸುಧಾರಿಸುವಂತಹ ವೃತ್ತಿಗಳನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ ಎಂದು ಸಲಹೆ ನೀಡಿದ ಅವರು, ಪ್ರಾಮಾಣಿಕತೆಯಿಂದ ಕೆಲಸ ಮಾಡುವ ಜತೆಗೆ ಸೇವಾ ಮನೋಭಾವ, ಜವಾಬ್ದಾರಿಯುತ ವೃತ್ತಿ ಜೀವನವನ್ನು ನಿರ್ಮಿಸಿಕೊಳ್ಳಲು ಮೌಲ್ಯಗಳನ್ನು ಅಳವಡಿಸಿಕೊಳ್ಳುವಂತೆ ತಿಳಿಸಿದರು.
ಘಟಿಕೋತ್ಸವ ಭಾಷಣ ಮಾಡಿದ ಸ್ಯಾಮ್ ಅಗ್ರಿ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಜಿವಿಕೆ ನಾಯ್ಡು ಮಾತನಾಡಿ, ಪದವೀಧರರ ಹೊಸ ವೃತ್ತಿ ಇದೀಗ ಆರಂಭವಾಗಲಿದೆ. ಅದು ನವೋದ್ಯಮ, ಸ್ವಂತ ಉದ್ಯಮ, ನೌಕರ ಅಥವಾ ಮಾಲೀಕ ಯಾವುದೇ ಆಗಿರಬಹುದು. ಧೈರ್ಯದಿಂದ ಆರಂಭಿಸಿ, ಸೋಲು ಗೆಲುವಿನ ಭಾಗವಾಗಿರಲಿದೆ ಎಂದು ಪ್ರೋತ್ಸಾಹಕ ನುಡಿಗಳನ್ನಾಡಿದರು.
ಯಶಸ್ಸು ದೊಡ್ಡ ಮಟ್ಟದಲ್ಲಿ ಸಿಗಬೇಕಿಲ್ಲ, ಸಣ್ಣದಾಗಿ ಆರಂಭಿಸಿ, ಅನುಭವದಿಂದ ಕಲಿತು ಸವಾಲುಗಳನ್ನು ಸ್ವೀಕರಿಸುತ್ತಾ ಹಂತ ಹಂತವಾಗಿ ಉದ್ಯಮಿಗಳಾಗುತ್ತಾ ರೂಪುಗೊಳ್ಳಿ. ಅವಕಾಶಗಳನ್ನು ಗುರುತಿಸಿ, ಮೌಲ್ಯವನ್ನು ಸೃಷ್ಟಿಸಿ ಹಾಗೂ ಭಾರತದ ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡಬಲ್ಲ ಹೆಚ್ಚಿನ ಸಂಖ್ಯೆಯ ಉದ್ಯಮಗಳನ್ನು ಆರಂಭಿಸುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಶೈಕ್ಷಣಿಕ ಡೀನ್ ಡಾ. ಎಸ್. ಜಾನ್ ಮೆನೋ ಉಪಸ್ಥಿತರಿದ್ದರು.
342 ಪದವಿ ಪ್ರದಾನ
2022-24 ಮತ್ತು 2023-25ನೇ ಸಾಲಿನಲ್ಲಿ ಐಐಪಿಎಂನಲ್ಲಿ ವ್ಯಾಸಂಗ ಮಾಡಿದ ಪಿಜಿಡಿಎಂ-ಎಬಿಪಿಎಂನ 178, ಎ್ಪಿಬಿಎಂನ 105, ಹಾಗೂ ಎಇಬಿಎಂನ 60 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಇದರಲ್ಲಿ 9 ಚಿನ್ನದ ಪದಕ, 12 ಬೆಳ್ಳಿ ಪದಕ ಹಾಗೂ ಅತ್ಯುತ್ತಮ ಸಾಧನೆಗಾಗಿ 6 ಪ್ರಶಸ್ತಿ ಸೇರಿ ಒಟ್ಟು 342 ಮಂದಿ ಪದವಿ ಪಡೆದರು.
"
ಸಂಸ್ಥೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಉತ್ತಮ ಸಂಶೋಧನೆಗಳು ನಡೆಯುತ್ತಿವೆ. ಇದಕ್ಕಾಗಿ ಆಂಧ್ರ ಪ್ರದೇಶ ಸರ್ಕಾರ ಹತ್ತು ಎಕರೆ ಜಮೀನು ನೀಡಿದೆ. ಕರ್ನಾಟಕದಲ್ಲಿಯೂ ಕಾಫಿ, ರಬ್ಬರ್, ಕೋಕೋ ಸೇರಿ ಹಲವು ಸಂಶೋಧನೆಗಳು ನಡೆಯುತ್ತಿವೆ.