ಮಾನಸಿಕ, ದೈಹಿಕ ಸದೃಢತೆ ಹೊಂದಿರಿ

ಕುಂಟ್ಲಪಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಕ್ರೀಡೆಗಳಲ್ಲಿ ಹಾವು ಏಣಿ ಆಟ ಆಡುತ್ತಿರುವ ವಿದ್ಯಾರ್ಥಿಗಳು.
ಕುಂಟ್ಲಪಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಕ್ರೀಡೆಗಳಲ್ಲಿ ಹಾವು ಏಣಿ ಆಟ ಆಡುತ್ತಿರುವ ವಿದ್ಯಾರ್ಥಿಗಳು.
Published on

: ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ, ಶಿಸ್ತು ಮತ್ತು ಸರಳತೆಗೆ ಆದ್ಯತೆ ನೀಡಿ ಎಂದು ಎಸ್​ಡಿಎಂಸಿ ಸದಸ್ಯೆ ಮೀನಾ ತಿಳಿಸಿದರು.

ಕುಂಟ್ಲಪಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿಗಳು ಮಾನಸಿಕ, ದೈಹಿಕ ಸದೃಢತೆ ಹೊಂದಬೇಕು. ಭವಿಷ್ಯ ರೂಪಿಸಿಕೊಳ್ಳಲು ಕ್ರೀಡೆ, ಸಾಂಸತಿಕ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಬೇಕು ಎಂದರು.
ಅತಿಥಿ ಶಿಕ್ಷಕಿ ಸಾವಿತ್ರಿ ಮಾತನಾಡಿ, ಪಾಠ ಬೌದ್ಧಿಕ ಜ್ಞಾನ ನೀಡಿದರೆ, ಆಟೋಟಗಳು ದೈಹಿಕ, ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ಮನಸ್ಸು, ಬುದ್ಧಿ ಮತ್ತು ದೇಹ ಚುರುಕುಗೊಳಿಸುವ ಆಟಗಳನ್ನು ಆಡಿಸಲು ಮುಂದಾಗಬೇಕು ಎಂದರು.
ಅತಿಥಿ ಶಿಕ್ಷಕ ಬಿ.ಎಸ್​.ಮಧು ಮಾತನಾಡಿ, ಅಧುನಿಕ ಜಗತ್ತಿನಲ್ಲಿ ಮೆದಳು, ಕಣ್ಣು, ಮನಸ್ಸನ್ನು ಬರಿ ಮೊಬೈಲ್​ ನೋಡುವುದರ ಕಡೆಗೆ ಕೇಂದ್ರೀಕರಿಸುವ ಕ್ರಿಯೆಯಿಂದಾಗಿ ಆಗುವ ಅವಘಡ ತಪ್ಪಿಸಲು ಹಳ್ಳಿ ಆಟಗಳು ಹೆಚ್ಚು ಪ್ರಯೋಜನಕಾರಿ ಮದ್ದಾಗಿದೆ. ಅವುಗಳನ್ನು ಉಳಿಸಿ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net