ಮಹಾವೀರರ ಸಂದೇಶ ಸಮಾಜಕ್ಕೆ ದಾರಿದೀಪ Mahavir's message

ಮಹಾವೀರರ ಸಂದೇಶ ಸಮಾಜಕ್ಕೆ ದಾರಿದೀಪ Mahavir's message
ಮಹಾವೀರರ ಸಂದೇಶ ಸಮಾಜಕ್ಕೆ ದಾರಿದೀಪ Mahavir's message
Published on
ವೇಮಗಲ್: ಕೇವಲ ಮನುಷ್ಯರಷ್ಟೇ ಅಲ್ಲದೆ ಪ್ರಾಣಿ-ಪಕ್ಷಿ ಹಾಗೂ ಸಕಲ ಜೀವರಾಶಿಗಳ ಮೇಲೆಯೂ ಕರುಣೆ ತೋರಬೇಕು ಎಂಬ ಮಹಾವೀರರ ಸಂದೇಶವು ಇಂದಿಗೂ ಸವಾಜಕ್ಕೆ ದಾರಿದೀಪ ಎಂದು ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಸಿ.ಎಸ್.ವೆಂಕಟೇಶ್ ಹೇಳಿದರು. Mahavir's message
ಕೋಲಾರ ತಾಲೂಕು ವೇಮಗಲ್-ಕುರುಗಲ್ ಪಟ್ಟಣ ಪಂಚಾಯಿತಿಯಲ್ಲಿ ಸೋಮವಾರ ಆಯೋಜಿಸಿದ್ದ ಭಗವಾನ್ ಮಹಾವೀರ ಜಯಂತಿಯಲ್ಲಿ ಮಾತನಾಡಿ, ಸತ್ಯ ಮತ್ತು ಆಸ್ತೇಯದ ಹಾದಿಯಲ್ಲಿ ನಡೆಯುವ ಮೂಲಕ ಪ್ರತಿಯೊಬ್ಬರೂ ಸವಾಜದಲ್ಲಿ ಶಾಂತಿ ನೆಲೆಸುವಂತೆ ವಾಡಬೇಕು ಎಂದು ತಿಳಿಸಿದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸ್.ಎಂ.ವೆಂಕಟೇಶ್ ವಾತನಾಡಿ, ಮಹಾಪುರುಷರ ಜಯಂತಿಗಳು ಕೇವಲ ಸಾಂಕೇತಿಕ ಆಚರಣೆಗಳಾಗದೆ ಅವರ ಜೀವನದ ಮೌಲ್ಯಗಳನ್ನು ನಮ್ಮ ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಲು ಪ್ರೇರಣೆಯಾಗಬೇಕು. ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಮತ್ತು ಸಾಮರಸ್ಯದ ಬದುಕಿಗೆ ಮಹಾವೀರರ ತತ್ವಗಳು ಶಕ್ತಿ ನೀಡುತ್ತವೆ ಎಂದು ತಿಳಿಸಿದರು.
ದೀಪಾ ವೆಂಕಟೇಶ್, ಸುಜಾತಾ ಮುನಿರಾಜು, ಶಶಿಕಲಾ ನಾಗೇಶ್, ನಾಮಿನಿ ಸದಸ್ಯರಾದ ತಿರುಮಳೇಶ್, ಸನಾವಲ್ಲ ಖಾನ್, ನಟರಾಜ್, ಪ್ರಮುಖ ಮುಖಂಡರು ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net