

ಪ್ರಮುಖ ಮುಖ್ಯಾಂಶಗಳು
ಮುಂಬೈ: ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾ(ಅಭಾವೀಮ)ಮಹಾರಾಷ್ಟ್ರಘಟಕದಿಂದ ಸಮುದಾಯದ ಗಣ್ಯರಿಗೆವಿವಿಧ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ವೈ.ಬಿ.ಚವನ್ಸೆಂಟರ್‌ನಲ್ಲಿ ಆಯೋಜಿಸಿದ್ದಕಾರ್ಯಕ್ರಮದಲ್ಲಿ ನೂತನವಾಗಿಆಯ್ಕೆಗೊಂಡ ಅಭಾವೀಮ ರಾಷ್ಟ್ರೀಯಅಧ್ಯಕ್ಷ ಈಶ್ವರ ಖಂಡ್ರೆ ಅವರಿಗೆವಿಶೇಷ ಸನ್ಮಾನ ಮಾಡಲಾಯಿತು.
ಇದೇವೇಳೆ ಕೆಎಲ್‌ಇ ಸಂಸ್ಥೆ ಮುಖ್ಯಸ್ಥಪ್ರಭಾಕರ ಕೋರೆಯವರಿಗೆ ವೀರಶೈವರತ್ನ, ಬಸವಸಮಿತಿ ಮುಖ್ಯಸ್ಥ ಅರವಿಂದ ಜತ್ತಿಅವರಿಗೆ ಬಸವ ರತ್ನ,ಮಾಜಿ ಮುಖ್ಯಮಂತ್ರಿಜಗದೀಶ್ ಶೆಟ್ಟರ್ ಅವರಿಗೆ ವೀರಶೈವಭೂಷಣ, ನೈಸ್ಸಂಸ್ಥೆ ಮುಖ್ಯಸ್ಥ ಅಶೋಕ್ ಖೇಣಿಅವರಿಗೆ ಪಂಚಾಚಾರ್ಯ ರತ್ನ,ಪಂಡರಪುರದಗಹಿನಿನಾಥ್ ಮಹಾರಾರಿಗೆ ವಿಠ್ಠಲಸೇವಾ ಪುರಸ್ಕಾರ,ಕಲಬುರಗಿಶರಣಬಸವೇಶ್ವರ ಸಂಸ್ಥಾನದ ಮಾತೋಶ್ರೀದಾಕ್ಷಾಯಿಣಿ ಅವ್ವ ಅವರಿಗೆಅಕ್ಕಮಹಾದೇವಿ ಪ್ರಶಸ್ತಿ ಹಾಗೂಮಂಗೇಶ್ ಚಿವಟೆ ಅವರಿಗೆ ವೀರಶೈವಆರೋಗ್ಯ ಧೂತ ಪ್ರಶಸ್ತಿ ನೀಡಿಸನ್ಮಾನಿಸಲಾಯಿತು.ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ಕಾಶೀಜಗದ್ಗುರು ಡಾ.ಚಂದ್ರಶೇಖರಶಿವಾಚಾರ್ಯ ಭಗವತ್ಪಾದರು,ವೀರಶೈವ ಲಿಂಗಾಯತಸಮುದಾಯದ ಎಲ್ಲ ಒಳಪಂಗಡಗಳಿಗೂಕೇಂದ್ರದ ಓಬಿಸಿ ಸೌಲಭ್ಯ ನೀಡಲುರಾಜಕೀಯ ಮುಖಂಡರು ಪ್ರಯತ್ನಮಾಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿಮಹಾರಾಷ್ಟ್ರದ ಮಾಜಿ ಸಿಎಂಸುಶೀಲಕುಮಾರ್ ಶಿಂಧೆ,ಸ್ಪೀಕರ್ ರಾಹುಲ್ನಾರ್ವೆಕರ್,ಅಭಾವೀಮ ಕರ್ನಾಟಕಘಟಕದ ಅಧ್ಯಕ್ಷ ಶಂಕರ ಬಿದರಿ,ರಾಷ್ಟ್ರೀಯಮಹಿಳಾ ಘಟಕದ ಅಧ್ಯಕ್ಷೆ ವೀಣಾಕಾಶಪ್ಪನವರ್,ಮಹಾರಾಷ್ಟ್ರಘಟಕದ ಅಧ್ಯಕ್ಷ ವಿಶ್ವನಾಥ್ ಚೌಕೋಟೆಮತ್ತಿತರರು ಉಪಸ್ಥಿತರಿದ್ದರು.
ವೀರಶೈವ ಲಿಂಗಾಯತ ಸಮಾಜದ ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಪ್ರಗತಿಗೆ ಒಗ್ಗಟ್ಟಿನಿಂದ ಶ್ರಮಿಸುವುದು ಎಲ್ಲರ ಜವಾಬ್ದಾರಿ. ರೇಣುಕಾದಿ ಆಚಾರ್ಯರ, ಬಸವಾದಿ ಶರಣರ ತತ್ವಗಳನ್ನು ಅಳವಡಿಸಿಕೊಂಡು, ಸಮಾಜದ ಅಭಿವೃದ್ಧಿಗೆ ಶಕ್ತಿ ತುಂಬಬೇಕು.
— ಈಶ್ವರ ಖಂಡ್ರೆ, ಸಚಿವರು ಹಾಗೂ ಅಭಾವೀಮ ಅಧ್ಯಕ್ಷ