ಮಹಾರುದ್ರಪ್ಪ ದಾಡಿಗುಂಡಿ ಸಮಾಜಕ್ಕೆ ಮಾದರಿ

ಮುರಗೋಡ ಅಪರೂಪದ ಪುಸ್ತಕ ಪ್ರೇಮಿ ಮಹಾರುದ್ರಪ್ಪ ದಾಡಿಗುಂಡಿ ದಂಪತಿಗೆ ನೀಲಕಂಠ ಸ್ವಾಮೀಜಿ, ಶಂಕರ ದೇವರು ಸನ್ಮಾನಿಸಿ ಗೌರವಿಸಿದರು. ಬಸವಣ್ಣೆವ್ವ ದಾಡಿಗುಂಡಿ, ಮಹಾಂತೇಶ ದಾಡಿಗುಂಡಿ ಇತರರು ಇದ್ದರು.
ಮುರಗೋಡ ಅಪರೂಪದ ಪುಸ್ತಕ ಪ್ರೇಮಿ ಮಹಾರುದ್ರಪ್ಪ ದಾಡಿಗುಂಡಿ ದಂಪತಿಗೆ ನೀಲಕಂಠ ಸ್ವಾಮೀಜಿ, ಶಂಕರ ದೇವರು ಸನ್ಮಾನಿಸಿ ಗೌರವಿಸಿದರು. ಬಸವಣ್ಣೆವ್ವ ದಾಡಿಗುಂಡಿ, ಮಹಾಂತೇಶ ದಾಡಿಗುಂಡಿ ಇತರರು ಇದ್ದರು.
Published on
ಮುರಗೋಡ: ಹಿರಿಯ ವಯಸ್ಸಿನಲ್ಲಿ ಸಮಾಜಕ್ಕೆ ತಮ್ಮದೇ ಆದ ಅಪರೂಪದ ಪುಸ್ತಕ ಸಂಗ್ರಹಣೆಯಿಂದ ಮಹಾರುದ್ರಪ್ಪ ದಾಡಿಗುಂಡಿ ಮಾದರಿಯಾಗಿದ್ದಾರೆ ಎಂದು ಮುರಗೋಡ ಮಹಾಂತ ದುರದುಂಡೀಶ್ವರ ಮಠದ ನೀಲಕಂಠ ಸ್ವಾಮೀಜಿ ಹೇಳಿದರು.
ಸ್ಥಳಿಯ ಪುಸ್ತಕ ಪ್ರೇಮಿ ಮಹಾರುದ್ರಪ್ಪ ದಾಡಿಗುಂಡಿ ದಂಪತಿ 61ನೇ ವಿವಾಹ ವಾರ್ಷಿಕೋತ್ಸವ ಹಾಗೂ ಶ್ರೀಮಠದ ಷಟಸ್ಥಳ ಧ್ವಜಾರೋಹಣ ಸಂದರ್ಭದಲ್ಲಿ ದಂಪತಿಯನ್ನು ಸನ್ಮಾನಿಸಿ ಮಾತನಾಡಿದರು. ಇಂದಿನ ಕಂಪ್ಯೂಟರ್​ ಯುಗದಲ್ಲಿ ಸುಮಾರು 70 ವರ್ಷಗಳಿಂದ ದಿನ ಪತ್ರಿಕೆ, ಪಂಚಾಂಗ, ಗ್ರಂಥ, ಸ್ಥಳಿಯ, ರಾಜ್ಯ, ದೇಶ, ವಿದೇಶಗಳ ಮಹತ್ವದ ಸುದ್ದಿ ಬರವಣಿಗೆ ಪುಸ್ತಕ ಲಭ್ಯ ಇದೆ. ಕುಟುಂಬದ ಸಾಮಾಜಿಕ ಸೇವೆ ನಿರಂತರವಾಗಿ ಸಾಗಲಿ ಎಂದು ಹಾರೈಸಿದರು.
ಮಹಾರುದ್ರಪ್ಪ ದಾಡಿಗುಂಡಿ ಮಾತನಾಡಿ, ಜೀವನದಲ್ಲಿ ಹಣ ಸಂಪತ್ತು ಗಳಿಸುವುದಕ್ಕಿಂತ ಉತ್ತಮ ಸಂಸ್ಕಾರ ರೂಢಿಸಿಕೊಳ್ಳುವುದು ಮುಖ್ಯ. ಮಕ್ಕಳ ಶೆಣಿಕ ಪ್ರಗತಿಗೆ ಪುಸ್ತಕ ಹಾಗೂ ದಿನ ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.
ಬೆಲವಾಡವರ್ತಿ ಮಠದ ಶಂಕರ ದೇವರು, ಬಸವಣ್ಣೆವ್ವ ದಾಡಿಗುಂಡಿ, ಮಹಾಂತೇಶ ದಾಡಿಗುಂಡಿ, ನೀಲಾಂಬಿಕಾ ಗಿರಿಜಾ ಅರಳಿಮರದ ಹಾಗೂ ಶ್ರೀ ಮಠದ ಪಾಠ ಶಾಲೆ ವಿದ್ಯಾರ್ಥಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net