ಸರ್ಕಾರಿ ಶಾಲೆಗಳ ಬಲವರ್ಧನೆಗೆ ಮ್ಯಾಗ್ನೆಟಿಕ್​ ಯೋಜನೆ / SULIBELE

ಹೊಸಕೋಟೆ ತಾಲೂಕಿನ ಸೂಲಿಬೆಲೆ ಸರ್ಕಾರಿ ಪ್ರಾಥಮಿಕ ಪ್ರೌಢಶಾಲೆ ಆವರಣದಲ್ಲಿ ರಂಗಮಂದಿರವನ್ನು ಶಾಸಕ ಶರತ್​ ಬಚ್ಚೇಗೌಡ ಉದ್ಘಾಟಿಸಿದರು. ಬಮುಲ್​ ನಿರ್ದೇಶಕ ಬಿ.ವಿ.ಸತೀಶಗೌಡ, ಹಿರಿಯ ಮುಖಂಡ ಗೋಪಾಲಗೌಡ, ನಾರಾಯಣಗೌಡ ಇದ್ದರು.
ಹೊಸಕೋಟೆ ತಾಲೂಕಿನ ಸೂಲಿಬೆಲೆ ಸರ್ಕಾರಿ ಪ್ರಾಥಮಿಕ ಪ್ರೌಢಶಾಲೆ ಆವರಣದಲ್ಲಿ ರಂಗಮಂದಿರವನ್ನು ಶಾಸಕ ಶರತ್​ ಬಚ್ಚೇಗೌಡ ಉದ್ಘಾಟಿಸಿದರು. ಬಮುಲ್​ ನಿರ್ದೇಶಕ ಬಿ.ವಿ.ಸತೀಶಗೌಡ, ಹಿರಿಯ ಮುಖಂಡ ಗೋಪಾಲಗೌಡ, ನಾರಾಯಣಗೌಡ ಇದ್ದರು.
Published on
ಸೂಲಿಬೆಲೆ : ಸರ್ಕಾರಿ ಶಾಲೆಗಳ ಬಲವರ್ಧನೆ ದೃಷ್ಟಿಯಿಂದ ಗ್ರಾಪಂಗೊಂದು ಮಾದರಿ ಶಾಲೆ ನಿಮಾರ್ಣ ಮಾಡಲು ಇನ್ಫೋಸಿಸ್​ ಸಹಯೋಗದಲ್ಲಿ ಮ್ಯಾಗ್ನೆಟಿಕ್​ ಶಾಲೆ ಯೋಜನೆ ರೂಪಿಸಲಾಗಿದೆ, 150 ಕೋಟಿ ರೂ. ವೆಚ್ಚದಲ್ಲಿ ಹೊಸಕೋಟೆ ತಾಲೂಕಿನ 30 ಶಾಲೆಗಳನ್ನು ನಿರ್ಮಿಸಲಾಗುವುದು ಶಾಸಕ ಶರತ್​ ಬಚ್ಚೇಗೌಡ ಹೇಳಿದರು.
ಹೊಸಕೋಟೆ ತಾಲೂಕಿನ ಸೂಲಿಬೆಲೆ ಸರ್ಕಾರಿ ಉರ್ದು ಪ್ರಾಥಮಿಕ ಹಾಗೂ ಪ್ರೌಢಶಾಲೆ ಆವರಣದಲ್ಲಿ ನಿಮಾರ್ಣವಾಗಿರುವ ಶಾಲಾ ಕೊಠಡಿಗಳ ಹಾಗೂ ರಂಗಮಂದಿರ ಉದ್ಘಾಟನೆ ಮತ್ತು ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು. ಕಂಪನಿಯ ಸಿಎಸ್​ಆರ್​ ಅನುದಾನದಲ್ಲಿ ಶಾಲಾ ಕಟ್ಟಡಗಳ ಜತೆಗೆ 10ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿಗೆ ರಂಗಮಂದಿರ ನಿಮಾರ್ಣ ಮಾಡಿಕೊಡಲಾಗಿದೆ ಎಂದರು.
ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪೂರ್ಣ ಪ್ರಮಾಣದಲ್ಲಿ ಮೂಲ ಸೌಕರ್ಯ ಕಲ್ಪಿಸಲಾಗಿದೆ. ಪದವಿ ಕಾಲೇಜಿಗೆ 3.50 ಕೋಟಿ ರೂ. ಹೆಚ್ಚುವರಿ ಅನುದಾನ ನೀಡಿ ಹೆಚ್ಚುವರಿ ಕೊಠಡಿಗಳ ನಿಮಾರ್ಣ ಮಾಡಲಾಗುತ್ತಿದೆ. ಗ್ರಾಮೀಣ ಮಕ್ಕಳಿಗೆ ಕಾಲೇಜು ಶಿಕ್ಷಣಕ್ಕೆ ಅಗತ್ಯ ಸೌಲಭ್ಯ ಜತೆಗೆ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ 1 ಎಕರೆ ಜಾಗದಲ್ಲಿ ಶಾದಿ ಮಹಲ್​ ನಿರ್ಮಿಸಲಾಗುವುದು. ಸೂಲಿಬೆಲೆ ಹಾಗೂ ನಂದುಗುಡಿ ಹೋಬಳಿ 55 ಕೆರಗಳಿಗೆ ನೀರು ತುಂಬಿಸುವ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿದ್ದು, 140 ಕೋಟಿ ರೂ. ವೆಚ್ಚದ ಕಾಮಗಾರಿಯಿಂದ ಅಂರ್ತಜಲ ವೃದ್ಧಿಯಾಗಿ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಒಕ್ಕಲಿಗ ಸಂಘದ ಮಾಜಿ ನಿರ್ದೇಶಕ ಬಿ.ಎನ್​.ಗೋಪಾಲಗೌಡ, ಬಮುಲ್​ ನಿರ್ದೇಶಕ ಬಿ.ವಿ.ಸತೀಶಗೌಡ, ಬಿಡಿಸಿಸಿ ಬ್ಯಾಂಕ್​ ನಿರ್ದೇಶಕ ಎಂ.ಬಿ.ವೆಂಕಟೇಶಪ್ಪ, ಗ್ರಾಪಂ ಅಧ್ಯಕ್ಷ ಜನಾರ್ಧನರೆಡ್ಡಿ, ಟಿಎಪಿಸಿಎಂಎಸ್​ ನಿರ್ದೇಶಕ ನಗರೇನಹಳ್ಳಿ ನಾಗರಾಜಪ್ಪ, ಯುವ ಮುಖಂಡ ಜಿ.ನಾರಾಯಣಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ, ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಅಕ್ಬರ್​ ಅಲಿಖಾನ್​, ತುಮಕೂರು ವಿವಿ ಸಿಂಡಿಕೇಟ್​ ಸದಸ್ಯ ದೇವರಾಜ್​, ಯಾದವ ಸಂಘದ ಅಧ್ಯಕ್ಷ ಮುತ್ಸಂದ್ರ ಆನಂದಪ್ಪ, ಸಹಕಾರ ಬ್ಯಾಂಕ್​ ನಿರ್ದೇಶಕ ಸೈಯದ್​ ಮಹಬೂಬ್​, ಗ್ಯಾರಂಟಿ ಯೋಜನೆ ನಿರ್ದೇಶಕ ಅಮ್ಜದ್​ ಬೇಗ್​, ಜಿಯಾವುಲ್ಲಾ, ಖಾಜಾ, ಇನಾಯತ್​, ಇಮ್ರಾನ್​ ಇದ್ದರು.

ಸೂಲಿಬೆಲೆಯಲ್ಲಿ ನಿಮಾರ್ಣವಾಗುತ್ತಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಾಲೇಜು ವಿದ್ಯಾರ್ಥಿಗಳ ವಿದ್ಯಾರ್ಥಿನಿಲಯವನ್ನು 75 ವಿದ್ಯಾರ್ಥಿಗಳಿಂದ 125 ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ನಿಮಾರ್ಣಕ್ಕೆ ಅನುದಾನ ನೀಡಲಾಗಿದೆ.

ಸರ್ಕಾರಿ ಉರ್ದು ಪ್ರಾಥಮಿಕ ಪ್ರೌಢಶಾಲೆ 340 ವಿದ್ಯಾರ್ಥಿಗಳಿಗೆ ಬಮುಲ್​ ನಿರ್ದೇಶಕ ಬಿ.ವಿ.ಸತೀಶಗೌಡ ಅವರು ಟ್ರಾ$್ಯ್ರಕ್​ ಸೂಟ್​ ಹಾಗೂ ಬ್ಯಾಗ್​ ನೀಡಿದ್ದಾರೆ. 10 ಲಕ್ಷ ರೂ. ವೆಚ್ಚದಲ್ಲಿ ರಂಗಮಂದಿರವನ್ನು ಶಾಸಕ ಶರತ್​ ಬಚ್ಚೇಗೌಡರ ಹೆಸರಿನಲ್ಲಿ ನಿರ್ಮಿಸಿಕೊಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net