ಯಾದಗಿರಿಯಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ಮಾದಿಗ ಮಹಾಸಭಾ ಕ್ಷೇಮಾಭಿವೃದ್ಧಿ ಸಂದ ಜಿಲ್ಲಾಧ್ಯಕ್ಷ ಗೋಪಾಲ ದಾಸನಕೇರಿ, ಲಿಂಗಪ್ಪ ಹತ್ತಿಮನಿ, ಚನ್ನಯ್ಯ ಮಾಳಿಕೇರಿ ಅವರನ್ನು ಸನ್ಮಾನಿಸಲಾಯಿತು. ಸಾಬಣ್ಣ ಕಡೇಚೂರು, ಸಾಬಣ್ಣ ಸೈದಾಪುರ, ಬೆಂಜಿಮೆನ್ ಹಿರೇನೂರ್, ವಿಜಯ ಬೆಳಗುಂದಿ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ನೂತನ ಜಿಲ್ಲಾಧ್ಯಕ್ಷ ಗೋಪಾಲ ದಾಸನಕೇರಿ ಭರವಸೆ
ಸಂಘದ ಪದಾಧಿಕಾರಿಗಳ ಆಯ್ಕೆ
ಯಾದಗಿರಿ: ಮಾದಿಗ ಸಮಾಜದ ಅಭಿವೃದ್ಧಿಗೆ ನಾನು ಸದಾ ಬದ್ಧನಾಗಿದ್ದೇನೆಂದು ಕರ್ನಾಟಕ ಮಾದಿಗ ಮಹಾಸಭಾ ಕ್ಷೇಮಾಭಿವೃದ್ಧಿ ಸಂಘದ ನೂತನ ಅಧ್ಯಕ್ಷ ಗೋಪಾಲ ದಾಸನಕೇರಿ ಹೇಳಿದರು.
ನಗರದ ಹೊಸಳ್ಳಿ ಕ್ರಾಸ್ ಬಳಿ ಶನಿವಾರ ಆಯೋಜಿಸಿದ್ದ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ದಾಸನಕೇರಿ ಮಾತನಾಡಿ, ಸ್ವಾತಂತ್ರ್ಯಸಿಕ್ಕು ಎಂಟು ದಶಕ ಕಳೆದರೂ ಇನ್ನು ದಲಿತ ಸಮಾಜದ ಜನರ ಮೇಲೆ ನಿಂದನೆ, ಕಿರುಕುಳ, ದೌರ್ಜನ್ಯ, ಅನ್ಯಾಯ ಜೀವಂತವಾಗಿದೆ. ಅವುಗಳಿಗೆ ಶಾಶ್ವತ ಪರಿಹಾರಕ್ಕೆ ಮಾದಿಗ ಸಮಾಜದ ಪ್ರತಿಯೊಬ್ಬರಿಗೂ ಒಗ್ಗಟ್ಟಾಗಿ ನಿಲ್ಲಬೇಕು ಎಂದರು.
ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಲಿಂಗಪ್ಪ ಹತ್ತಿಮನಿ ಮಾತನಾಡಿ, ಸಮಾಜದ ಜನರು ಒಗ್ಗಟ್ಟಿನಿಂದ ಇರಬೇಕು, ನಮ್ಮ ಮಕ್ಕಳಿಗೆ ಕಡ್ಡಾಯವಾಗಿ ಉನ್ನತ ಶಿಕ್ಷಣ ಕೊಡಿಸಬೇಕು. ಶಿಕ್ಷಣದಿಂದಲ್ಲೇ ಜೀವನದಲ್ಲಿ ಎಲ್ಲ ಸಾಧನೆ ಮಾಡಬಹುದೆಂದರು.ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆಯಾದ ಚನ್ನಯ್ಯ ಮಾಳಿಕೇರಿ ಮಾತನಾಡಿದರು. ಸಭೆಯ ನೇತೃತ್ವವನ್ನು ಸೈದಾಪುರ ವಲಯದ ಮುಖಂಡ ಹಣಮಂತ ದೊಡ್ಡಮನಿ ಸೌರಾಷ್ಟ್ರಹಳ್ಳಿ ವಹಿಸಿದ್ದರು.
ಈ ವೇಳೆ ಜೆಡಿಎಸ್ ಮುಖಂಡ ತಾಯಪ್ಪ ಬದ್ದೇಪಲ್ಲಿ, ಸಾಬಣ್ಣ ಕಡೇಚೂರು, ಸಾಬಣ್ಣ ಸೈದಾಪುರ, ಬೆಂಜಿಮೆನ್ ಹಿರೇನೂರ್, ವಿಜಯ ಬೆಳಗುಂದಿ, ಶರಣಪ್ಪ ದೊಡ್ಡಮನಿ ಮುಷ್ಟೂರ್, ಸಾಮೂವೆಲ್ ಕಣೆಕಲ್, ಸಂಗನಬಸ್ಸು ಬಾಚವಾರ, ಸಾಬು, ಹೊರುಂಚ ಇತರರಿದ್ದರು. ಈ ವೇಳೆ ನೂತನ ಪದಾಧಿಕಾರಿಗಳಿಗೆ ಸನ್ಮಾನಿಸಲಾಯಿತು.