ಮಧು ತಂಡ ಚಾಂಪಿಯನ್

ಪ್ರಥಮ ಸ್ಥಾನಗಳಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದ ಮಧು ತಂಡ.
ಪ್ರಥಮ ಸ್ಥಾನಗಳಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದ ಮಧು ತಂಡ.
Published on
ಸೋಮವಾರಪೇಟೆ: ಇಲ್ಲಿನ ತಾಕೇರಿ ಗ್ರಾಮದ ಟೀಂ ತಾಕೇರಿ ವತಿಯಿಂದ ಭಾನುವಾರ ಮೂರನೇ ವರ್ಷದ ಪಂಚಾಯಿತಿ ಮಟ್ಟದ ಫುಟ್ ಬಾಲ್ ಪಂದ್ಯ ಆಯೋಜಿಸಲಾಗಿತ್ತು.
ಪಂದ್ಯದಲ್ಲಿ ಸುಮಾರು 8 ತಂಡಗಳು‌ ಭಾಗವಹಿಸಿದ್ದವು.ಮಧು ತಂಡ ಪ್ರಥಮ ಸ್ಥಾನಗಳಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಕೀರ್ತನ್ ತಂಡ ದ್ವಿತೀಯ ಸ್ಥಾನಗಳಿಸಿತು.
ಪ್ರಥಮ‌ ಬಹುಮಾನವಾಗಿ 40 ಕೆ.ಜಿ ಟಗರು ಹಾಗೂ ಟ್ರೋಫಿ, ದ್ವಿತೀಯ ಬಹುಮಾನವಾಗಿ 30 ಕೆ.ಜಿ. ಕುರಿ ಹಾಗೂ ಟ್ರೋಫಿ ನೀಡಲಾಯಿತು. ಹಾಗೂ ಉತ್ತಮ ಆಟಗಾರರಿಗೆ ನಾಟಿ ಕೋಳಿ ಬಹುಮಾನವಾಗಿ ನೀಡಲಾಯಿತು.
ಅತಿ ಹೆಚ್ಚು ಗೋಲ್ ಗಳಿಸಿದ ಮಲ್ಲಿಜಿರ ಪ್ರವೀಣ್, ಉತ್ತಮ‌ ಆಲ್‌ ರೌಂಡರ್ ಮಧು, ಬೆಸ್ಟ್ ಪ್ಲೆಯರ್ ಕೀರ್ತನ್, ಎಮರ್ಜಿಂಗ್ ಪ್ಲೆಯರ್ ಮೇಘನ್ ಅವರನ್ನು ಗೌರವಿಸಲಾಯಿತು.
ಶಾಸಕ ಮಂತರ್ ಗೌಡ ಕ್ರೀಡಾಕೂಟಕ್ಕೆ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಯುವಕರು ಒಗ್ಗೂಡಲು ಕ್ರೀಡೆ ಸಹಕಾರಿ, ಆ ಕೆಲಸವನ್ನು ಟೀಂ ತಾಕೇರಿ ತಂಡ ಮಾಡಿಕೊಂಡು ಬರುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಕ್ರಮ ಮಾಡುವಂತಾಗಲಿ ಎಂದು ಹೇಳಿದರು.
ಉದ್ಯಮಿ ಪ್ರಸನ್ನ ಎಡಿಕೇರಿ ಮಾತನಾಡಿ ಹಳ್ಳಿಗಾಡಿನಲ್ಲಿ ಎಲ್ಲರೂ ಒಗ್ಗೂಡುವ ಸಲುವಾಗಿ ಈ ರೀತಿಯ ಕ್ರೀಡಾಕೂಟ ಆಯೋಜನೆ ಮಾಡಿಕೊಂಡು ಬರುತ್ತಿರುವುದು ಶ್ಲಾಘನೀಯ ವಿಷಯ. ಮುಂದಿನ‌ದಿನಗಳಲ್ಲಿ ಇನ್ನಷ್ಟು ಈ ರೀತಿಯ ಕಾರ್ಯಕ್ರಮ‌ ಹಮ್ಮಿಕೊಳ್ಳಲಿ ಎಂದರು.
ತಾಕೇರಿ ಗ್ರಾಮದ ಅಧ್ಯಕ್ಷ ಎಸ್.ಪಿ.ಪೊನ್ನಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ.ಸತೀಶ್, ಮಿಥುನ್ ಹಾನಗಲ್ ಹಾಗೂ ಟೀಂ‌ ತಾಕೇರಿಯ ಸದಸ್ಯರು ಪಾಲ್ಗೊಂಡಿದ್ದರು.
ತಾಕೇರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 10 ಕ್ಕೂ ಹೆಚ್ಚು ವರ್ಷ ಸೇವೆ ಸಲ್ಲಿಸಿದ ಶಿಕ್ಷಕ ರಮೇಶ್ ಹಾಗೂ ವನಜಾ ಅವರಿಗೆ ಟೀಂ ತಾಕೇರಿವತಿಯಿಂದ ಗೌರವ ಸಲ್ಲಿಸಲಾಯಿತು.
ತೀರ್ಪುಗಾರರಾಗಿ ಪವನ್ ಹಾಗೂ ಅಮೃತ್ ತಾಕೇರಿನಿರ್ವಹಿಸದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net