ಮಧುಗಿರಿ ವಾರದ ಸಂತೆ ಸ್ಥಳಾಂತರ

Madhugiri weekly fair shifted
Madhugiri weekly fair shifted
Published on
ಮಧುಗಿರಿ: ಪುರಸಭೆಯ ಸಂತೆಯನ್ನು ಜ.21ರಿಂದ ಎಪಿಎಂಸಿ ಆವರಣಕ್ಕೆ ಸ್ಥಳಾಂತರಿಸಲಾಗಿದೆ.
ಪುರಸಭೆಯ ಸಂತೆಯನ್ನು ಹಲವು ವರ್ಷಗಳಿಂದ ಪಟ್ಟಣದ ಲಾಲ್​ ಬಹದ್ದೂರ್​ ಶಾಸ್ತ್ರಿ ಸಂತೆ ಮೈದಾನದಲ್ಲಿ ಪ್ರತಿ ಬುಧವಾರ ನಡೆಸಲಾಗುತ್ತಿತ್ತು. ಆದರೆ ಈ ಮೈದಾನದ ಜಾಗ ಕಿರಿಯದಾಗಿದ್ದು, ಇದರಿಂದ ಜೇಬುಗಳ್ಳತನ ಮತ್ತು ಸರಗಳ್ಳತನ ಪ್ರಕರಣಗಳ ಸಂಖ್ಯೆ ಹೆಚ್ಚಾಗಿ ವರದಿಯಾಗುತ್ತಿದ್ದವು. ಜತೆಗೆ ಫುಟ್​ಪಾಟ್​ ಬೀದಿಬದಿ ವ್ಯಾಪಾರಿಗಳು, ಜನಸಂದಣಿ ಹಾಗೂ ವಾಹನ ಸಂಚಾರ ದಟ್ಣಣೆ, ಾರ್ಕಿಂಗ್​ ವ್ಯವಸ್ಥೆ ಇಲ್ಲದಿರುವುದರಿಂದ ಪೊಲೀಸ್​ ಇಲಾಖೆ ಸೂಚನೆಯಂತೆ ವಾರದ ಸಂತೆಯನ್ನು ಜ.21ರಿಂದ ಗೌರಿಬಿದನೂರು ರಸ್ತೆಯಲ್ಲಿರುವ ಎಪಿಎಂಸಿ ಆವರಣಕ್ಕೆ ಸ್ಥಳಾಂತರಿಸಲಾಗಿದ್ದು, ಬೀದಿಬದಿ ವ್ಯಾಪಾರಿಗಳು ಸಹಕರಿಸಬೇಕೆಂದು ಪುರಸಭೆ ಆಡಳಿತಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net