ಲುಲು ಮಾಲ್​​ನಿಂದ ಮಾದಕವಸ್ತು ವಿರೋಧಿ ಜಾಗೃತಿ ಅಭಿಯಾನ- Lulu Mall

ಮಾದಕವಸ್ತು ವಿರೋಧಿ ಜಾಗೃತಿ ಅಭಿಯಾನ
ಮಾದಕವಸ್ತು ವಿರೋಧಿ ಜಾಗೃತಿ ಅಭಿಯಾನ
Published on
ಬೆಂಗಳೂರು: ‘ಮಾದಕವಸ್ತು ಮುಕ್ತ ಬೆಂಗಳೂರು’ ನಿರ್ಮಾಣದ ಉದ್ದೇಶದಿಂದ ರಾಜಾಜಿನಗರದ ಲುಲು ಮಾಲ್, ಬೆಂಗಳೂರು ಸಿಟಿ ಪೊಲೀಸರ ಸಹಯೋಗದಲ್ಲಿ ‘ಬೇಡ ಬ್ರೋ, ಸೇ ನೋ ಟು ಡ್ರಗ್ಸ್’ ಎಂಬ ಪರಿಕಲ್ಪನೆಯಡಿ ಭಾನುವಾರ ಆಯೋಜಿಸಿದ್ದ ಮಾದಕವಸ್ತು ವಿರೋಧಿ ಜಾಗೃತಿ ಅಭಿಯಾನದಲ್ಲಿ ಜನರಿಗೆ ಅರಿವು ಮೂಡಿಸಲಾಯಿತು.
ಬೆಂಗಳೂರು ಸಿಟಿ ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತ ಎನ್. ಯತೀಶ್ ರ‌್ಯಾಲಿಗೆ ಚಾಲನೆ ನೀಡಿದರು. ವಿಜಯನಗರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ವಿ.ಎಸ್.ಭೂತೇಗೌಡ, ಮಾಗಡಿ ರಸ್ತೆ ಪೊಲೀಸ್ ಠಾಣೆಯ ನಿರೀಕ್ಷಕ ಶಂಕರಗೌಡ ಬಸನಗೌಡರ್, ಲುಲು ಗ್ರೂಪ್ ಕರ್ನಾಟಕದ ನಿರ್ದೇಶಕ ನೋಮನ್ ಅಜೀಜ್ ಖಾನ್, ಪ್ರಾದೇಶಿಕ ವ್ಯವಸ್ಥಾಪಕ ಕೆ.ಪಿ. ಜಮಾಲ್, ಸರ್ಕಾರಿ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವಿದ್ಯಾರ್ಥಿಗಳು ರ್ಯಾಲಿಯಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ಜಾಥಾವು ರಾಜಾಜಿನಗರದ ಪ್ರಮುಖ ಬೀದಿಗಳಲ್ಲಿ 5 ಕಿಮೀ ನಡೆಯಿತು. ರ‌್ಯಾಲಿಯಲ್ಲಿ ‘ಬೇಡ ಬ್ರೋ, ಸೇ ನೋ ಟು ಡ್ರಗ್ಸ್’ ಮತ್ತು ‘ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ’ಎಂಬ ಸಂದೇಶವಿದ್ದ ಲಕಗಳನ್ನು ಹಿಡಿದು ವಿದ್ಯಾರ್ಥಿಗಳು ಘೋಷಣೆ ಕೂಗಿದರು. ಮಾರ್ಗದುದ್ದಕ್ಕೂ ಸಾರ್ವಜನಿಕರಿಗೆ ಕರಪತ್ರ ಹಂಚುವ ಮೂಲಕ ಮಾದಕವಸ್ತು ಮುಕ್ತ ಬೆಂಗಳೂರಿಗಾಗಿ ಪ್ರತಿಜ್ಞೆ ತೆಗೆದುಕೊಳ್ಳಲು ನಾಗರಿಕರನ್ನು ಪ್ರೋತ್ಸಾಹಿಸಲಾಯಿತು.
ಐಪಿಎಸ್ ಅಧಿಕಾರಿ ಎನ್.ಯತೀಶ್ ಮಾತನಾಡಿ, ಮಾದಕವಸ್ತು ವಿರುದ್ಧ ಹೋರಾಟದಲ್ಲಿ ಪೊಲೀಸರೊಂದಿಗೆ ನಾಗರಿಕರು, ಕುಟುಂಬಗಳು ಮತ್ತು ಲುಲು ಮಾಲ್‌ನಂತಹ ಸಂಸ್ಥೆಗಳ ಸಕ್ರಿಯವಾಗಿ ಪಾಲ್ಗೊಳ್ಳುವಿಕೆ ಅಗತ್ಯ ಇದೆ. ಮಾದಕವಸ್ತು ಸೇವಿಸಿ ಅಮೂಲ್ಯವಾದ ಜೀವನವನ್ನೇ ಯುವ ಸಮುದಾಯ ಹಾಳು ಮಾಡಿಕೊಳ್ಳುತ್ತಿದೆ. ಯಾವುದೇ ಕಾರಣಕ್ಕೂ ದುಶ್ಚಟ ಅಂಟಿಸಿಕೊಳ್ಳಬೇಡಿ ಎಂದು ಯುವ ಜನಾಂಗಕ್ಕೆ ಕಿವಿ ಮಾತು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net