ಶೌರ್ಯ, ಪದ್ಮಶ್ರೀ ಪುರಸ್ಕೃತರ ಕುಟುಂಬಗಳಿಗೆ ಉಚಿತ ಸೇವೆ ಘೋಷಿಸಿದ ಅನ್ವಯ ಕಿನ್ ಕೇರ್- free services for families Padma Shri awardees

ಅನ್ವಯ ಕಿನ್ ಕೇರ್ ಸಂಸ್ಥೆ
ಅನ್ವಯ ಕಿನ್ ಕೇರ್ ಸಂಸ್ಥೆ
Published on
ಬೆಂಗಳೂರು: ಆರೈಕೆ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಅನ್ವಯ ಕಿನ್ ಕೇರ್ ಸಂಸ್ಥೆ, ವಾರ್ಷಿಕೋತ್ಸವದ ಸಂಭ್ರಮದ ನೆನಪಿಗಾಗಿ ಹಿರಿಯ ನಾಗರಿಕರಿಗಾಗಿ ಮೂರು ಹೊಸ ಸೇವೆಗಳನ್ನು ಲೋಕಾರ್ಪಣೆಗೊಳಿಸಿದೆ.
ದೇಶದ 38ಕ್ಕೂ ಹೆಚ್ಚು ನಗರಗಳಲ್ಲಿ 1.5 ಲಕ್ಷಕ್ಕೂ ಅಧಿಕ ಹಿರಿಯ ನಾಗರಿಕರಿಗೆ ಸೇವೆ ಸಲ್ಲಿಸುತ್ತಿರುವ ಸಂಸ್ಥೆ, ವಾರ್ಷಿಕೋತ್ಸವದ ಶುಭ ಸಂದರ್ಭದಲ್ಲಿ ಹಿರಿಯ ನಾಗರಿಕರ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಅಗತ್ಯಗಳನ್ನು ಪೂರೈಸುವ ಕ್ಯುರಾಪಾಡ್, 3000 ಬಿಸಿ ಥೆರಾಪ್ಯೂಟಿಕ್ಸ್ ಮತ್ತು ಪುಣ್ಯಕ ಎಂಬ ಹೊಸ ಸೇವೆಗಳಿಗೆ ಚಾಲನೆ ನೀಡಿದೆ.
ಈ ಸಂದರ್ಭದಲ್ಲಿ ದೇಶಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ ಶೌರ್ಯ ಪ್ರಶಸ್ತಿ (ಪರಮವೀರ ಚಕ್ರ, ವೀರ ಚಕ್ರ, ಸೇನಾ ಪದಕ) ಹಾಗೂ ಪದ್ಮಶ್ರೀ ಪುರಸ್ಕೃತರ ಕುಟುಂಬಗಳಿಗೆ ಅನ್ವಯ ಸಂಸ್ಥೆಯು, ಜೀವಮಾನದ ಉಚಿತ ತುರ್ತು ಸ್ಪಂದನ ವ್ಯವಸ್ಥೆ ಹಾಗೂ ಹಿರಿಯ ನಾಗರಿಕರ ಸ್ಮಾರ್ಟ್‌ ವಾಚ್ ಸೇವೆಯನ್ನು ಕೊಡುಗೆಯಾಗಿ ಒದಗಿಸುವುದಾಗಿ ಘೋಷಿಸಿದೆ. ವಯಸ್ಸಾದ ಕಾಲದಲ್ಲಿ ದೇಶದ ಈ ಮಹಾನ್ ಸಾಧಕರು ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಒಂಟಿಯಾಗಬಾರದು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ಅನ್ವಯ ಕಿನ್ ಕೇರ್ ಸಂಸ್ಥಾಪಕ ಪ್ರಶಾಂತ್ ರೆಡ್ಡಿ ಮಾತನಾಡಿ, "ಮಕ್ಕಳಿಂದ ದೂರವಿದ್ದು ಒಂಟಿಯಾಗಿ ವಾಸಿಸುವ ದೇಶದ ಲಕ್ಷಾಂತರ ಪಾಲಕರ ಭೀತಿ ಮತ್ತು ಆತಂಕಕ್ಕೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ 10 ವರ್ಷಗಳ ಹಿಂದೆ ಅನ್ವಯ ಶುರುವಾಯಿತು. ಇಂದು ಲಕ್ಷಾಂತರ ಕುಟುಂಬಗಳಿಗೆ ನೆಮ್ಮದಿಯ ನಿದ್ರೆ ನೀಡಿದ್ದೇವೆ ಎಂಬ ತೃಪ್ತಿ ನಮಗಿದೆ ಎಂದರು.
ತೆಲುಗು ನಟ ಬ್ರಹ್ಮಾನಂದಂ, ತೆಲಂಗಾಣ ಸರ್ಕಾರದ ವಿಶೇಷ ಮುಖ್ಯ ಕಾರ್ಯದರ್ಶಿ ಜಯೇಶ್ ರಂಜನ್, ಮಾಜಿ ಮುಖ್ಯ ಕಾರ್ಯದರ್ಶಿ ಎಸ್. ಕೆ.ಜೋಶಿ, ಮಾಜಿ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಮಹೇಂದರ್ ರೆಡ್ಡಿ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net