ರೈತರಿಗೆ ಸಹಕಾರ ಸಂಗಳಿಂದ ಕಡಿಮೆ ಬಡ್ಡಿದರದಲ್ಲಿ ಸಾಲ

Low interest loans from cooperatives to farmers
Low interest loans from cooperatives to farmers
Published on

ದೇವನಹಳ್ಳಿ:

ರಾಷ್ಟ್ರೀಕೃತ ಬ್ಯಾಂಕ್​ಗಳಲ್ಲಿಯೂ ನೀಡದಷ್ಟು ಸಾಲವನ್ನು ಅತಿ ಕಡಿಮೆ ಬಡ್ಡಿ ದರದಲ್ಲಿ ರೈತರಿಗೆ, ಕುರಿ, ಕೋಳಿ ಹೈನುಗಾರರಿಕೆ ಮಾಡುವವರಿಗೆ ಹಾಗೂ ಸ್ತ್ರೀಶಕ್ತಿ ಸಂಘಗಳ ಅಭಿವೃದ್ಧಿಗಾಗಿ ಸಾಲ ವಿತರಣೆ ಮಾಡಲಾಗುತ್ತಿದೆ ಎಂದು ಬಿಡಿಸಿಸಿ ಬ್ಯಾಂಕ್​ ಜಿಲ್ಲಾ ನಿರ್ದೇಶಕ ಕಾಮೇನಹಳ್ಳಿ ರಮೇಶ್​ ಹೇಳಿದರು.

ಕಸಬಾ ಬೊಮ್ಮವಾರ ಗ್ರಾಮದಲ್ಲಿ ರೈತ ಸಹಕಾರ ಸಂಘದ (ವಿಎಸ್ಸೆಸಸ್ಸೆನ್​) ಆವರಣದಲ್ಲಿ ಬೊಮ್ಮವಾರ, ಅರದೇಶಹಳ್ಳಿ ಹಾಗೂ ಕುಂದಾಣ ವ್ಯಾಪ್ತಿಯ ಫಲಾನುಭವಿಗಳಿಗೆ ಆಯಾ ಸಹಕಾರ ಸಂಘಗಳ ಮೂಲಕ ಒಟ್ಟು ಎರಡೂವರೆ ಕೋಟಿ ರೂ.ಗಳ ಸಾಲದ ಚೆಕ್​ಗಳನ್ನು ವಿತರಿಸಿ ಅವರು ಮಾತನಾಡಿದರು. ರೈತರಿಂದ ರೈತರಿಗಾಗಿಯೇ ಇರುವ ಸಹಕಾರ ಸಂಘವೇ ಹೊರತು ಲಾಭ ಮಾಡುವ ಉದ್ದೇಶದಲ್ಲಿ ಸ್ಥಾಪಿತವಾದದ್ದಲ್ಲ. ಜಮೀನಿನ ಸೂಕ್ತ ದಾಖಲೆ ಒದಗಿಸುವ ರೈತರಿಗೆ 2 ಲಕ್ಷದಿಂದ 25 ಲಕ್ಷ ರೂ.ವರೆಗೂ ಶೇ.3ರ ಬಡ್ಡಿದರಲ್ಲಿ ಸಾಲ ನೀಡಲಾಗವುದು ಎಂದು ಮಾಹಿತಿ ನೀಡಿದರು.
ಬೊಮ್ಮವಾರಕ್ಕೆ ಕೆಸಿಸಿ ಸಾಲ 1ಕೋಟಿ 40 ಲಕ್ಷ ರೂ., ಅರದೇಶಹಳ್ಳಿಗೆ 31 ಲಕ್ಷ ರೂ., ಹಾಗೂ ಕುಂದಾಣ ಸಹಕಾರ ಸಂಗಳಿಗೆ 10 ಲಕ್ಷ 80 ಸಾವಿರ ಎಂಟಿಎಲ್​ ಸಾಲವನ್ನು ನೀಡಲಾಗಿದೆ. 30 ಲಕ್ಷ ರೂ.ಕೆಸಿಸಿ ಸಲ ನೀಡಲಾಗಿದೆ. ಹೈನುಗಾರಿಗಾರಿಕೆಗೆ ಡೇರಿ ಾಮ್​ರ್ಮಾಡುವವರಿಗೆ ಸಾಲ ನೀಡಲಾಗುತ್ತಿದ್ದು, ಇದಕ್ಕೆ ಮಾರ್ಟಿಗೇಜ್​ ಮಾಡುವಂತಿಲ್ಲ ಎಂದರು.
ಟಿಎಪಿಸಿಎಂಎಸ್​ ಅಧ್ಯಕ್ಷ ರಾಮಮೂರ್ತಿ ಮಾತನಾಡಿ, ಬೆಳೆ ಸಾಲ, ಜಾನುವಾರು ಸಾಲ ನೀಡಲಾಗುತ್ತಿದೆ. ಬಲವಂತ ಮಾಡಿದರೂ ಇಂದು ಹೈನುಗಾರರೂ ಸಾಲ ಪಡೆಯಲು ಮುಂದೆ ಬರುತ್ತಿಲ್ಲ. ಎಷ್ಟೇ ಜನ ಬಂದರೂ ನಾವು ಸಾಲ ಕೊಡಿಸಲು ಸಿದ್ಧರಿದ್ದೇವೆ ಎಂದರು.
ಡಿಸಿಸಿ ಬ್ಯಾಂಕ್​ ಉಪಾಧ್ಯಕ್ಷ ಹಿತ್ತರಹಳ್ಳಿ ರಮೇಶ್​, ಬೊಮ್ಮವಾರ ಸಂಘದ ಅಧ್ಯಕ್ಷ ಶಿವಣ್ಣ, ಮಾಜಿ ಅಧ್ಯಕ್ಷ ಟಿ ರವಿ, ಜಿಲ್ಲಾ ಬ್ಯಾಂಕ್​ ನಿರ್ದೇಶಕರಾದ ರಮೇಶ್​, ಎ.ಸಿ. ನಾಗರಾಜ್​, ತಿಮ್ಮರಾಜು, ಅರದೇಶಹಳ್ಳಿವಿಎಸ್ಸೆಸ್ಸೆನ್​ನಿರ್ದೇಶಕ ಮಂಜುನಾಥ್​, ಕುಂದಾಣ ವಿಎಸ್ಸೆಸ್ಸೆನ್​ಸಿಇಒ ರಮೇಶ್​ , ಶಕುಂತಲಮ್ಮ, ಬೊಮ್ಮವಾರ ಚಂದ್ರು, ಮುನೇಗೌಡ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net