ಮಹಿಳಾ ಸಾಂತ್ವನ ಕೇಂದ್ರದಲ್ಲಿ ಪ್ರೇಮಿಗಳ ವಿವಾಹ

ಯಳಂದೂರು ಸಮೀಪದ ಗಂಗವಾಡಿ ವೀರಭದ್ರೇಶ್ವರ ದೇಗುಲದಲ್ಲಿ ಮಳವಳ್ಳಿ ತಾಲೂಕಿನ ಎಂ.ಜಿ. ಮಹೇಶ್ ಹಾಗೂ ಹರ್ಷಿತಾ ಜೋಡಿಗೆ ಮಹಿಳಾ ಸಾಂತ್ವನ ಕೇಂದ್ರದ ವತಿಯಿಂದ ವಿವಾಹ ಮಾಡಿಸಲಾಯಿತು.
ಯಳಂದೂರು ಸಮೀಪದ ಗಂಗವಾಡಿ ವೀರಭದ್ರೇಶ್ವರ ದೇಗುಲದಲ್ಲಿ ಮಳವಳ್ಳಿ ತಾಲೂಕಿನ ಎಂ.ಜಿ. ಮಹೇಶ್ ಹಾಗೂ ಹರ್ಷಿತಾ ಜೋಡಿಗೆ ಮಹಿಳಾ ಸಾಂತ್ವನ ಕೇಂದ್ರದ ವತಿಯಿಂದ ವಿವಾಹ ಮಾಡಿಸಲಾಯಿತು.
Published on
ಯಳಂದೂರು: ಮಳವಳ್ಳಿ ತಾಲೂಕಿನ ಪ್ರೇಮಿಗಳಿಬ್ಬರನ್ನು ಒಂದುಗೂಡಿದ ಘಟನೆಗೆ ಯಳಂದೂರು ಸಾಂತ್ವನ ಕೇಂದ್ರ ಬುಧವಾರ ಸಾಕ್ಷಿಯಾಯಿತು.
ಮಳವಳ್ಳಿ ಪಟ್ಟಣದ ಎಂ.ಜಿ. ಮಹೇಶ್ ಹಾಗೂ ತಾಲೂಕಿನ ಕೊರೆಗಾಲ ಗ್ರಾಮದ ಹರ್ಷಿತಾ ದಾಂಪತ್ಯ ಬದುಕಿಗೆ ಕಾಲಿಟ್ಟರು. ಈ ಹಿಂದೆ ಇಬ್ಬರ ಮದುವೆಗೂ ಪಾಲಕರೇ ಒಪ್ಪಿದ್ದರು. ನಂತರದ ಬೆಳವಣಿಗೆಯಲ್ಲಿ ಕುಟುಂಬಸ್ಥರು ಈ ಮದುವೆ ಬೇಡ ಎಂದು ಹಿಂದೆ ಸರಿದಿದ್ದರು. ಆದರೆ, ಇವರಿಬ್ಬರೂ ಪ್ರೀತಿಸುತ್ತಿದ್ದರಿಂದ ಹಿಂದು ವಿವಾಹ ಕಾನೂನಿನಂತೆ ಮದುವೆಯನ್ನು ರಿಜಿಸ್ಟ್ರಾರ್ ಕೂಡ ಮಾಡಿಸಿದ್ದರು. ಬಳಿಕ ಬುಧವಾರ ಪಟ್ಟಣದಲ್ಲಿರುವ ಮಹಿಳಾ ಸಾಂತ್ವನ ಕೇಂದ್ರಕ್ಕೆ ಹರ್ಷಿತಾ ಮದುವೆ ಮಾಡಿಸಿಕೊಡಿ ಎಂದು ಮನವಿ ಮಾಡಿದ್ದರು. ದಾಖಲೆಗಳನ್ನು ಪರಿಶೀಲಿಸಿದ ಕೇಂದ್ರದ ಆಪ್ತ ಸಮಾಲೋಚಕರು ಸಮೀಪದ ಗಂಗವಾಡಿ ವೀರಭದ್ರೇಶ್ವರ ದೇಗುಲದಲ್ಲಿ ಇವರಿಬ್ಬರಿಗೂ ವಿವಾಹವನ್ನು ಮಾಡಿಸಿದ್ದಾರೆ.

ಮಹಿಳಾ ಸಾಂತ್ವನ ಕೇಂದ್ರ ಆಪ್ತ ಸಮಾಲೋಚಕಿ ಕವಿತಾಮಾತನಾಡಿ, ಇಬ್ಬರ ವಯಸ್ಸಿನ ದಾಖಲೆಗಳು ಹಾಗೂ ಇತರ ದಾಖಲೆಗಳನ್ನು ಪರಿಶೀಲಿಸಲಾಗಿದೆ. ಇಬ್ಬರೂ ಕೂಡ ಪ್ರೀತಿಸುತ್ತಿದ್ದು ದಾಖಲೆಗಳು ಸರಿಯಿದ್ದ ಕಾರಣ ದೇವಸ್ಥಾನದಲ್ಲಿ ಮದುವೆ ಮಾಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಆಪ್ತ ಸಮಾಲೋಚಕಿ ಉಷಾ ಇತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net