ಆರೋಪಿ ರಾಜೀವ್, ಅಂಜಲಿಯನ್ನು ಊಟಕ್ಕೆಂದು ಪೈಪ್‌ಲೈನ್ ರಸ್ತೆಗೆ ಕರೆದಿದ್ದ. ಆ ವೇಳೆ ಮತ್ತೆ ಮದುವೆ ಬಗ್ಗೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಆದರೆ, ಅಂಜಲಿ ಮದುವೆಗೆ ಆಗುವುದಿಲ್ಲ ಎಂದು ಖಡಕ್ ಉತ್ತರ ಕೊಟ್ಟಿದ್ದಕ್ಕೆ ತಾಳ್ಮೆ ಕಳೆದುಕೊಂಡ ರಾಜೀವ್, ಚಾಕುವಿನಿಂದ ಆಕೆಯ ಕುತ್ತಿಗೆಗೆ ಇರಿದಿದ್ದಾನೆ. ತಕ್ಷಣವೇ ಸ್ಥಳೀಯರು ಅಂಜಲಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಯುವತಿ ಮೃತಪಟ್ಟಿದ್ದಾಳೆ.