ಗುಂಡ್ಲುಪೇಟೆಯಲ್ಲಿ ಸಂಭ್ರಮಾಚರಣೆ

ಗುಂಡ್ಲುಪೇಟೆ ಪಟ್ಟಣದ ಪ್ರವಾಸಿಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಎಸ್.ರಘು ಮಾತನಾಡಿದರು. ರಾಜು, ಬಸವರಾಜು, ವಿಶ್ವ, ಜವರೇಗೌಡ ಇದ್ದರು.
ಗುಂಡ್ಲುಪೇಟೆ ಪಟ್ಟಣದ ಪ್ರವಾಸಿಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಎಸ್.ರಘು ಮಾತನಾಡಿದರು. ರಾಜು, ಬಸವರಾಜು, ವಿಶ್ವ, ಜವರೇಗೌಡ ಇದ್ದರು.
Published on
ಗುಂಡ್ಲುಪೇಟೆ: ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು 7 ವರ್ಷ 239 ದಿನ ಪೂರೈಸಿದ ಹಿನ್ನೆಲೆಯಲ್ಲಿ ಅಹಿಂದ ಒಕ್ಕೂಟ ಮತ್ತು ತಾಲೂಕು ಕುರುಬ ಸಮಾಜದ ವತಿಯಿಂದ ಬುಧವಾರ ಪಟ್ಟಣದಲ್ಲಿ ಸಂಭ್ರಮಾಚರಣೆ ಹಾಗೂ 2 ಸಾವಿರ ಜನರಿಗೆ ನಾಟಿಕೋಳಿಯಿಂದ ಸಿದ್ಧ್ದಪಡಿಸಿದ ಬಿರಿಯಾನಿ ವಿತರಣೆ ಮಾಡಲಾಯಿತು.

ಪಟ್ಟಣ ಸೇರಿದಂತೆ ತಾಲೂಕಿನ ನಾನಾ ಗ್ರಾಮಗಳಿಂದ ಬಂದಿದ್ದ ಸಮಾಜದವರು ಕೈಯಲ್ಲಿ ಸಿದ್ದರಾಮಯ್ಯ ಅವರ ಫೋಟೋ ಹಿಡಿದು ಜಯಘೋಷ ಮೊಳಗಿಸಿದರು.

ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ ಮಾತನಾಡಿ, ಅಹಿಂದ ವರ್ಗಗಳ ನಾಯಕರಾದ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಎಲ್ಲ ಹಿಂದುಳಿದ ವರ್ಗಗಳ ಜನತೆಗೆ ನ್ಯಾಯ ಒದಗಿಸುತ್ತಿದ್ದಾರೆ. ಪಂಚ ಗ್ಯಾರಂಟಿ ನೀಡುವ ಮೂಲಕ ಎಲ್ಲ ವರ್ಗಗಳ ಜನರಿಗೂ ಸರ್ಕಾರದ ಸವಲತ್ತು ತಲುಪಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ ಮುಂದುವರಿಸಬೇಕು ಎಂಬುದು ಜನತೆಯ ಆಸೆಯಾಗಿದೆ ಎಂದು ಹೇಳಿದರು.

ಪಟ್ಟಣದ ಮಡಹಳ್ಳಿ ವೃತ್ತದಿಂದ ಪ್ರಮುಖ ಬೀದಿಗಳಲ್ಲಿ ಊಟಿ ರಸ್ತೆಯಲ್ಲಿರುವ ಕನಕ ಭವನದವರೆಗೆ ಮೆರವಣಿಗೆ ಸಾಗಿದರು. ಕನಕ ಭವನದ ಬಳಿ ಸಿದ್ಧಪಡಿಸಿದ್ದ ನಾಟಿ ಕೋಳಿ ಬಿರಿಯಾನಿಯನ್ನು ಅಂದಾಜು 2 ಸಾವಿರ ಜನರಿಗೆ ವಿತರಣೆ ಮಾಡಲಾಯಿತು.
ಮುಖಂಡರಾದ ಎಸ್.ರಘು, ಎಚ್.ಎನ್.ಬಸವರಾಜು, ಜಿ.ಎಲ್.ರಾಜು, ವಿಶ್ವ, ಜವರೇಗೌಡ ಸೇರಿದಂತೆ ಹಲವು ಮುಖಂಡರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net