ಲೋಕಾ ಬಲೆ| ಫೋನ್ ಪೇ ಮೂಲಕ ಹಣ ಪಡೆದಿದ್ದ ರಫಿಕಾ ಹಳ್ಳೂರು?

Rafika Halluru
Rafika Halluru
Published on
ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಅಧಿಕಾರಿ ರಫಿಕಾ ಹಳ್ಳೂರು ಲೋಕಾ ಬಲೆಗೆ
ಮಕ್ಕಳ ರಕ್ಷಣಾ ಅಧಿಕಾರಿ ರಫಿಕಾ ಹಳ್ಳೂರು ಅವರು ನೇರವಾಗಿ ಭಾಗಿ ಆಗದೇ ತನ್ನ ಕಾರು ಚಾಲಕನನ್ನು ಲಂಚ ಪಡೆಯಲು ಕಳುಹಿಸಿದ್ದಾರೆ. ಈ ಸಮಯದಲ್ಲಿ ರಫಿಕಾ ಹಳ್ಳೂರು ಕಚೇರಿಯಲ್ಲಿ ಇದ್ದರು. ಕಚೇರಿ ಆವರಣದಲ್ಲಿ ಕಾರು ಚಾಲಕ ಮೌಲಾನಾ ಕಚೇರಿ ಕೆಲಸಕ್ಕಾಗಿ ಗುತ್ತಿಗೆ ಪಡೆದ ಕಾರಿನಲ್ಲಿ ಕುಳಿತು ಲಂಚದ ವ್ಯವಹಾರ ಖುದರಿಸಿದ್ದಾನೆ. ಈ ವೇಳೆ ಹೊರ ಗುತ್ತಿಗೆ ನೌಕರ ಕಾರಿನಲ್ಲಿ 15 ಸಾವಿರ ರೂ. ಇಟ್ಟಿದ್ದಾನೆ. ಈ ವಿಷಯವನ್ನು ಕಾರು ಚಾಲಕ ಮೌಲಾನಾ ಕಚೇರಿಯಲ್ಲಿ ಕುಳಿತ ರಫಿಕಾ ಹಳ್ಳೂರು ಅವರಿಗೆ ತಿಳಿಸಿದ್ದಾನೆ. ಮೌಲಾನಾ ಮತ್ತು ರಫಿಕಾ ಅವರ ನಡುವಿನ ಮಾತುಕತೆ ನಂತರ ಮೆಡಮ್(ರಫಿಕಾ) ಅವರಿಗೆ ನಿವೇ(ಗುತ್ತಿಗೆ ನೌಕರ) ಫೋನ್ ಪೇ ಮಾಡಿ ಎಂದು ಮೌಲಾನಾ ತಿಳಿಸಿದ್ದಾನೆ. ಅದೇ ರೀತಿ ಹೊರ ಗುತ್ತಿಗೆ ನೌಕರನ್ನು ಮಕ್ಕಳ ರಕ್ಷಣಾ ಅಧಿಕಾರಿ ರಫಿಕಾ ಅವರಿಗೆ 15 ಸಾವಿರ ರೂ. ಫೋನ್ ಪೇ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಮೌಲಾನಾ

ಕೋಟ್:
ಲೋಕಾಯುಕ್ತ ದಾಳಿ ಬಗ್ಗೆ ಗೊತ್ತಾಗಿದೆ. ಇಲಾಖೆ ವ್ಯಾಪ್ತಿಯಲ್ಲಿ ವಿಚಾರಿಸಲಾಗುವುದು. ಲೋಕಾ ಪ್ರಕರಣ ಆಗಿರುವುದರಿಂದ ಮೇಲಾಧಿಕಾರಿಗಳಿಗೆ ತಿಳಿಸಿ ಮಾಹಿತಿ ನೀಡಲಾಗುವುದು.
ರಾಧಾ ಮಣ್ಣೂರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net