ಬಿರಿಯಾನಿಯಲ್ಲಿ ಹಲ್ಲಿ ಪತ್ತೆ!

Lizard found in biryani!
Lizard found in biryani!
Published on
ಬಂಗಾರಪೇಟೆ: ಪಟ್ಟಣದ ಬಿಜಿಟಿ ಮಾಂಸಾಹಾರಿ ಹೋಟೆಲ್​ನಲ್ಲಿ ಮಂಗಳವಾರ ಮಹಿಳೆ ಖರೀದಿಸಿದ್ದ ಬಿರಿಯಾನಿಯಲ್ಲಿ ಸತ್ತ ಹಲ್ಲಿ ಪತ್ತೆಯಾದ ವಿಷಯ ತಿಳಿದು ಬುಧವಾರ ಆಹಾರ ಭದ್ರತಾ ಅಧಿಕಾರಿ ಪ್ರತಿಶ್​ ರೆಡ್ಡಿ ಹೋಟೆಲ್​ಗೆ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಹೋಟೆಲ್​ ಮಾಲೀಕ ರವಿ ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು.

ಕೋಲಾರದ ಆಸ್ಪತ್ರೆಗೆ ದಾಖಲು

ನೇರಳೆಕೆರೆ ಗ್ರಾಮದ ಲಲಿತಾ ಮಂಗಳವಾರ ಸಂಜೆ 4.30ಕ್ಕೆ ನಗರದ ಮುರುಗರ್​ ದೇವಸ್ಥಾನ ಪಕ್ಕದ ಹೋಟೆಲ್​ಗೆ ಬಂದು ಬಿರಿಯಾನಿ ಆರ್ಡರ್​ ಮಾಡಿ ಅರ್ಧದಷ್ಟು ಬಿರಿಯಾನಿ ಸೇವಿಸಿದ ಬಳಿಕ ಸತ್ತ ಹಲ್ಲಿ ಪತ್ತೆಯಾಗಿತ್ತು. ಹಲ್ಲಿ ಕಂಡ ತಕ್ಷಣ ಹೋಟೆಲ್​ ಮಾಲೀಕ ರವಿಯ ಗಮನಕ್ಕೆ ತಂದಿದ್ದಾರೆ. ಈ ವೇಳೆ ಮಾಲೀಕರು ಪ್ಲೇಟ್​ನಿಂದ ಹಲ್ಲಿ ತೆಗೆದುಹಾಕಿ, ಮತ್ತೊಂದು ಬಿರಿಯಾನಿ ತಂದು ನೀಡಿದ್ದರು. ಆದರೆ ಹಲ್ಲಿ ಕಂಡ ಆಘಾತದಿಂದ ಲಲಿತಾಗೆ ವಾಂತಿ ಕಾಣಿಸಿಕೊಂಡಿದ್ದು, ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಸ್ಥಳಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಎಸ್​.ಎನ್​ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಇದುವರೆಗೂ ಮಾನವೀಯತೆಯಿಂದಾದರೂ ಹೋಟೆಲ್​ ಮಾಲೀಕ ಆಸ್ಪತ್ರೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿಲ್ಲ.

ಬಿರಿಯಾನಿ ಸೇವಿಸಿದ ನೇರಳೆಕೆರೆ ಗ್ರಾಮದ ಲಲಿತಾ ವಾಂತಿ, ಭೇದಿಯಿಂದ ಆಸ್ಪತ್ರೆಗೆ ದಾಖಲಾದ ಹಿನ್ನೆಲೆಯಲ್ಲಿ ತನಿಖೆ ಪೂರ್ಣಗೊಳ್ಳುವವರೆಗೆ ಹೋಟೆಲ್​ ಬಂದ್​ ಮಾಡುವಂತೆ ಅಧಿಕಾರಿ ಸೂಚನೆ ನೀಡಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಮಾಲೀಕ, ಹೋಟೆಲ್​ ಮುಚ್ಚಿದರೆ ಆಹಾರ ವ್ಯರ್ಥವಾಗುತ್ತದೆ. ಮುಚ್ಚಲು ಸಾಧ್ಯವಿಲ್ಲ ಎಂದು ವಾದಿಸಿದರು. ಅಧಿಕಾರಿಗಳು ಕಾನೂನು ನಿಯಮ ಉಲ್ಲೇಖಿಸಿ ಹೋಟೆಲ್​ ಮುಚ್ಚಲೇಬೇಕೆಂದು ಸೂಚಿಸಿದ ಬಳಿಕ ಅನಿವಾರ್ಯವಾಗಿ ಹೋಟೆಲ್​ ಬಂದ್​ ಮಾಡಿದರು.
ಹೋಟೆಲ್​ ಮುಚ್ಚಲು ಹೇಳಿದಕ್ಕೆ ಆಹಾರ ಭದ್ರತಾ ಅಧಿಕಾರಿ ಪ್ರತಿಶ್​ ರೆಡ್ಡಿ ಮತ್ತು ಬಿಜಿಟಿ ಹೋಟೆಲ್​ ಮಾಲೀಕ ರವಿ ಮಧ್ಯೆ ಮಾತಿನ ಚಕಮಕಿ ನಡೆಯಿತು.

ಹೋಟೆಲ್​ ರ್ನಿಲಕ್ಷ$್ಯದಿಂದ ಆರೋಗ್ಯಕ್ಕೆ ತೊಂದರೆಯಾಗಿದೆ. ಆಹಾರ ಸುರಕ್ಷತಾ ನಿಯಮ ಉಲ್ಲಂಘಿಸಿರುವ ಹೋಟೆಲ್​ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಿ, ಕಾನೂನು ಕ್ರಮ ಕೈಗೊಳ್ಳಬೇಕು.

— ಲಲಿತಾ ಬಿರಿಯಾನಿ ತಿಂದು ಅಸ್ವಸ್ಥಗೊಂಡ ಮಹಿಳೆ
ಅಧಿಕಾರಿಗಳ ಪರಿಶೀಲನೆ ವೇಳೆ ಹೋಟೆಲ್​ ಸಿಸಿ ಕ್ಯಾಮರಾ ದೃಶ್ಯಾವಳಿ ಕೇಳಿದಾಗ, ಕ್ಯಾಮರಾ ಒಂದು ವಾರದಿಂದ ಕೆಟ್ಟು ಹೋಗಿದ್ದು, ರಿಪೇರಿಗೆ ನೀಡಲಾಗಿದೆ ಎಂದಿರುವ ಮಾಲೀಕನ ಮಾತುಗಳಿಂದ ಪ್ರಕರಣ ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿವೆ.
ಪೌರಾಯುಕ್ತ ಸತ್ಯಪ್ರಕಾಶ್​, ಸಿಪಿಐ ರವಿಕುಮಾರ್​, ಪುರಸಭೆ ಸಿಬ್ಬಂದಿ ಪರಿಶೀಲನೆ ನಡೆಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net