ಹಳೇ ಉಪ್ಪಾರಹಳ್ಳಿಯಲ್ಲಿ ಪಶು ಆರೋಗ್ಯ ಶಿಬಿರ

ಗೌರಿಬಿದನೂರು ತಾಲೂಕಿನ ಹಳೇ ಉಪ್ಪಾರಹಳ್ಳಿಯಲ್ಲಿ  ಪಶು ಆರೋಗ್ಯ ತಪಾಸಣಾ ಶಿಬಿರ ಹಾಗೂ ಮಿಶ್ರ ತಳಿ ಕರುಗಳ ಪ್ರದರ್ಶನದಲ್ಲಿ ಜಿಕೆವಿಕೆ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಜಿಪಂ ಮಾಜಿ ಅಧ್ಯರಾದ ಎಚ್​.ವಿ.ಮಂಜುನಾಥ್​, ಸಿ.ಆರ್​. ನರಸಿಂಹಮೂರ್ತಿ ಹಾಗೂ ಪಶುವೈದ್ಯಾಧಿಕಾರಿಗಳು, ಸಿಬ್ಬಂದಿ ಇದ್ದರು.
ಗೌರಿಬಿದನೂರು ತಾಲೂಕಿನ ಹಳೇ ಉಪ್ಪಾರಹಳ್ಳಿಯಲ್ಲಿ ಪಶು ಆರೋಗ್ಯ ತಪಾಸಣಾ ಶಿಬಿರ ಹಾಗೂ ಮಿಶ್ರ ತಳಿ ಕರುಗಳ ಪ್ರದರ್ಶನದಲ್ಲಿ ಜಿಕೆವಿಕೆ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಜಿಪಂ ಮಾಜಿ ಅಧ್ಯರಾದ ಎಚ್​.ವಿ.ಮಂಜುನಾಥ್​, ಸಿ.ಆರ್​. ನರಸಿಂಹಮೂರ್ತಿ ಹಾಗೂ ಪಶುವೈದ್ಯಾಧಿಕಾರಿಗಳು, ಸಿಬ್ಬಂದಿ ಇದ್ದರು.
Published on
ಗೌರಿಬಿದನೂರು : ಜಿಕೆವಿಕೆ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ತಾಲೂಕಿನ ಹಳೇ ಉಪ್ಪಾರಹಳ್ಳಿಯಲ್ಲಿ ವತ್ಸಲಾ ಪಶುಗಳ ಆರೋಗ್ಯ ಮತ್ತು ಕಲ್ಯಾಣಕ್ಕಾಗಿ ಮಮತೆಯ ಹೆಜ್ಜೆ ಎಂಬ ಪಶು ಆರೋಗ್ಯ ತಪಾಸಣಾ ಶಿಬಿರ ಹಾಗೂ ಮಿಶ್ರ ತಳಿ ಕರುಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.
ಶಿಬಿರದಲ್ಲಿ ಪಶುವೈದ್ಯರು ಉಚಿತ ಆರೋಗ್ಯ ತಪಾಸಣೆ, ಚಿಕಿತ್ಸೆ ಹಾಗೂ ಔಷಧ ವಿತರಣೆ ಮಾಡಿದರು. ಚರ್ಮ ಗಂಟು ರೋಗಕ್ಕೆ ಎಲ್​ಎಚ್​ಡಿ ಲಸಿಕೆ ಮತ್ತು ಕುರಿಗಳಿಗೆ ಜಂತುನಾಶಕ ಔಷಧ ನೀಡಲಾಯಿತು. ಒಟ್ಟು 43 ಹಸು, 26 ಕರು ಹಾಗೂ 350ಕ್ಕೂ ಹೆಚ್ಚು ಕುರಿ&ಮೇಕೆಗಳಿಗೆ ತಪಾಸಣೆ ಮಾಡಿ ಚಿಕಿತ್ಸೆ ನೀಡಲಾಯಿತು.
ಅತಿಥಿಗಳು ಎತ್ತಿನ ಗಾಡಿಯಲ್ಲಿ ವೇದಿಕೆಗೆ ಆಗಮಿಸಿ ಗಮನಸೆಳೆದರು.68 ತಿಂಗಳ ಮಿಶ್ರ ತಳಿ ಕರುಗಳ ಪ್ರದರ್ಶನ ವಿಶೇಷ ಆಕರ್ಷಣೆಯಾಗಿತ್ತು.
12 ರೈತರಿಗೆ ಖನಿಜ ಮಿಶ್ರಣ ಹಾಗೂ ಪಶುಸಂಗೋಪನೆ ಮಾಹಿತಿ ಪುಸ್ತಕ ಮತ್ತು ಇತರರಿಗೆ ಸಮಾಧಾನಕರ ಬಹುಮಾನ ವಿತರಿಸಲಾಯಿತು.
ಜಿಪಂ ಮಾಜಿ ಅಧ್ಯ ಎಚ್​.ವಿ.ಮಂಜುನಾಥ್​ ಮಾತನಾಡಿ, ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮವು ವಿದ್ಯಾರ್ಥಿಗಳ ಕಲಿಕೆಯೊಂದಿಗೆ ರೈತರಿಗೆ ವೈಾನಿಕ ಮಾಹಿತಿ ತಲುಪಿಸುವ ಪರಿಣಾಮಕಾರಿ ವೇದಿಕೆಯಾಗಿದೆ.
ಹವಾಮಾನ ವೈಪರೀತ್ಯ ನೀರಿನ ಅಭಾವ ಹಾಗೂ ಹೆಚ್ಚುತ್ತಿರುವ ಉತ್ಪಾದನಾ ವೆಚ್ಚದ ನಡುವೆ ಹೊಸ ತಂತ್ರಾನಗಳ ಅಳವಡಿಕೆ ಅಗತ್ಯ ಎಂದು ಪ್ರತಿಪಾದಿಸಿದರು.
ಜಿಪಂ ಮಾಜಿ ಅಧ್ಯ ಸಿ.ಆರ್​.ನರಸಿಂಹಮೂರ್ತಿ ಮಾತನಾಡಿ, ಕಡಿಮೆ ಮಳೆ ಹಿನ್ನೆಲೆಯಲ್ಲಿ ಪರ್ಯಾಯ ಬೆಳೆ, ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳುವಂತೆ ರೈತರಿಗೆ ಸಲಹೆ ನೀಡಿದರು.
ತಾಲೂಕು ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ಎಚ್​.ಮಾರುತಿ, ಪಶುವೈದ್ಯರಾದ
ಡಾ.ಸವಿತಾ, ಡಾ.ಎ.ಜೆ.ಶಂಕರೇಗೌಡ, ಡಾ.ರಾವೇಂದ್ರ ಸೇರಿದಂತೆ ಗ್ರಾಮದ ಮುಖಂಡರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net