ಭಿನ್ನಾಭಿಪ್ರಾಯ ದೂರ ಮಾಡಿಕೊಂಡು ಜೀವಿಸಿ / ANEKAL

ಆನೇಕಲ್​ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ರಾಜ್ಯೋತ್ಸವ ಮತ್ತು ಕನಕದಾಸ ಜಯಂತಿಯಲ್ಲಿ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಂ.ಬಿ.ಶೇಖರ, ಗ್ರಂಥಪಾಲಕಿ ಎಂ.ಕೋಕಿಲಾ, ಸಿಬ್ಬಂದಿ ಡಾ.ಕೆ.ವಿ.ಲತಾ, ಕೆ.ವಿ.ನೇತ್ರಾವತಿ, ಡಿ.ಮಂಜುಶ್ರೀ ಇದ್ದರು.

Published on
ಆನೇಕಲ್​: ಕನಕದಾಸರ ಜೀವನ, ಕೀರ್ತನೆಗಳು ಮಾನವೀಯ ಸಂದೇಶಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದು ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಬಿ.ಎಸ್​.ಅರವಿಂದ್​ ಹೇಳಿದರು.
ಪಟ್ಟಣದ ಡಾ.ಎಸ್​.ಗೋಪಾಲರಾಜು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ರಾಜ್ಯೋತ್ಸವ ಮತ್ತು ಕನಕದಾಸ ಜಯಂತಿಯಲ್ಲಿ ಮಾತನಾಡಿದ ಅವರು, ಭಿನ್ನಾಭಿಪ್ರಾಯ ದೂರ ಮಾಡಿಕೊಂಡು ಜೀವಿಸಬೇಕು ಎಂಬ ಗುಣವನ್ನು ಪ್ರತಿಯೊಬ್ಬರೂ ಮೈಗೂಡಿಕೊಳ್ಳಬೇಕು ಎಂದರು.
ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ವಿ.ರಾಮಕೃಷ್ಣಪ್ಪ ಮಾತನಾಡಿ, ರಾಜ್ಯೋತ್ಸವದ ಮಹತ್ವ, ನಾಡು-ನುಡಿಯ ಗೌರವ ಹಾಗೂ ಹೊಣೆಗಾರಿಕೆ ಬಗ್ಗೆ ತಿಳಿಸಿದರು. ಕಾಲೇಜಿನ "ಅರಳಿ ಕಟ್ಟೆ' ರಂಗಕಲಾ ತಂಡದ ವಿದ್ಯಾರ್ಥಿಗಳು " ಕರ್ನಾಟಕ ರಾಜ್ಯೋತ್ಸವ ' ವಿಷಯದ ಮೇಲೆ ನಾಟಕ ಪ್ರದರ್ಶಿಸಿದರು.
ನಾಟಕವು ರಾಜ್ಯವನ್ನು ಸ್ವಚ್ಛವಾಗಿ ಮತ್ತು ಸುಂದರವಾಗಿ ಇಡುವತ್ತ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಎಂದರು. ಕಚೇರಿ ಸಿಬ್ಬಂದಿ ಎಂ.ಲೋಕೇಶ, ವಕೀಲ ಪುರುಷೋತಮ್​ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net